ಬ್ರೇಕಿಂಗ್ ನ್ಯೂಸ್
11-01-22 05:06 pm HK Desk news ದೇಶ - ವಿದೇಶ
ವಾಷಿಂಗ್ಟನ್, ಜ.11 : ಅಮೆರಿಕದ ವೈದ್ಯರು ವೈದ್ಯಕೀಯ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಹಂದಿಯ ಹೃದಯವನ್ನು 57 ವರ್ಷದ ವ್ಯಕ್ತಿಯೊಬ್ಬರಿಗೆ ಕಸಿ ಮಾಡುವ ಮೂಲಕ ವೈದ್ಯಕೀಯ ಲೋಕದಲ್ಲಿ ಹೊಸ ಸಾಧನೆ ಮಾಡಿದ್ದಾರೆ.
ಅಮೆರಿಕದ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸ್ಕೂಲ್ ನಲ್ಲಿ ಮೊಟ್ಟಮೊದಲ ಬಾರಿಗೆ ಈ ರೀತಿಯ ಹೃದಯ ಕಸಿ ಮಾಡಲಾಗಿದೆ. ಪ್ರಾಣಿಯಿಂದ ಮಾನವನಿಗೆ ಮೊದಲ ಬಾರಿಗೆ ಅಂಗಾಂಗ ಕಸಿ ಮಾಡಲಾಗಿದ್ದು, ವೈದ್ಯಕೀಯ ಲೋಕದಲ್ಲಿ ಐತಿಹಾಸಿಕ ಅಚ್ಚರಿ ಸೃಷ್ಟಿಸಲಾಗಿದೆ. 57 ವರ್ಷದ ಡೇವಿಡ್ ಬೆನ್ನೆಟ್ ಎಂಬ ವ್ಯಕ್ತಿಯ ಹೃದಯ ತೀರಾ ಹದಗೆಟ್ಟಿತ್ತು. ಹೃದಯದ ಸ್ಥಿತಿ ಮಾಡು ಇಲ್ಲವೇ ಮಡಿ ಎನ್ನುವಷ್ಟರ ಮಟ್ಟಿಗೆ ಹೋಗಿದ್ದರಿಂದ ವಂಶವಾಹಿ ಅಭಿವೃದ್ಧಿಪಡಿಸಿದ ಹಂದಿಯೊಂದರ ಹೃದಯವನ್ನು ಕಸಿ ಮಾಡಲು ವೈದ್ಯರು ಮುಂದಾಗಿದ್ದರು.
ಡೇವಿಡ್ ಸದ್ಯಕ್ಕೆ ಚೇತರಿಕೆ ಹಾದಿಯಲ್ಲಿದ್ದು, ಯಾವ ರೀತಿ ಹೊಸ ಅಂಗ ಮಾನವನ ದೇಹದಲ್ಲಿ ಒಗ್ಗಿಕೊಳ್ಳುತ್ತೆ ಅನ್ನುವುದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಒಂದೋ ಸಾಯಬೇಕು, ಇಲ್ಲವೇ ಈ ರೀತಿಯ ಕಸಿ ಮಾಡಬೇಕಿತ್ತು. ನನಗೆ ಬದುಕಬೇಕು ಎಂಬ ಛಲ ಇತ್ತು. ಇದೊಂದು ಕತ್ತಲಲ್ಲಿ ಹೊರಡುವ ಸಣ್ಣ ಬೆಳಕಿನ ರೇಖೆ ಅನ್ನುವುದು ನನಗೆ ಗೊತ್ತಿತ್ತು. ಆದರೆ ನನಗದು ಕೊನೆಗೆ ಉಳಿದಿದ್ದ ಏಕಮಾತ್ರ ಅವಕಾಶ ಆಗಿತ್ತು ಎಂದು ಮೇರಿಲ್ಯಾಂಡ್ ನಿವಾಸಿಯಾಗಿರುವ ಡೇವಿಡ್ ಬೆನ್ನೆಟ್ ಸರ್ಜರಿ ನಡೆಯೋದಕ್ಕೂ ಮುನ್ನ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು.
