ಬ್ರೇಕಿಂಗ್ ನ್ಯೂಸ್
01-02-22 10:22 am SOURCE: Banuprasada, VK, Bengaluru ದೇಶ - ವಿದೇಶ
ಹೊಸದಿಲ್ಲಿ, ಫೆ 01 : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರ ಮಂಗಳವಾರ 2022-23ರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. 2020-21ರ ಕೇಂದ್ರ ಬಜೆಟ್ ಮಂಡನೆ ವೇಳೆ ಅವರು 2 ಗಂಟೆ 42 ನಿಮಿಷ ಬಜೆಟ್ ಭಾಷಣ ನೀಡಿದ್ದರು. ಅದು ಸುದೀರ್ಘ ಮುಂಗಡಪತ್ರ ಭಾಷಣ ಎಂದು ದಾಖಲಾಗಿದೆ. ಕೇಂದ್ರ ಬಜೆಟ್ ಕುರಿತು ಇಂಥ ಹಲವು ಸ್ವಾರಸ್ಯಕರ ವಿಚಾರಗಳಿವೆ.
ಮೊದಲ ಬಜೆಟ್:
ಭಾರತದ ಮೊದಲ ಬಜೆಟ್ 1860ರ ಏಪ್ರಿಲ್ 7ರಂದು ಮಂಡಿಸಲಾಯಿತು. ಈಸ್ಟ್ ಇಂಡಿಯಾ ಕಂಪನಿಯ ಸ್ಕಾಟಿಷ್ ಆರ್ಥಿಕ ತಜ್ಞ ಹಾಗೂ ರಾಜಕಾರಣಿ ಜೇಮ್ಸ್ ವಿಲ್ಸನ್ ಈ ಬಜೆಟ್ ಅನ್ನು ಮಂಡಿಸಿದ್ದ. ಸ್ವತಂತ್ರ ಭಾರತದಲ್ಲಿ 1947ರ ನವೆಂಬರ್ 26ರಂದು ಮೊದಲ ಬಜೆಟ್ ಅನ್ನು ಅಂದಿನ ಹಣಕಾಸು ಸಚಿವ ಆರ್.ಕೆ ಷಣ್ಮುಖಮ್ ಚೆಟ್ಟಿ ಮಂಡಿಸಿದ್ದರು.
ಸುದೀರ್ಘ ಬಜೆಟ್ ಭಾಷಣ:
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನವರು 2020ರ ಫೆ.1ರಂದು 2020-21ರ ಬಜೆಟ್ ಅನ್ನು 2 ಗಂಟೆ 42 ನಿಮಿಷಗಳ ಕಾಲ ಮಂಡಿಸಿದ್ದರು. ಅದರಲ್ಲೂ ಇನ್ನೂ ಎರಡು ಪುಟ ಓದಲು ಬಾಕಿ ಇತ್ತು. ಓದಿ ಬಳಲಿದ ಪರಿಣಾಮ ಅಲ್ಲಿಗೆ ಮುಕ್ತಾಯಗೊಳಿಸಿದ್ದರು. 2019ರ ಜುಲೈನಲ್ಲಿ ಅವರು ತಮ್ಮ ಚೊಚ್ಚಲ ಬಜೆಟ್ ಭಾಷಣವನ್ನು 2 ಗಂಟೆ 17 ನಿಮಿಷ ಮಾಡಿದ್ದರು.
ಅತಿ ಹೆಚ್ಚು ಪದಗಳ ಭಾಷಣ:
ಮನಮೋಹನ್ ಸಿಂಗ್ ಅವರು 1991ರಲ್ಲಿ ಹಣಕಾಸು ಸಚಿವರಾಗಿದ್ದಾಗ 18,650 ಪದಗಳು ಇರುವ ಬಜೆಟ್ ಭಾಷಣ ಮಾಡಿದ್ದರು. 2018ರಲ್ಲಿ ಅರುಣ್ ಜೇಟ್ಲಿ ಅವರು 18,604 ಪದಗಳ ಭಾಷಣ ಮಾಡಿದ್ದರು.
ಸಂಕ್ಷಿಪ್ತ ಬಜೆಟ್ ಭಾಷಣ:
1977ರಲ್ಲಿ ಅಂದಿನ ಹಣಕಾಸು ಸಚಿವ ಹೀರೂಭಾಯ್ ಮುಲ್ಲಿಜಿಭಾಯ್ ಪಟೇಲವರು 800 ಪದಗಳ ಸಣ್ಣ ಬಜೆಟ್ ಭಾಷಣ ಮಾಡಿದ್ದರು.

