ಬ್ರೇಕಿಂಗ್ ನ್ಯೂಸ್
25-03-22 09:00 pm HK Desk news ದೇಶ - ವಿದೇಶ
ನವದೆಹಲಿ, ಮಾ.25: ಶ್ರೀಲಂಕಾದಲ್ಲಿ ಭಾರೀ ಆರ್ಥಿಕ ಕುಸಿತ ಕಂಡುಬಂದಿದ್ದು ಇದರಿಂದ ಅಲ್ಲಿನ ಜನರು ದಿಕ್ಕೆಟ್ಟು ಹೋಗಿದ್ದಾರೆ. ಅಕ್ಕಿ, ದೀನಸಿ ಸಾಮಗ್ರಿಗಳ ಬೆಲೆ ವಿಪರೀತ ಏರಿಕೆಯಾಗಿದ್ದು ಜನರು ಬದುಕಲು ಸಾಧ್ಯವಾಗದೆ ತಮಿಳುನಾಡಿನತ್ತ ವಲಸೆ ಬರಲು ಆರಂಭಿಸಿದ್ದಾರೆ.
ಜಾಫ್ನಾ ದ್ವೀಪಗಳಿಂದ ದಿನವೂ ಜನರು ತಮಿಳುನಾಡು ಕಡೆಗೆ ಬರುತ್ತಿದ್ದು, ನಿರಾಶ್ರಿತರಾಗಿ ಬಂದು ಆಶ್ರಯ ಕೇಳುತ್ತಿದ್ದಾರೆ. ಎರಡು ದಿನಗಳ ಹಿಂದೆ ಮಕ್ಕಳು, ಮಹಿಳೆಯರು ಸೇರಿ 20ಕ್ಕೂ ಹೆಚ್ಚು ಮಂದಿ ಬಂದಿದ್ದು ಅವರನ್ನು ಕರಾವಳಿ ಕಾವಲು ಪಡೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಕ್ಕಿ ಕೇಜಿಗೆ 250-300 ರೂಪಾಯಿ ಆಗಿದ್ದು, ತರಕಾರಿ, ಇನ್ನಿತರ ದಿನಸಿ ಸಾಮಗ್ರಿಗಳೇ ಸಿಗುತ್ತಿಲ್ಲ. ಪೆಟ್ರೋಲ್, ಡೀಸೆಲ್ ರೇಟ್ ಕೂಡ ವಿಪರೀತ ಏರಿದ್ದು ದಿನದಿಂದ ದಿನಕ್ಕೆ ನಾಗಾಲೋಟದತ್ತ ಹೋಗಿದೆ. ಜನರು ಪೆಟ್ರೋಲಿಗಾಗಿ ಕ್ಯೂ ನಿಲ್ಲುತ್ತಿದ್ದು, ಕಳೆದ ವಾರ ಬಿಸಿಲಿನ ಮಧ್ಯೆ ಸಾಲು ಗಟ್ಟಿ ನಿಂತಿರುವಾಗಲೇ ಇಬ್ಬರು ಸಾವು ಕಂಡಿದ್ದಾರೆ. ಕಳೆದ ಕೊರೊನಾ ಲಾಕ್ಡೌನ್ ಬಳಿಕ ಶ್ರೀಲಂಕಾ ಸರಕಾರ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಗುರಿಯಾಗಿದೆ. ಇದರಿಂದಾಗಿ ಚೀನಾ ಮತ್ತು ಭಾರತದಿಂದ ಬಹಳಷ್ಟು ಸಾಲ ಪಡೆದಿದ್ದು, ಅದನ್ನು ತೀರಿಸಲಾಗದೆ ನಷ್ಟಕ್ಕೆ ಒಳಗಾಗಿದೆ. ಇತ್ತೀಚೆಗೆ ಲಂಕಾದ ಪ್ರಧಾನಿ ನೆರವು ಕೇಳಿದ್ದಕ್ಕೆ ಭಾರತದಿಂದ ಒಂದು ಬಿಲಿಯನ್ ಡಾಲರ್ ಮೊತ್ತದ ಅಕ್ಕಿ, ಆಹಾರ ಪದಾರ್ಥ, ದಿನಸಿ ಸಾಮಗ್ರಿಗಳನ್ನು ಕಳಿಸಿಕೊಡಲಾಗಿತ್ತು. ಕಳೆದ ಫೆಬ್ರವರಿ ತಿಂಗಳಲ್ಲಿ 500 ಮಿಲಿಯನ್ ಡಾಲರ್ ಮೊತ್ತದ ಹಣವನ್ನು ಸಾಲದ ರೂಪದಲ್ಲಿ ನೀಡಲಾಗಿತ್ತು.