ಡೇವಿಡ್ ಕಳೆದ ಕೆಲವು ತಿಂಗಳಿಂದ ಹೃದಯ ಮತ್ತು ಶ್ವಾಸಕೋಶದ ಸರ್ಜರಿಯಿಂದಾಗಿ ಆಸ್ಪತ್ರೆಯಲ್ಲಿ ಮಲಗಿದಲ್ಲೇ ಇದ್ದರು. ಹೀಗಾಗಿ ಹಾರ್ಟ್ ಕಸಿಯಲ್ಲಿ ಚೇತರಿಕೆ ಕಂಡರೆ ಮತ್ತೆ ಎಂದಿನಂತೆ ಓಡಾಡುವ ವಿಶ್ವಾಸದಲ್ಲಿ ಡೇವಿಡ್ ಇದ್ದರು. ಇದು ವೈದ್ಯ ಲೋಕದ ಅಚ್ಚರಿ. ಒಂದು ವೇಳೆ ಈ ಹೃದಯ ಕಸಿ ಸರ್ಜರಿ ಯಶಸ್ವಿಯಾದರೆ, ಮಾನವನಿಗೆ ಅಂಗಾಂಗ ಕಸಿ ವಿಚಾರದಲ್ಲಿ ಹೊಸ ಹೊಳಹು ಸಿಕ್ಕಂತಾಗುತ್ತದೆ. ಅಂಗಾಂಗ ಕೊರತೆ ನೀಗಿಸುವಲ್ಲಿ ಒಂದು ಹೆಜ್ಜೆ ಮುಂದಿಟ್ಟಂತಾಗುತ್ತದೆ. ಅಂಗಾಂಗ ಕಸಿ ತಂತ್ರಜ್ಞಾನಕ್ಕೆ ಹೊಸ ಸ್ವರೂಪ ಸಿಗಲಿದೆ ಎಂದು ಸರ್ಜರಿ ನಡೆಸಿರುವ ವೈದ್ಯರಲ್ಲಿ ಒಬ್ಬರಾದ ಬರ್ಟ್ಲೇ ಗ್ರಿಫಿತ್ ಹೇಳಿದ್ದಾರೆ. ಅಮೆರಿಕದಲ್ಲಿ ಅಂಗಾಂಗ ಕಸಿಗೆ ಭಾರೀ ಬೇಡಿಕೆಯಿದ್ದು, 1.10 ಲಕ್ಷ ಮಂದಿ ಅಂಗಾಂಗ ದಾನದ ನಿರೀಕ್ಷೆಯಲ್ಲಿದ್ದಾರೆ. ಇದೇ ಕಾರಣದಿಂದ ಆರು ಸಾವಿರ ಮಂದಿ ಪ್ರತಿ ವರ್ಷ ಅಮೆರಿಕದಲ್ಲಿ ಸಾಯುತ್ತಿದ್ದಾರೆ ಎನ್ನುವ ಅಂಕಿ ಅಂಶವನ್ನೂ ಅಲ್ಲಿನ ವೈದ್ಯರು ನೀಡಿದ್ದಾರೆ.
ತಂತ್ರಜ್ಞಾನದ ಹಿಂದೆ ಪಾಕಿಸ್ಥಾನ, ಭಾರತೀಯರು
ಅಂದಹಾಗೆ, ಈ ರೀತಿ ಹಂದಿಯ ಹೃದಯವನ್ನು ಮಾನವನಿಗೆ ಕಸಿ ಮಾಡುವಲ್ಲಿ ಸಂಶೋಧನೆ ನಡೆಸಿದ ತಜ್ಞರಲ್ಲಿ ಪಾಕಿಸ್ಥಾನ ಮೂಲದ ಡಾ.ಮೊಹಮ್ಮದ್ ಎಂ. ಮೊಹಿಯುದ್ದೀನ್ ಪ್ರಮುಖರು. ಪ್ರಾಣಿಗಳಿಂದ ಅಂಗ ಕಸಿ ಮಾಡುವ ಕ್ಸೆನೋ ಟ್ರಾನ್ಸ್ ಪ್ಲಾಂಟೇಶನ್ ಪ್ರೋಗ್ರಾಮ್ ಯೋಜನೆಯ ಡೈರೆಕ್ಟರ್ ಆಗಿದ್ದಾರೆ. ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ಸಂಸ್ಥೆಯಲ್ಲಿ ಸರ್ಜರಿ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾರೆ. ಇವರ ಜೊತೆ ಭಾರತ ಮೂಲದ ಡಾ.ಮೋಹನ್ ಸೂಂತ ಮತ್ತು ಡಾ. ಬರ್ಟ್ಲೇ ಗ್ರಿಫಿತ್ ಹೃದಯ ಕಸಿ ಮಾಡುವಲ್ಲಿ ಶ್ರಮಿಸಿದ್ದಾರೆ.
This is the first time a pig's heart has been transplanted into a human, to the astonishment of the medical world. Yes, doctors at Maryland Hospital in the US have saved the life of a successful surgeon. 57-year-old David Bennett had surgery. The person who was fighting between death and death had two choices. One death, another pig heart transplant. Then David Bennett bravely wants me to live. I had agreed to surgery that this was my last option. Bennett, who has already undergone surgery, is in good health and is breathing freely. However, since it is a decisive and invasive surgery, the cardiac function is monitored, the doctors said.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm