ಬ್ರೇಕಿಂಗ್ ನ್ಯೂಸ್
10-11-21 01:55 pm Headline Karnataka News Network ದೇಶ - ವಿದೇಶ
ಲಂಡನ್, ನ 10: ಪಾಕಿಸ್ತಾನದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮತ್ತು ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸುಫ್ ಝಾಯಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದಾರೆ. ಟ್ವಿಟ್ಟರ್ ಮೂಲಕ ತಮ್ಮ ವಿವಾಹದ ಸುದ್ದಿಯನ್ನು ಶಿಕ್ಷಣ ಕಾರ್ಯಕರ್ತೆ ಮಲಾಲ ಹಂಚಿಕೊಂಡಿದ್ದಾರೆ. ತಾವು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಸಣ್ಣ ಸಮಾರಂಭದಲ್ಲಿ ವಿವಾಹವಾಗಿದ್ದೇವೆ ಎಂದು ಬಹಿರಂಗಪಡಿಸಿದ್ದಾರೆ. "ಇಂದು ನನ್ನ ಜೀವನದಲ್ಲಿ ಅಮೂಲ್ಯವಾದ ದಿನ. ಅಸ್ಸರ್ ಮತ್ತು ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟೆದ್ದೇವೆ. ನಾವು ನಮ್ಮ ಕುಟುಂಬಗಳೊಂದಿಗೆ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಮನೆಯಲ್ಲಿ ಸಣ್ಣ ನಿಕ್ಕಾ ಸಮಾರಂಭವನ್ನು ಆಚರಿಸಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆಗಳನ್ನು ನಮಗೆ ಕಳುಹಿಸಿ. ಮುಂದಿನ ಪ್ರಯಾಣದಲ್ಲಿ ನಾವು ಒಟ್ಟಿಗೆ ನಡೆಯಲು ಬಯಸಿದ್ದೇವೆ" ಎಂದು ಮಲಾಲ ಬರೆದಿದ್ದಾರೆ.
ಈ ಪೋಸ್ಟ್‌ನ ಹೊರತಾಗಿ, ಮಲಾಲಾ ಅವರು ನಿಕ್ಕಾ ಸಮಾರಂಭದ ನಾಲ್ಕು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ತಮ್ಮ ಪತಿ ಅಸ್ಸರ್ ಮತ್ತು ಅವರ ಪೋಷಕರು ಜಿಯಾವುದ್ದೀನ್ ಯೂಸುಫ್‌ಜಾಯ್ ಮತ್ತು ತೂರ್ ಪೆಕೈ ಯೂಸುಫ್‌ಜಾಯ್ ಅವರೊಂದಿಗೆ ಪೋಸ್ ನೀಡುವುದನ್ನು ಕಾಣಬಹುದು. ವೆಡ್ಡಿಂಗ್ ಡೇಗೆ ಮಲಾಲಾ ಚಿನ್ನದ ಕಸೂತಿಯಿಂದ ಅಲಂಕರಿಸಲ್ಪಟ್ಟ ಗುಲಾಬಿ ಬಣ್ಣದ ಉಡುಪನ್ನು ಧರಿಸಿದ್ದರು. ನಿಕ್ಕಾ ಚಿತ್ರಗಳನ್ನು ಆಕೆಯ ಸ್ನೇಹಿತ, ಛಾಯಾಗ್ರಾಹಕ ಮತ್ತು ದೃಶ್ಯ ಪತ್ರಕರ್ತರಾದ ಮಲಿನ್ ಫೆಜೆಹೈ ಅವರು ಸೆರೆಹಿಡಿದಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣದ ಕಾರ್ಯಕರ್ತೆ, 24 ವರ್ಷದ ಮಲಾಲ ಯೂಸುಫ್ ಝಾಯಿ ಅವರು ಇತಿಹಾಸದಲ್ಲಿ ಅತ್ಯಂತ ಕಿರಿಯ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾಗಿದ್ದಾರೆ.
Today marks a precious day in my life.
— Malala (@Malala) November 9, 2021
Asser and I tied the knot to be partners for life. We celebrated a small nikkah ceremony at home in Birmingham with our families. Please send us your prayers. We are excited to walk together for the journey ahead.