2019ರಲ್ಲಿ ಕೊಲಂಬೋದಲ್ಲಿ ಭಯೋತ್ಪಾದಕರ ಸರಣಿ ಬಾಂಬ್ ಸ್ಫೋಟದ ಕಾರಣ ಅಲ್ಲಿನ ಆರ್ಥಿಕತೆಯ ಮೂಲವಾಗಿದ್ದ ಪ್ರವಾಸೋದ್ಯಮ ಕ್ಷೇತ್ರ ದಿಢೀರ್ ಕುಸಿತ ಕಂಡಿತ್ತು. ಅದೇ ಕಾರಣದಿಂದ ಶ್ರೀಲಂಕಾಗೆ ಜನರು ಪ್ರವಾಸ ಹೋಗುವುದನ್ನು ನಿಲ್ಲಿಸಿದ್ದರು. ಆನಂತರ ಕೊರೊನಾ ಲಾಕ್ಡೌನ್ ಆಗಿದ್ದರಿಂದ ಮತ್ತಷ್ಟು ಬಿಗಡಾಯಿಸಿತ್ತು. ಪ್ರವಾಸೋದ್ಯಮಕ್ಕೂ ತೀವ್ರ ಪೆಟ್ಟು ಬಿದ್ದಿತ್ತು. ಇದೇ ಕಾರಣದಿಂದ ಶ್ರೀಲಂಕಾ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳಿಂದ ಸಾಲ ಪಡೆದಿದ್ದು ಅದನ್ನೂ ತೀರಿಸಲಾಗದೆ ದಿವಾಳಿಯಾಗುವತ್ತ ಹೋಗಿದೆ. ಚೀನಾದಿಂದ 2.5 ಬಿಲಿಯನ್ ಡಾಲರ್ ಮೊತ್ತದ ಸಾಲ ಪಡೆದಿತ್ತು. ಹಣದ ಬದಲು ಚಹಾ ಮತ್ತು ಕಾಫಿಯನ್ನು ನೀಡಿ ಇರಾಕ್ ನಲ್ಲಿ ತೈಲ ಖರೀದಿಸಲು ಲಂಕಾ ಮುಂದಾಗಿದೆ.
ಇದೀಗ ಆಹಾರ ಸಾಮಗ್ರಿ, ಪೆಟ್ರೋಲಿಯಂ ಉತ್ಪನ್ನಗಳನ್ನು ವಿದೇಶಗಳಿಂದ ಖರೀದಿಸಲು ಲಂಕಾಗೆ ಹಣ ಇಲ್ಲದಾಗಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ನಿಂದ ನೆರವು ಕೇಳಿದ್ದು, ಒಂದು ವರ್ಷದಲ್ಲಿ ಆರ್ಥಿಕತೆ ಸುಧಾರಿಸಲು 6.9 ಬಿಲಿಯನ್ ಡಾಲರ್ ಅಗತ್ಯ ಇರುವುದಾಗಿ ಲಂಕಾ ಅಧ್ಯಕ್ಷ ಗೊಟಬಾಯ ರಾಜಪಕ್ಷ ಹೇಳಿದ್ದಾರೆ.
ಕಾಗದಕ್ಕೂ ಬರ, ಮುದ್ರಣ ನಿಲ್ಲಿಸಿದ ಪತ್ರಿಕೆಗಳು
ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ಮುದ್ರಣ ಕಾಗದಕ್ಕೆ ಬರ ಎದುರಾಗಿರುವುದರಿಂದ ಶ್ರೀಲಂಕಾದ ಎರಡು ಪ್ರಮುಖ ದಿನ ಪತ್ರಿಕೆಗಳು ಮುದ್ರಣವನ್ನೇ ನಿಲ್ಲಿಸಿದೆ. ಉಪಾಳಿ ನ್ಯೂಸ್ ಪೇಪರ್ ಮಾಲೀಕತ್ವದ ಆಂಗ್ಲ ದಿನ ಪತ್ರಿಕೆ ದಿ ಐಲ್ಯಾಂಡ್ ಮತ್ತು ಸಿಂಹಳೀಯ ಭಾಷೆಯ ಆವೃತ್ತಿ ದಿವೈನಾ ಪತ್ರಿಕೆ ಕಾಗದ ಕೊರತೆಯಿಂದಾಗಿ ಮುದ್ರಣ ನಿಲ್ಲಿಸಿದೆ. ಇನ್ನೊಂದೆ ಕಾಗದ ಮತ್ತು ಮುದ್ರಣದ ಶಾಯಿ ಕೂಡ ದುಬಾರಿಯಾಗಿರುವುದರಿಂದ 35 ಲಕ್ಷ ಮಂದಿಯ ಪರೀಕ್ಷೆಗಳನ್ನೂ ಮುಂದೂಡಿರುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
They were economic refugees, trying to escape a dire situation in Sri Lanka, which is reeling under a severe economic crisis.Indian intelligence agencies believe that as unemployment and skyrocketing inflation drive more and more people to desperation in the coming days and weeks, the numbers of these refugees are likely to only increase.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am