ಲಸಿಕೆ ಪಡೆಯಲು ಗಲಾಟೆ ; ಮೊಗ್ರಾಲ್ ನಲ್ಲಿ ಹೊಡೆದಾಡಿದ ಯುವಕರು, ವಿಡಿಯೋ ವೈರಲ್ !

31-07-21 01:01 pm       Headline Karnataka News Network   ದೇಶ - ವಿದೇಶ

ಕೊರೊನಾ ಲಸಿಕೆ ವಿಚಾರದಲ್ಲಿ ಯುವಕರು ಹೊಡೆದಾಡಿಕೊಂಡ ಘಟನೆ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. 

ಕಾಸರಗೋಡು, ಜುಲೈ 31: ಕೊರೊನಾ ಲಸಿಕೆ ವಿಚಾರದಲ್ಲಿ ಯುವಕರು ಹೊಡೆದಾಡಿಕೊಂಡ ಘಟನೆ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. 

ಮೊಗ್ರಾಲ್ ಪುತ್ತೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ಲಸಿಕೆ ನೀಡಲಾಗುತ್ತಿತ್ತು. ಮೊಗ್ರಾಲ್ ಪಂಚಾಯತ್ ವ್ಯಾಪ್ತಿಯ ಮೊದಲ ಮತ್ತು ಎರಡನೇ ವಾರ್ಡಿನ ವರಿಗೆ ಶುಕ್ರವಾರ ವ್ಯಾಕ್ಸಿನ್ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಬೇರೆ ವಾರ್ಡಿನವರು ಕೂಡ ಲಸಿಕೆ ಪಡೆಯಲು ಬಂದಿದ್ದರು.‌

ಇದೇ ವಿಚಾರದಲ್ಲಿ ಮಾತಿನ ಚಕಮಕಿ ನಡೆದು ಹೊಯ್ ಕೈ ನಡೆದಿದೆ. ಯುವಕರ ಗುಂಪು ಪರಸ್ಪರ ಹೊಡೆದಾಡಿದ್ದು ಇದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು ಲಸಿಕೆಗಾಗಿ ಹೊಡೆದಾಟ ನಡೆಸಿದರೇ ಅನ್ನುವ ಅನುಮಾನ ಹುಟ್ಟುವಂತಾಗಿದೆ. 

ಹೊಡೆದಾಟ ಘಟನೆಯಿಂದಾಗಿ ಕೆಲವು ಗಂಟೆಗಳ ಕಾಲ ವ್ಯಾಕ್ಸಿನ್ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಬಳಿಕ ಪೊಲೀಸರ ಭದ್ರತೆಯಲ್ಲಿ ವ್ಯಾಕ್ಸಿನ್ ನೀಡಲಾಯಿತು.

Kasaragod fight erupts at the vaccination centre in Mogral Puthur. Video goes viral on social media