ನ.1ರಿಂದಲೇ ಪದವಿ, ಸ್ನಾತಕೋತ್ತರ ತರಗತಿ ಆರಂಭಕ್ಕೆ ಯುಜಿಸಿ ನಿರ್ದೇಶನ

25-09-20 05:59 pm       Headline Karnataka News Network   ದೇಶ - ವಿದೇಶ

2020-21ನೇ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಮೊದಲ ವರ್ಷದ ತರಗತಿಗಳು ನವೆಂಬರ್ 1ರಿಂದಲೇ ಆರಂಭಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸೂಚಿಸಿದ್ದು ಯುಜಿಸಿಯ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸಚಿವರೇ ಬಿಡುಗಡೆ ಮಾಡಿದ್ದಾರೆ.

ನವದೆಹಲಿ, ಸೆಪ್ಟಂಬರ್ 25: 2020-21ನೇ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಮೊದಲ ವರ್ಷದ ತರಗತಿಗಳು ನವೆಂಬರ್ 1ರಿಂದಲೇ ಆರಂಭಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸೂಚಿಸಿದ್ದು ಯುಜಿಸಿಯ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸಚಿವರೇ ಬಿಡುಗಡೆ ಮಾಡಿದ್ದಾರೆ.

ಈ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್, ಯುಜಿಸಿ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯನ್ನು ಟ್ವೀಟ್ ಮಾಡಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಯುಜಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅಕ್ಟೋಬರ್ ಒಳಗೆ ಪ್ರವೇಶ ಪ್ರಕ್ರಿಯೆ ಮುಗಿಸುವಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಅದರಂತೆ, ಈ ಸಾಲಿನ ಪ್ರಥಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನ.1ರಿಂದಲೇ ತರಗತಿ ಆರಂಭವಾಗಲಿದೆ. ಒಂದು ವೇಳೆ ಅರ್ಹ ಪರೀಕ್ಷೆಗಳ ಫಲಿತಾಂಶ ಘೋಷಣೆ ವಿಳಂಬವಾದಲ್ಲಿ ಆಯಾ ಯುನಿವರ್ಸಿಟಿಗಳ ವ್ಯಾಪ್ತಿಯಲ್ಲಿ ನ.18ರ ಒಳಗೆ ಪ್ರಕ್ರಿಯೆ ಮುಗಿಸಿ, ತರಗತಿ ಆರಂಭಿಸಬೇಕು ಎಂದು ಯುಜಿಸಿ ಮಾರ್ಗಸೂಚಿ ತಿಳಿಸಿದೆ.

ಅಲ್ಲದೆ, ನ.30ರ ಒಳಗೆ ಇತರೇ ಸೀಟುಗಳ ಪ್ರವೇಶಾತಿ ಕೂಡ ಮುಗಿಸಿರಬೇಕು. ಇನ್ನು ಪ್ರವೇಶ ಪರೀಕ್ಷೆ ಮೂಲಕವೇ ಅಡ್ಮಿಶನ್ ನಡೆಸುವ ಶಿಕ್ಷಣ ಸಂಸ್ಥೆಗಳು ಆದಷ್ಟು ಬೇಗ ಸಂಬಂಧಿತ ಪ್ರಕ್ರಿಯೆ ನಡೆಸುವಂತೆ ಸೂಚಿಸಲಾಗಿದೆ. ಅಲ್ಲದೆ ಫಸ್ಟ್ ಸೆಮಿಸ್ಟರ್ ಪರೀಕ್ಷೆಯನ್ನು 2021ರ ಮಾರ್ಚ್ 8- 26ರ ಅವಧಿಯಲ್ಲಿ ನಡೆಸುವಂತೆಯೂ ನಿರ್ದೇಶನ ನೀಡಿದೆ. 
Join our WhatsApp group for latest news updates (2)