ಸಂಕ್ಷಿಪ್ತ ಬಜೆಟ್ ಭಾಷಣ:
1977ರಲ್ಲಿ ಅಂದಿನ ಹಣಕಾಸು ಸಚಿವ ಹೀರೂಭಾಯ್ ಮುಲ್ಲಿಜಿಭಾಯ್ ಪಟೇಲವರು 800 ಪದಗಳ ಸಣ್ಣ ಬಜೆಟ್ ಭಾಷಣ ಮಾಡಿದ್ದರು.
ಹೆಚ್ಚು ಬಜೆಟ್ ಮಂಡಿಸಿದವರು:
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ದೇಶದ ಇತಿಹಾಸದಲ್ಲಿಯೇ 10 ಸಲ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. 1962-69ರ ಅವಧಿಯಲ್ಲಿ. ಚಿದಂಬರಂ-9, ಪ್ರಣಬ್ ಮುಖರ್ಜಿ-8, ಯಶವಂತ್ ಸಿನ್ಹಾ-8, ಮನಮೋಹನ್ ಸಿಂಗ್-6 ಬಜೆಟ್ ಗಳನ್ನು ಮಂಡಿಸಿದ್ದಾರೆ.
ಸಮಯ ಬದಲಾವಣೆ:
1999ರ ತನಕ ಕೇಂದ್ರ ಬಜೆಟ್ ಅನ್ನು ಬ್ರಿಟಿಷರ ಪದ್ಧತಿಯಂತೆ ಫೆಬ್ರವರಿಯ ಕೊನೆಯ ಕೆಲಸದ ದಿನದಂದು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. 1999ರಲ್ಲಿ ಅಂದಿನ ಹಣಕಾಸು ಸಚಿವ ಯಶವಂತ್ ಸಿನ್ಹಾ ಬೆಳಗ್ಗೆ 11 ಗಂಟೆಗೆ ಬದಲಿಸಿದರು. 2017ರಲ್ಲಿ ಅರುಣ್ ಜೇಟ್ಲಿಅವರು ಫೆ.1ರಂದು ಬಜೆಟ್ ಮಂಡಿಸುವ ಪದ್ಧತಿಗೆ ಚಾಲನೆ ನೀಡಿದರು.
ಭಾಷೆ, ಪೇಪರ್‌ಲೆಸ್:
1955ರ ತನಕ ಇಂಗ್ಲಿಷ್‌ನಲ್ಲಿಇರುತ್ತಿತ್ತು. ನಂತರ ಹಿಂದಿ-ಇಂಗ್ಲಿಷ್‌ನಲ್ಲಿ ಮುದ್ರಿಸಲಾಯಿತು. 2021-22ರಲ್ಲಿ ಮೊದಲ ಬಾರಿಗೆ ಪೇಪರ್‌ಲೆಸ್ ಬಜೆಟ್ ಮಂಡನೆಯಾಯಿತು. 1950ರ ತನಕ ಬಜೆಟ್ ಅನ್ನು ರಾಷ್ಟ್ರಪತಿ ಭವನದಲ್ಲಿ ಮುದ್ರಿಸಲಾಗುತ್ತಿತ್ತು. 1980ರಲ್ಲಿ ಹಣಕಾಸು ಸಚಿವಾಲಯದ ನಾರ್ಥ್ ಬ್ಲಾಕ್ ಕಚೇರಿಯಲ್ಲಿ ಸರಕಾರಿ ಪ್ರೆಸ್ ಸ್ಥಾಪಿಸಿ ಮುದ್ರಿಸಲಾಯಿತು.
ರೈಲ್ವೆ ಬಜೆಟ್:
2017ರ ತನಕ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. 2017ರಿಂದ ಕೇಂದ್ರ ಬಜೆಟ್‌ನಲ್ಲಿಯೇ ವಿಲೀನಗೊಳಿಸಲಾಗಿದೆ.
Budget 2022 will be the second paperless Budget of the government and the fourth straight Budget of finance minister Nirmala Sitharaman. The budget has always remained an intriguing subject because of the secrecy that is maintained in the long process of preparing it and also because of the interesting trivia associated with it.
10-04-26 03:25 pm
HK News Desk
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
10-04-26 01:26 pm
HK News Desk
Lebanon News: ಲೆಬನಾನ್ ಮೇಲೆ ಇಸ್ರೇಲ್ ಭಾರೀ ಬಾಂಬ್...
09-04-26 11:03 pm
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
10-04-26 12:35 pm
Dinesh Kumar, Mangaluru
Besant Evening College, BPL Cricket: ಬೆಸೆಂಟ್...
07-04-26 01:22 pm
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm