ಬ್ರೇಕಿಂಗ್ ನ್ಯೂಸ್
15-11-21 08:28 pm Headline Karnataka News Network ದೇಶ - ವಿದೇಶ
ನವದೆಹಲಿ, ನ.14: ಜಗತ್ತಿನಲ್ಲೇ ಅತ್ಯಂತ ಆಧುನಿಕ ಮಾದರಿ ರಕ್ಷಣಾ ತಂತ್ರಜ್ಞಾನ ಎನ್ನಲಾಗುತ್ತಿರುವ ಎಸ್- 400 ಕ್ಷಿಪಣಿ ಛೇದಕಗಳನ್ನು ರಷ್ಯಾ, ಈ ವರ್ಷದಲ್ಲೇ ಭಾರತಕ್ಕೆ ಪೂರೈಕೆ ಆರಂಭಿಸಲಿದೆ. ಕಳೆದ 2018ರಲ್ಲಿ ಅಮೆರಿಕದ ನಿರ್ಬಂಧ ನಡುವೆಯೇ ರಷ್ಯಾ ಜೊತೆ ರಕ್ಷಣಾ ಉಪಕರಣ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿತ್ತು. 5 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಒಡಂಬಡಿಕೆಯಲ್ಲಿ ಭಾರತಕ್ಕೆ ಐದು ಅತ್ಯಾಧುನಿಕ ಮಾದರಿಯ ಕ್ಷಿಪಣಿ ಛೇದಕಗಳನ್ನು ರಷ್ಯಾ ಒದಗಿಸಲಿದೆ.
ಇದಕ್ಕಾಗಿ 2019ರಲ್ಲಿ 800 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಭಾರತ, ರಷ್ಯಾಕ್ಕೆ ನೀಡಿತ್ತು. ಉಳಿದ ಹಣವನ್ನು ಸರದಿಯಂತೆ, ಕ್ಷಿಪಣಿ ಪೂರೈಕೆ ಆಗುತ್ತಿದ್ದಂತೆ ಭಾರತ ನೀಡಬೇಕಾಗಿದೆ. ಎಸ್-400 ರಷ್ಯಾದ ಭೂಮಿಯಿಂದ ಆಕಾಶಕ್ಕೆ ಹಾರುವ ಅತ್ಯಾಧುನಿಕ ಕ್ಷಿಪಣಿಗಳನ್ನು ಹೊಂದಿದ್ದು, ಸ್ವಂತ ರಾಡಾರ್ ವ್ಯವಸ್ಥೆ ಹೊಂದಿರುವುದರಿಂದ ಒಂದು ಸಾವಿರ ಕಿಮೀ ವ್ಯಾಪ್ತಿಯಲ್ಲಿ ಒಳಬರುವ ಯಾವುದೇ ರೀತಿಯ ಬಾಂಬರ್, ಏರ್ ಕ್ರಾಫ್ಟ್, ಯುದ್ಧ ವಿಮಾನಗಳು, ರಾಕೆಟ್, ಮಿಸೈಲ್ ಗಳನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ.
ಅದೇ ರೀತಿ, ಒಂದು ಸಾವಿರ ಕಿಮೀ ದೂರದ ವ್ಯಾಪ್ತಿಯ ಯಾವುದೇ ಸಂಶಯಾಸ್ಪದ ವಸ್ತುವನ್ನು ಪತ್ತೆ ಮಾಡಿ ಅದಕ್ಕೆ ಅಷ್ಟೇ ವೇಗದಲ್ಲಿ ಪ್ರತಿಕ್ರಿಯೆ ಕೊಡಬಲ್ಲ ಸಾಮರ್ಥ್ಯವನ್ನು ಪಡೆದಿದೆ. ಅಮೆರಿಕದ ಫೈಟರ್ ಜೆಟ್ ಗಳಾದ ಎಫ್ 18 ಮತ್ತು ಎಫ್ 22 ವಿಮಾನಗಳನ್ನೂ ಪತ್ತೆಹಚ್ಚಿ ಅಷ್ಟೇ ವೇಗದಲ್ಲಿ ತಿರುಗೇಟು ಕೊಡಬಲ್ಲದು. ಯುದ್ಧ ಸಂದರ್ಭದಲ್ಲಿ ನೆರವಾಗಬಲ್ಲ ಕ್ಷಿಪಣಿ ವ್ಯವಸ್ಥೆ ಭಾರತದ ರಕ್ಷಣಾ ವಿಭಾಗದಲ್ಲಿ ಮಹತ್ತರ ಮೈಲಿಗಲ್ಲು ಆಗಲಿದೆ. ಒಂದು ಎಸ್- 400 ಮಿಸೈಲ್ ನಾಲ್ಕು ವಿಭಿನ್ನ ಸಾಮರ್ಥ್ಯದ ಕ್ಷಿಪಣಿಗಳನ್ನು ಹೊಂದಿರುತ್ತದೆ. ಇವು ಯುದ್ಧ ವಿಮಾನಗಳು, ಶತ್ರುಗಳಿಂದ ಬರುವ ಕ್ಷಿಪಣಿಗಳು, ಎಚ್ಚರಿಕೆ ರವಾನಿಸಬಲ್ಲ ಮತ್ತು ನಿಯಂತ್ರಣ ವ್ಯವಸ್ಥೆಯುಳ್ಳ ವಿಮಾನಗಳನ್ನು 400 ಕಿಮೀ ದೂರ, 250 ಕಿಮೀ ಮತ್ತು ಸಾಮಾನ್ಯ ಗುರಿಯ 120 ಕಿಮೀ ದೂರ ಮತ್ತು ಸಮೀಪದ 40 ಕಿಮೀ ವ್ಯಾಪ್ತಿಯ ಗುರಿಗಳನ್ನು ಏಕಕಾಲದಲ್ಲಿ ಭೇದಿಸಬಲ್ಲ ರೀತಿ ಇರುತ್ತದೆ.
