ವಾಯುಪಡೆ ವಿಮಾನ ಪತನ ; 22 ಮಂದಿ ಸಜೀವ ದಹನ

26-09-20 01:11 pm       Headline Karnataka News Network   ದೇಶ - ವಿದೇಶ

ಉಕ್ರೇನ್ ವಾಯುಪಡೆಯ ವಿಮಾನ, ಪೂರ್ವಪ್ರಾಂತ್ಯದ ಖರ್ಕೀವ್ ಬಳಿ ಪತನಗೊಂಡು ಮಿಲಿಟರಿ ಸಿಬ್ಬಂದಿ ಸೇರಿದಂತೆ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ.

ಕೀವ್, ಸೆಪ್ಟಂಬರ್ 26: ಉಕ್ರೇನ್ ವಾಯುಪಡೆಯ ವಿಮಾನ, ಪೂರ್ವಪ್ರಾಂತ್ಯದ ಖರ್ಕೀವ್ ಬಳಿ ಪತನಗೊಂಡು ಮಿಲಿಟರಿ ಸಿಬ್ಬಂದಿ ಸೇರಿದಂತೆ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ.

"ಇಪ್ಪತ್ತೆರಡು ಮಂದಿ ಮೃತಪಟ್ಟಿದ್ದಾರೆ" ಎಂದು ರಕ್ಷಣಾ ಖಾತೆ ಉಪಸಚಿವ ಅಂಟೋನ್ ಜೆರೆಶ್ನೆಕೋವ್ ಪ್ರಕಟಿಸಿದ್ದಾರೆ. ನಾಪತ್ತೆಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಹೇಳಿದ್ದಾರೆ. ಈ ಸಾರಿಗೆ ವಿಮಾನ 28 ಪ್ರಯಾಣಿಕರನ್ನು ಒಯ್ಯುತ್ತಿತ್ತು ಎನ್ನಲಾಗಿದ್ದು, ಇವರಲ್ಲಿ 21 ಮಂದಿ ಸೇನಾ ವಿದ್ಯಾರ್ಥಿಗಳು ಹಾಗೂ ಏಳು ಮಂದಿ ತಂತ್ರಜ್ಞರು.

"ಇದು ಆಘಾತಕಾರಿ ಘಟನೆ. ಅಪಘಾತಕ್ಕೆ ನಿಖರ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ" ಘಟನಾ ಸ್ಥಳಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಕ್ಸಿ ಶನಿವಾರ ಭೇಟಿ ನೀಡಲಿದ್ದಾರೆ. ಈ ದುರಂತದ ಕಾರಣ ಪತ್ತೆ ಮಾಡಲು ತನಿಖಾ ಆಯೋಗವನ್ನು ನೇಮಕ ಮಾಡಲಾಗುವುದು ಎಂದು ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂಟನೋವ್-26 ಸಾರಿಗೆ ವಿಮಾನ, ಚುಯೀವ್ ಸೇನಾ ನೆಲೆಯಿಂದ ಎರಡು ಕಿಲೋಮೀಟರ್ ದೂರದಲ್ಲಿ ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 8.50ಕ್ಕೆ ಅಪಘಾತಕ್ಕೀಡಾಗಿದೆ. ಅಪಘಾತ ಸಂಭವಿಸಿದ ತಕ್ಷಣ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದ್ದು, ಒಂದು ಗಂಟೆ ಕಾಲ ಉರಿಯುತ್ತಿತ್ತು ಎಂದು ಹೇಳಲಾಗಿದೆ.

Join our WhatsApp group for latest news updates (2)

video