ವಿದೇಶಗಳಿಂದ ಬರುವ ಪ್ರಯಾಣಿಕರು ಈ ಸೂಚನೆಗಳನ್ನು ಪಾಲಿಸಲೇಬೇಕು ! 

03-09-20 09:53 am       Headline Karnataka News Network   ದೇಶ - ವಿದೇಶ

ತಾಯ್ನಾಡಿಗೆ ಮರಳುವ ಮುನ್ನ ಭಾರತೀಯ ನಾಗರಿಕರು ಅಧಿಕೃತ ವೆಬ್ ಸೈಟ್ ನಲ್ಲಿ "ಏರ್ ಸುವಿಧಾ ಸ್ವಯಂ-ವರದಿ ಫಾರ್ಮ್' ಅನ್ನು ಭರ್ತಿ ಮಾಡಬೇಕಾಗುತ್ತದೆ.

ಮಂಗಳೂರು, ಸೆಪ್ಟೆಂಬರ್ 3: ವಿದೇಶಗಳಿಂದ ಮಂಗಳೂರಿಗೆ ಮರಳುವ ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಿದೆ.

ತಾಯ್ನಾಡಿಗೆ ಮರಳುವ ಮುನ್ನ ಭಾರತೀಯ ನಾಗರಿಕರು ಅಧಿಕೃತ ವೆಬ್ ಸೈಟ್ ನಲ್ಲಿ "ಏರ್ ಸುವಿಧಾ ಸ್ವಯಂ-ವರದಿ ಫಾರ್ಮ್' ಅನ್ನು ಭರ್ತಿ ಮಾಡಬೇಕಾಗುತ್ತದೆ. (https: //www.newdelhiairport.in/airsuvidha/APHO-registration) ಅಲ್ಲದೆ, ಪ್ರಯಾಣಿಕರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ಏರುವ ಮುನ್ನ ಆಯಾ ವಿಮಾನ ನಿಲ್ದಾಣಗಳಲ್ಲಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಅಲ್ಲದೆ,
ಎಲ್ಲ ಪ್ರಯಾಣಿಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್, ಕ್ವಾಂಟೈನ್ ವಾಚ್ ಮತ್ತು ಆಪ್ತಮಿತ್ರ ಎಂಬ ಮೂರು ಆ್ಯಪ್ ಗಳನ್ನು ಅಳವಡಿಸಿ ಕೊಳ್ಳಬೇಕು ಎಂದು ಆದೇಶ ನೀಡಲಾಗಿದೆ. 

ಪ್ರಯಾಣಿಕರು ಅನುಸರಿಸಬೇಕಾದ ಇತರೇ ಸೂಚನೆಗಳು 

1. ಪ್ರಯಾಣಿಕರು ಭಾರತದಲ್ಲಿ ಸಕ್ರಿಯವಾಗಿರುವ ಸಿಮ್ ಕಾರ್ಡ್ ಹೊಂದಿರಬೇಕು. 

2. ಪ್ರಯಾಣಿಕರಲ್ಲಿ ಸ್ಥಳೀಯ ಸಿಮ್ ಇಲ್ಲದಿದ್ದರೆ, ತಮ್ಮ ಕುಟುಂಬ ಸದಸ್ಯರ ಮೂಲಕ ಸ್ಥಳೀಯ ಸಿಮ್ ಪಡೆದಿರಬೇಕು. 

4. ಪ್ರಯಾಣಿಕರು ಮಂಗಳೂರಿಗೆ ಬರುವ ಮೊದಲು ಸಿಮ್ ಅನ್ನು  ಸಕ್ರಿಯಗೊಳಿಸಿರ ಬೇಕು.

3. ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕೂಡ ಹೊಸ ಸಿಮ್ ಗಳನ್ನು ಪಡೆಯಲು ಅವಕಾಶ ಇದೆ.

Join our WhatsApp group for latest news updates