ಬ್ರೇಕಿಂಗ್ ನ್ಯೂಸ್
01-08-20 07:56 pm ಶ್ವೇತಾ ಪ್ರಸನ್ನ ಹೆಗಡೆ, ಶಿರಸಿ ನ್ಯೂಸ್ View
ಭಾರತೀಯ ಸಮಾಜದಲ್ಲಿ ಮಹಿಳಾ ಶೋಷಣೆಯ ವಿಚಾರ ಹೆಚ್ಚಾಗಿ ಪ್ರತಿಧ್ವನಿಸುತ್ತಲೇ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷ ಶೋಷಣೆ ಎಂಬುದೂ ಪ್ರಮುಖ ವಿಚಾರವಾಗಿ ಆಧುನಿಕ ಕುಟುಂಬಗಳಲ್ಲಿ ಕಂಡುಬರುತ್ತಿದೆ. ಈ ಹಿನ್ನಲೆಯನ್ನು ಇಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಿದ್ದಾರೆ ಲೇಖಕಿ ಶ್ವೇತಾ ಪ್ರಸನ್ನ ಹೆಗಡೆ ಅವರು.
ಕಳೆದ ದಶಕದಲ್ಲಿ ಸಮಾಜದ ಸ್ಥಾನವು ನಾಟಕೀಯವಾಗಿ ಬದಲಾಗಿದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಪುರುಷರಿಂದ ಶೋಷಣೆಗೆ ಒಳಗಾಗುತ್ತಿದ್ದರು. ಆದರೆ ಈ ಆಧುನಿಕ ಯುಗದಲ್ಲಿ ಮಹಿಳಾ ಸಬಲೀಕರಣ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಕೆಲವು ಮಹಿಳೆಯರು ಸಹ ಪುರುಷರನ್ನು ತಮ್ಮ ಸಂಗಾತಿಗಳನ್ನು ನಿರಂತರವಾಗಿ ಶೋಷಣೆಗೆ ಒಳಪಡಿಸುತ್ತಿದ್ದಾರೆ. ಕೌಟುಂಬಿಕ ನೆಲೆಗಟ್ಟಿನಲ್ಲಿ ಭಾವನಾತ್ಮಕವಾಗಿ ಬಲಿಪಶು ಮಾಡುತ್ತಿದ್ದಾರೆ.
ಮದುವೆ ಎನ್ನುವುದು ಕೇವಲ ಒಪ್ಪಂದವಲ್ಲ. ಕಾನೂನಿನ ಅಡಿಯಲ್ಲಿ ಸಂಸ್ಕಾರವೆಂದು ಪರಿಗಣಿಸುತ್ತದೆ. ಕುಟುಂಬ ಮತ್ತು ಸಮಾಜದ ಆಧಾರವೆಂದರೆ ಮದುವೆ. ಯಾವುದೇ ಸಮಾಜದಲ್ಲಿ ಮದುವೆ ದೈಹಿಕ-ಮಾನಸಿಕ ಧಾರ್ಮಿಕ ಮತ್ತು ಸಾಮಾಜಿಕ ಅಂಶಗಳ ನಡುವಿನ ಸಂಬಂಧವನ್ನು ಉಳಿಸಿಕೊಳ್ಳುತ್ತದೆ. ಕುಟುಂಬ ಕುಟುಂಬಗಳಲ್ಲಿ ಸಾಮರಸ್ಯ ಬೆಸೆಯುವ ಬಂಧ. ಸಾಮೂಹಿಕ ಜೀವನದಲ್ಲಿ ಕುಟುಂಬ ಪ್ರಾಧಾನ್ಯತೆ ಹೆಚ್ಚಿನ ಒತ್ತು ನೀಡಲಾಗಿದೆ.