📸: @malinfezehai pic.twitter.com/SNRgm3ufWP
'ಮಲಾಲ ಯೂಸಫ್ ಝಾಯಿ' ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ 'ಸ್ವಾತ್ ಜಿಲ್ಲೆ'ಯ ಮಿಂಗೋರಗ್ರಾಮದ ಒಂದು ಶಾಲೆಯ ವಿದ್ಯಾರ್ಥಿನಿ ಮತ್ತು ಶಿಕ್ಷಣ ಕಾರ್ಯಕರ್ತೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನ್ ಸಂಘಟನೆಯು ನಿಷೇಧಿಸಿರುವ 'ಸ್ವಾತ್ ಕಣಿವೆ'ಯಲ್ಲಿನ ಹುಡುಗಿಯರ ಶಿಕ್ಷಣ ಮತ್ತು ಮಹಿಳಾ ಹಕ್ಕುಗಳಪರ ತನ್ನ ಕ್ರಿಯಾತ್ಮಕ ಹೋರಾಟಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ. ಇವರಿಗೆ 2003ರಲ್ಲಿ ಮಲಾಲ ಸಖರೊವ್ ಪ್ರೈಜ್ ಫಾರ್ ಫ್ರೀಡಮ್ ಆಫ್ ಥಾಟ್(ಯೋಚನೆಯ ಸ್ವಾತಂತ್ರ್ಯಕ್ಕೆ ಸಖರೊವ್ ಪ್ರಶಸ್ತಿ) ದೊರಕಿತು. 9 ಅಕ್ಟೋಬರ್ 2012 ರಂದು ಅವಳು ಒಂದು ಶಾಲಾ ಬಸ್‌ನಲ್ಲಿ ಮನೆಗೆ ಹಿಂದಿರುಗುತ್ತಿರುವಾಗ, ತಾಲಿಬಾನ್ ಬಂದೂಕುಧಾರಿಗಳು ಆಕೆಯನ್ನು ಕೊಲ್ಲುವ ಪ್ರಯತ್ನದಲ್ಲಿ ತಲೆ ಮತ್ತು ಕುತ್ತಿಗೆಗೆ ಗುಂಡು ಹಾರಿಸಿದರು.
ನಂತರದ ದಿನಗಳಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮತ್ತು ತುಂಬಾ ವಿಷಮಸ್ಥಿತಿಯಲ್ಲಿ ಅವರು ಇದ್ದರು. ಯುನೈಟೆಡ್ ಕಿಂಗ್ಡಮ್‌ನ ಒಂದು ಆಸ್ಪತ್ರೆಗೆ ಸಾಗಿಸಲು ಅನುವಾಗುವಷ್ಟು ಅವಳ ಸ್ಥಿತಿ ಸಾಕಷ್ಟು ಸುಧಾರಿಸಿತು. ಸುಮಾರು 2 ತಿಂಗಳು ಆಸ್ಪತ್ರೆಯಲ್ಲಿ ಅತ್ಯಂತ ದಾರುಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 15 ವರ್ಷದ 'ಮಲಾಲ,' ಸಂಪೂರ್ಣ ಗುಣಹೊಂದಿ 2013 ರ, ಮಾರ್ಚ್ 19 ರಿಂದ ಅವರ ಶಾಲೆಗೆ ಹೋಗುವ ಕನಸು ನನಸಾಯಿತು. ಇವರಿಗೆ 2000 ನೇ ಇಸವಿಯಿಂದ ಮಕ್ಕಳ ನೋಬೆಲ್ ಪ್ರಶಸ್ತಿಯೆಂದೇ ಗುರುತಿಸಲ್ಪಡುವ ವಿಶ್ವಮಕ್ಕಳ ಪ್ರಶಸ್ತಿಯನ್ನು ನೀಡಲಾಗಿದೆ. ಒಟ್ಟಾರೆ 110 ವಿಶ್ವದ ರಾಷ್ಟ್ರಗಳ 70 ಸಾವಿರ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿಮೂಡಿಸುವ ದೃಷ್ಟಿಯಿಂದ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ. ಇವರಿಗೆ ನೋಬೆಲ್ ಶಾಂತಿ ಪ್ರಶಸ್ತಿ ಭಾರತದ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್ ಸತ್ಯಾರ್ಥಿಯೊಂದಿಗೆ ನೀಡಲಾಗಿದೆ. ಮಾತ್ರವಲ್ಲದೇ ಈವರೆಗೆ ಮಲಾಲ ಅವರಿಗೆ ನ್ಯಾಷಿನಲ್ ಯೂತ್ ಪೀಸ್ ಪ್ರೈಜ್, ಮದರ್ ತೆರೇಸ ಗ್ಲೋಬಲ್ ಅವಾರ್ಡ್, ಇಂಟರ್ನ್ಯಾಷನಲ್ ಚಿಲ್ಡ್ರನ್ಸ್ ಪೀಸ್ ಪ್ರೈಜ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ..
Nobel laureate Malala Yousafzai and her partner Asser announced their wedding on social media today. The girls' education activist and Asser held their nikkah ceremony at home in Britain's Birmingham. Announcing the life event, Ms Yousafzai tweeted, "Today marks a precious day in my life. Asser and I tied the knot to be partners for life. We celebrated a small nikkah ceremony at home in Birmingham with our families. Please send us your prayers. We are excited to walk together for the journey ahead."
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am