ಮುಂಬೈ, ನಾಸಿಕ್ ನಲ್ಲಿ ಭೂಕಂಪದ ಅನುಭವ, ಬೆದರಿ ಹೊರಗೋಡಿದ ಜನ ! 

05-09-20 11:49 am       Headline Karnataka News Network   ದೇಶ - ವಿದೇಶ

ಉತ್ತರ ಮುಂಬೈನಲ್ಲಿ ಇಂದು ಬೆಳಗ್ಗೆ ಭೂಕಂಪ ಸಂಭವಿಸಿದ್ದು ಜನ ಗಾಬರಿಗೊಂಡು ಮನೆಗಳಿಂದ ಹೊರಕ್ಕೆ ಓಡಿಬಂದಿದ್ದಾರೆ.

ಮುಂಬೈ , ಸೆಪ್ಟೆಂಬರ್ 5: ಮಹಾರಾಷ್ಟ್ರದಲ್ಲಿ 12 ಗಂಟೆಗಳ ಮಧ್ಯೆ ಎರಡನೇ ಬಾರಿಗೆ ಭೂಕಂಪ ಸಂಭವಿಸಿದೆ. ಉತ್ತರ ಮುಂಬೈನಲ್ಲಿ ಇಂದು ಬೆಳಗ್ಗೆ ಭೂಕಂಪ ಸಂಭವಿಸಿದ್ದು ಜನ ಗಾಬರಿಗೊಂಡು ಮನೆಗಳಿಂದ ಹೊರಕ್ಕೆ ಓಡಿಬಂದಿದ್ದಾರೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 2.7 ಎಂದು ಗುರುತಿಸಲಾಗಿದೆ. 

ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಭೂಕಂಪದ ಅನುಭವ ಆಗಿತ್ತು. ಸತತ ಎರಡು ಬಾರಿ ಭೂಕಂಪದ ಅನುಭವ ಆಗಿದ್ದು ನಾಸಿಕ್ ಜನರನ್ನು ಭೀತಿಗೊಳಿಸಿತ್ತು.

ಕಳೆದ ತಿಂಗಳಲ್ಲಿಯೂ ಮಹಾರಾಷ್ಟ್ರದ ಪಾಲ್ಘರ್ ಎಂಬಲ್ಲಿ ಸಣ್ಣಮಟ್ಟಿನ ನಡುಕ ಉಂಟಾಗಿತ್ತು. ಅದರ ತೀವ್ರತೆ 2.8ರಷ್ಟಿತ್ತು ಎನ್ನಲಾಗಿದೆ. ಹೀಗಾಗಿ ಯಾವುದೇ ಸಾವು- ನೋವು ಆಗಿರಲಿಲ್ಲ. ಆದರೆ, ಈಗ ಮತ್ತೆ ಭೂಕಂಪದ ಮರುಕಳಿಕೆ ಆಗಿರುವುದು ಮಹಾರಾಷ್ಟ್ರದಲ್ಲಿ ಮತ್ತೆ ಭೀತಿ ಆವರಿಸಿದೆ. 

ಈ ಹಿಂದೆ, ಗುಜರಾತಿನ ಕಛ್ ಮತ್ತು ಮಹಾರಾಷ್ಟ್ರದ ಲಾತೂರಿನಲ್ಲಿ ಭೂಕಂಪ ಸಂಭವಿಸಿದ್ದ ದೊಡ್ಡ ಮಟ್ಟದ ಹಾನಿ ಆಗಿತ್ತು.

Join our WhatsApp group for latest news updates