ಭಾರತದಲ್ಲಿ ಪುರುಷರ ಮೇಲಿನ ಕೌಟುಂಬಿಕ ಹಿಂಸಾಚಾರವನ್ನು ಕಾನೂನಿಂದ ಗುರುತಿಸಲಾಗಿಲ್ಲ. ಪುರುಷರ ಹಿಂಸಾಚಾರಕ್ಕೆ ಬಲಿಯಾಗಲು ಅಸಾಧ್ಯ ಎನ್ನುವ ಮಾನದಂಡ ಸಾಮಾನ್ಯ ಗ್ರಹಿಕೆ ಇದೆ. ಇತ್ತೀಚಿನ ವರ್ಷಗಳಲ್ಲಿ ತಮ್ಮ ಹೆಂಡತಿಯರಿಂದ ಕಿರುಕುಳಕ್ಕೆ ಒಳಗಾಗಿರುವ ಪುರುಷರ ಸಂಖ್ಯೆಯಲ್ಲಿ ಭಾರೀ ಏರಿಕೆ ಉಂಟಾಗಿದೆ. ಆಘಾತ ಒಂದೇ ಆಗಿದ್ದರೂ ನಿಂದನೆ ಉಂಟು ಮಾಡುವ ವಿಧಾನಗಳು ಬೇರೆ ಬೇರೆ.
ಹೆಚ್ಚಿನ ಪುರುಷರು ಕೌಟುಂಬಿಕ ನೆಲೆಗಟ್ಟಿನಲ್ಲಿ ತಮ್ಮ ಸಂಗಾತಿಗಳಿಂದ ಶೋಷಣೆಗೆ ಒಳಗಾಗುವುದನ್ನು ಅಧಿಕೃತವಾಗಿ ದೂರಿಕೊಳ್ಳಲು ಹೋಗುವುದಿಲ್ಲ. ಒಂದುವೇಳೆ ಹಾಗೆ ಮಾಡಿದಲ್ಲಿ, ಸಮಾಜದಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತಾರೆ ಮತ್ತು ತಮ್ಮ ಖ್ಯಾತಿಗೆ ಕುಂದುಂಟಾಗುತ್ತದೆ ಎಂಬ ಮನೋಭಾವ ಇದರ ಹಿಂದೆ ಅಡಗಿದೆ. ಇದರ ಬದಲಾಗಿ ಮಾನಸಿಕ ಸಂಘರ್ಷಕ್ಕೆ ಒಳಗಾಗಿ ಒಂಟಿತನದ ಮೊರೆ ಹೋಗುತ್ತಾರೆ ಮಾತ್ರವಲ್ಲದೇ ದುರಭ್ಯಾಸಗಳಿಗೆ ಒಳಗಾಗಿ ಆತ್ಮಹತ್ಯೆಯಂತಹ ನಿರ್ಧಾರಗಳನ್ನೂ ತೆಗೆದುಕೊಳ್ಳುವುದನ್ನು ನಾವು ಕಾಣಬಹುದಾಗಿರುತ್ತದೆ.
ಭಾರತದಲ್ಲಿ ಪುರುಷರು ಮಹಿಳೆಯರಿಂದ ವಿವಿಧ ರೀತಿಯ ಕ್ರೌರ್ಯಗಳನ್ನು ಎದುರಿಸುತ್ತಿದ್ದಾರೆ ಎಂಬ ಅಂಶವನ್ನು ನಾನು ಈಗಾಗಲೇ ಹೇಳಿದೆ. ಆದರೆ ಇಲ್ಲಿ ದೈಹಿಕ ದೌರ್ಜನ್ಯದ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಬದಲಾಗಿ ಭಾವನಾತ್ಮಕ ತಂತ್ರಗಳಿಗೆ ಒಳಗಾಗುತ್ತಿದ್ದಾರೆ. ಕುಟುಂಬ ಸುಗಮವಾಗಿ ಸಾಗಲು ಸ್ತ್ರೀ ಪಾಲುದಾರಿಕೆ ಹೆಚ್ಚಿನದಾಗಿದೆ. ಪತಿಯಂದಿರು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ನಿಂದಿಸುವದು ಮಾನಸಿಕವಾಗಿ ಜರ್ಜರಿತರಾಗುವಂತೆ ಮಾಡುವದು. ತಮ್ಮ ಪೋಷಕರೊಡಗೂಡಿ ಪ್ರತ್ಯೇಕ ನಿವಾಸದ ಬೇಡಿಕೆ, ಸುಳ್ಳು ಕೇಸುಗಳ ಮೂಲಕ ಪೋಲಿಸ್ ಕ್ರಮದ ಬೆದರಿಕೆ, ಪತಿಯನ್ನು ಅವರ ತಂದೆ ತಾಯಿಯರ ಸಂಪರ್ಕದಿಂದ ದೂರ ಮಾಡುವದು, ಮತ್ತು ಅವರನ್ನು ಮನೆಯಂದಾಚೆ ಹಾಕಲು ಪ್ರಯತ್ನಿಸುವದು ಇತ್ಯಾದಿ.