ಈಗಾಗ್ಲೇ ಸಮುದ್ರ ಮಾರ್ಗದಲ್ಲಿ ಕ್ಪಿಪಣಿ ತಂತ್ರಜ್ಞಾನದ ಸಲಕರಣೆಗಳು ಭಾರತಕ್ಕೆ ಸರಬರಾಜು ಆಗುತ್ತಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಭಾರತ ಸರಕಾರದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮೊದಲ ಕ್ಷಿಪಣಿ ವ್ಯವಸ್ಥೆ ಈ ವರ್ಷದ ಅಂತ್ಯದ ಒಳಗೆ ಭಾರತ ತಲುಪಲಿದ್ದು, ಇಲ್ಲಿಯೇ ರೆಡಿಯಾಗಲಿದೆ. ಈಗಾಗಲೇ ಈ ವ್ಯವಸ್ಥೆಯ ಬಳಕೆ ಬಗ್ಗೆ ಭಾರತದ ವಾಯುಪಡೆ ಯೋಧರಿಗೆ ರಷ್ಯಾದಲ್ಲಿ ತರಬೇತಿಯನ್ನೂ ನೀಡಲಾಗಿದೆ.
5.43 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದ ಖರೀದಿಯು ಐದು ವರ್ಷಗಳಲ್ಲಿ ಮುಗಿಯಲಿದ್ದು, ಭಾರತಕ್ಕೆ ರಕ್ಷಣಾ ವ್ಯವಸ್ಥೆಯನ್ನು ಒದಗಿಸುವ ಭರವಸೆಯನ್ನು ರಷ್ಯಾ ನೀಡಿತ್ತು. 2018ರಲ್ಲಿ ಒಪ್ಪಂದ ಆಗಿದ್ದು, ನಾಲ್ಕು ವರ್ಷ ಆಗುತ್ತಲೇ ಸಲಕರಣೆಗಳು ಭಾರತಕ್ಕೆ ಬರತೊಡಗಿವೆ. ಈ ರೀತಿಯ ರಕ್ಷಣಾ ವ್ಯವಸ್ಥೆ ಈಗಾಗಲೇ ಚೀನಾ ಬಳಿ ಇದ್ದು, ಭಾರತದ ಗಡಿಭಾಗದಲ್ಲಿ ನಿಯೋಜನೆ ಮಾಡಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ತನ್ನ ಎಫ್- 18, ಎಫ್ - 22 ಫೈಟರ್ ಜೆಟ್ ಗಳನ್ನೂ ಪತ್ತೆ ಮಾಡುತ್ತದೆ ಅನ್ನುವ ಕಾರಣಕ್ಕೆ ಅಮೆರಿಕವೂ ಈ ಖರೀದಿ ಒಪ್ಪಂದಕ್ಕೆ ವಿರೋಧ ಸೂಚಿಸಿತ್ತು. ಅಲ್ಲದೆ, ಭಾರತಕ್ಕೆ ನಿರ್ಬಂಧಗಳನ್ನೂ ವಿಧಿಸಿತ್ತು. ಅಮೆರಿಕದ ಫೈಟರ್ ಜೆಟ್ ಗಳನ್ನು ಭೇದಿಸಬಲ್ಲ ತಂತ್ರಜ್ಞಾನ ಭಾರತದಲ್ಲಿ ಇರಲಿಲ್ಲ. ಹೀಗಾಗಿ ಭಾರತ, ರಷ್ಯಾದ ಜೊತೆಗೆ ರಕ್ಷಣಾ ಡೀಲ್ ಮಾಡಿದ್ದಕ್ಕೆ ವಿರೋಧ ಸೂಚಿಸಿತ್ತು. ಭಾರತ ವಿರುದ್ಧ 2018ರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ನಿರ್ಬಂಧಕ್ಕೆ ಬಿಡೆನ್ ಆಡಳಿತ ಬಂದ ಬಳಿಕ ಕೆಲವು ಸೆನೆಟ್ ಸದಸ್ಯರು ವಿರೋಧ ಸೂಚಿಸಿದ್ದಾರೆ. ಈ ಬಗ್ಗೆ ಬಿಡೆನ್ ಆಡಳಿತ ಯಾವುದೇ ನಿರ್ಧಾರಕ್ಕೆ ಇನ್ನೂ ಬಂದಿಲ್ಲ
In a big boost to India’s air-defence capabilities, Russia has started delivery of the much awaited S-400 missile system for deployment on schedule this year, official sources have confirmed. India had bought the system for over US$ 5 billion in 2018, in a deal that became contentious amid a threat of sanctions from the US on countries engaging in defence deals with Russia.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm