ಕ್ರಿಕೆಟ್ ಕಮೆಂಟರಿಯಲ್ಲಿ ಡೀನ್ ಜೋನ್ಸ್ ವಾಯ್ಸ್ ಕೇಳಲ್ಲ..! ಹೃದಯಾಘಾತಕ್ಕೆ ಬಲಿ

24-09-20 05:50 pm       Headline Karnataka News Network   ದೇಶ - ವಿದೇಶ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಖ್ಯಾತ ಕಮೆಂಟೇಟರ್ ಡೀನ್ ಜೋನ್ಸ್ ಮುಂಬೈನಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

ಮುಂಬೈ, ಸೆಪ್ಟಂಬರ್ 24: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಖ್ಯಾತ ಕಮೆಂಟೇಟರ್ ಡೀನ್ ಜೋನ್ಸ್ ಮುಂಬೈನಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಐಪಿಎಲ್ 2020 ಕ್ರಿಕೆಟ್ ಸರಣಿಯಲ್ಲಿ ಕಮೆಂಟರಿ ಗುತ್ತಿಗೆ ಪಡೆದಿದ್ದ ಡೀನ್ ಜೋನ್ಸ್ ಅದಕ್ಕಾಗಿ ಮುಂಬೈಗೆ ಬಂದಿದ್ದರು.

ಮುಂಬೈನ ಹೊಟೇಲಿನಲ್ಲಿ ಉಳಿದುಕೊಂಡಿದ್ದ ಡೀನ್ ಜೋನ್ಸ್ ಗೆ ಮಧ್ಯಾಹ್ನ 12 ಗಂಟೆಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಆಸ್ಪತ್ರೆಯಲ್ಲಿ ಡೀನ್ ಮೃತರಾಗಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಐಪಿಎಲ್ ಸರಣಿಯ ಬ್ರಾಡ್ ಕಾಸ್ಟ್ ಹೊಣೆ ಹೊತ್ತಿರುವ ಸ್ಟಾರ್ ಸ್ಪೋರ್ಟ್ಸ್, ಡೀನ್ ಜೋನ್ಸ್ ನಿಧನದ ಬಗ್ಗೆ ತೀವ್ರ ಕಂಬನಿ ಮಿಡಿದಿದೆ. ಡೀನ್ ಜೋನ್ಸ್ ಚಾಂಪಿಯನ್ ಕಮೆಂಟೇಟರ್ ಆಗಿದ್ದರು. ಅವರ ಕ್ರಿಕೆಟ್ ಕಾಮೆಂಟರಿ ಶೈಲಿ ಜಗತ್ತಿನಾದ್ಯಂತ ಇರುವ ಅಭಿಮಾನಿಗಳ ಮನಸೂರೆಗೊಳ್ಳುತ್ತಿದ್ದವು. ಕ್ರಿಕೆಟ್ ವೀಕ್ಷಕರೆಲ್ಲ ಡೀನ್ ಜೋನ್ಸ್ ಅನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ಸ್ಟಾರ್ ಸ್ಪೋರ್ಟ್ಸ್ ಹೇಳಿಕೆಯಲ್ಲಿ ತಿಳಿಸಿದೆ. 1984ರಿಂದ 92ರ ನಡುವೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿದ್ದ ಡೀನ್ ಜೋನ್ಸ್, 52 ಟೆಸ್ಟ್ ಮತ್ತು 164 ಏಕದಿನ ಪಂದ್ಯಗಳನ್ನು ಆಡಿದ್ದರು.

ಡೀನ್ ಸಾವನ್ನು ನಂಬಲಾಗುತ್ತಿಲ್ಲ

ಡೀನ್ ಜೋನ್ಸ್ ಜೊತೆಗೆ ಕಮೆಂಟರಿ ಮಾಡುತ್ತಿದ್ದ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಡೀನ್ ಸಾವಿನ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಅವರು ಬೆಳಗ್ಗೆ ಆರೋಗ್ಯವಾಗೇ ಇದ್ದರು. ವಿಡಿಯೋ ಕಾಲ್ ಮಾಡಿ ಅವರ ಮಕ್ಕಳ ಜೊತೆಗೆಲ್ಲ ಮಾತಾಡಿದ್ದೆ. ಅವರ ಸಾವನ್ನು ನಂಬುವುದಕ್ಕೇ ಆಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. 

Join our WhatsApp group for latest news updates (2)