ಇನ್ನು ಪತಿಯು ತನ್ನ ಕೋರಿಕೆಯನ್ನು ಈಡೇರಿಸದೇ ಇದ್ದಲ್ಲಿ, ಚುಚ್ಚು ಮಾತುಗಳ ಮೂಲಕ ಅವರನ್ನು ಹಿಂಸಿಸುವದು. ಪುರುಷ ಸಂಗತಿಗಳನ್ನು ಅವಹೇಳನಕಾರಿ ಹೆಸರುಗಳಿಂದ ಕರೆಯುವದು, ಕೀಳರಿಮೆ ಮೂಡಿಸಲು ನೋಯಿಸುವ ಉದ್ದೇಶದಿಂದ ದುರ್ಬಲರು, ನಪುಂಸಕ ಹೆಸರಿನಿಂದ ಕರೆಯುವದು ಇತ್ಯಾದಿ. ಇನ್ನು ಪತಿ ಪತ್ನಿ ಪ್ರತ್ಯೇಕವಾಗುವ ಅನಿವಾರ್ಯತೆ ಎದುರಾದ ಸಂದರ್ಭಗಳಲ್ಲಿ ತನ್ನದೇ ಸ್ವಂತ ಮಗುವಿನ ಪಾಲನೆಯನ್ನು ನಿರಾಕರಿಸುವದು ಇತ್ಯಾದಿಗಳನ್ನು ಸಾಮಾನ್ಯ ಉದಾಹರಣೆಯಾಗಿ ನೀಡಬಹುದು.
ಸ್ಟೇಟಸ್ ಪ್ರೆಸ್ಟೀಜ್ ಗಳಿಗೆ ಮೊರೆ ಹೋಗುವ ಮಹಿಳೆಯರು ಪತಿಯಂದಿರನ್ನು ಆರ್ಥಿಕವಾಗಿ ಹಿಂಸೆ ಮಾಡುತ್ತಿದ್ದಾರೆ. ಸಂಗಾತಿಗಳ ಮೇಲೆ ನಿರಂತರವಾದ ಬೇಡಿಕೆಗಳನ್ನು ಇಡುವುದು. ದುಬಾರಿ ಬೆಲೆಯ ಆಭರಣಗಳು ಬಟ್ಟೆಗಳು ವಾಹನಗಳು ಮನೆಗಳ ಖರೀದಿ, ಹೀಗೆ ಹಣಕಾಸಿನ ಬೇಡಿಕೆಗಳಿಗೆ ಅಧಿಕವಾಗಿ ಪುರುಷ ಸಂಗಾತಿಗಳು ತುತ್ತಾಗುತ್ತಿದ್ದಾರೆ.
ಮೊದಲಿನಿಂದಲೂ ಸ್ತ್ರೀ ವರ್ಗದವರು ಪುರುಷರಿಂದ ಹೆಚ್ಚಾಗಿ ದೈಹಿಕ ಶೋಷಣೆಗೆ ಒಳಪಟ್ಟಿದ್ದಾರೆ. ಆದರೆ ಕಾನೂನುಗಳು ಮಹಿಳೆಯರಿಗೆ ಸುರಕ್ಷಿತತೆ ನಿರ್ಮಿಸಿಕೊಟ್ಟಿದ್ದು ಇವರ ಪಾಲಿಗೆ ವರದಾನವಾಗಿದೆ. ಆದರೆ ಕೆಲವು ಸ್ತ್ರೀಯರು ತಮಗಾಗಿಯೇ ಇರುವ ಕಾನೂನುಗಳ ಬಲ ಪಡೆದು, ಅದರ ಅಡಿಯಲ್ಲಿ ಸಂಗತಿಗಳ ಮೇಲೆ ವರದಕ್ಷಿಣೆ ಕಿರುಕುಳ ಇತ್ಯಾದಿ ಕೌಟುಂಬಿಕ ದೌರ್ಜನ್ಯ ಆರೋಪಗಳನ್ನು ದಾಖಲಿಸುವುದು, ಸೆರಮನೆಗೆ ಅಟ್ಟಲು ಪ್ರಯತ್ನಿಸುವದು… ಹೀಗೆ ಕಾನೂನಿನ ಅಡಿಯಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ .
ಇತ್ತೀಚೆಗೆ ಮಾತೆತ್ತಿದರೇ ಡೈವೋರ್ಸ್ ಅಸ್ತ್ರವನ್ನೇ ಡೈರೆಕ್ಟ್ ಆಗಿ ಮಹಿಳಾಮಣಿಯರು ಪ್ರಯೋಗ ಮಾಡುತ್ತಿದ್ದಾರೆ. ಭಾವನಾತ್ಮಕವಾಗಿ ಶೋಷಣೆ ಮಾಡಿ ಆರ್ಥಿಕವಾಗಿ ಪಾಲು ಪಡೆಯಲು ಪಯತ್ನ, ಸಾಮಾಜಿಕ ಸಂಬಂಧಗಳನ್ನು ಹಾಳುಗೆಡುವ ಹೊಸ ಟ್ರೆಂಡ್ ಶುರುವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಪುರುಷರು ಜಾಸ್ತಿ ಶೋಷಿತರಾಗುತ್ತದ್ದಾರೋ ಮಹಿಳೆಯರೋ ಅನ್ನುವದು ನ್ಯಾಯ ಸಮ್ಮತವಲ್ಲ. ಅಂದಿನಿಂದ ಇಂದಿನವರೆಗೂ ಹೇಗೆ ನೋಡಿದರೂ ಸಮಸ್ತ ದುರ್ಬಲ ಸ್ರೀ ವರ್ಗ ಪುರುಷ ಪ್ರಧಾನ ಸಮಾಜದಿಂದ ಶೋಷಿತವಾಗಿದ್ದು ಜಾಸ್ತಿ. ಹೊಸದಾಗಿ ಶುರುವಾಗಿರುವ ಆಧುನಿಕ ಟ್ರೆಂಡ್ ನಲ್ಲಿ ಕಾನೂನುಗಳ ಮೊರೆ ಹೋಗಿ ಮಹಿಳೆಯರ ಹಕ್ಕುಗಳ ದುರುಪಯೋಗವಾಗುತ್ತಿರುವುದು ಮಾತ್ರ ವಾಸ್ತವ.
ಪುರುಷರ ಮೇಲಿನ ನಿಂದನೆ ನಗುವ ವಿಷಯವಲ್ಲ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ ನಡೆಯುವ ಸಭೆಗಳಲ್ಲಿ ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ನಮಗೆ ಆಗುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ.
29-03-25 09:19 pm
HK News Desk
Mysuru three drowned, Lake, Ugadi: ಮೈಸೂರು ; ಹ...
29-03-25 03:13 pm
Naxal Karanataka, Anti Naxal Force: ನಕ್ಸಲ್ ನಿ...
28-03-25 10:47 pm
Minister Rajanna, honeytrap, Son, Murder atte...
28-03-25 12:19 pm
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
29-03-25 04:40 pm
HK News Desk
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
30-03-25 11:02 pm
Mangaluru HK Staff
Mangalore, Ullal Netravati Bridge Repair, Tra...
30-03-25 03:07 pm
Kumapla, Mangalore, Crime: ಲಕೋಟೆಯಲ್ಲಿ ಸಂಸ್ಕರಿ...
30-03-25 02:39 pm
Mangalore CM Medal, Anupam Agrawal, Police Ma...
29-03-25 11:04 pm
MLC Ivan D'Souza, Mangalore: 7ನೇ ವೇತನ ಆಯೋಗ ;...
29-03-25 10:07 pm
30-03-25 08:59 am
Mangaluru Correspondent
ಆಂಧ್ರದಲ್ಲಿ ಪ್ಯಾಸ್ಟರ್ ಪ್ರವೀಣ್ ಕುಮಾರ್ ಸಂಶಯಾಸ್ಪದ...
29-03-25 10:33 pm
Bajrang Dal, Arrest, Cow Transport, Mangalore...
29-03-25 04:02 pm
Mangalore Nandigudde Prostitution case: ನಂದಿಗ...
28-03-25 09:25 pm
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm