ಜೂನ್‌ 3ರಿಂದ "ಕೆ.ಜಿ.ಎಫ್‌ –2" ಅಮೆಜಾನ್ ಪ್ರೈಮ್​ನಲ್ಲಿ ಲಭ್ಯ

01-06-22 02:48 pm       HK News Desk   ಸಿನಿಮಾ

ಬಾಕ್ಸ್‌ ಆಫೀಸ್‌ನಲ್ಲಿ ದೂಳೆಬ್ಬಿಸಿದ ಯಶ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ಕೆ.ಜಿ.ಎಫ್‌ ಚಾಪ್ಟರ್‌–2, ಜೂನ್‌ 3ರಿಂದ ಒಟಿಟಿ ವೇದಿಕೆ ಪ್ರೈಂ ವಿಡಿಯೋನಲ್ಲಿ ಉಚಿತವಾಗಿ ವೀಕ್ಷಣೆಗೆ ಲಭ್ಯವಾಗಲಿದೆ.

 ಜೂನ್ 1 : ಬಾಕ್ಸ್‌ ಆಫೀಸ್‌ನಲ್ಲಿ ದೂಳೆಬ್ಬಿಸಿದ ಯಶ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ಕೆ.ಜಿ.ಎಫ್‌ ಚಾಪ್ಟರ್‌–2, ಜೂನ್‌ 3ರಿಂದ ಒಟಿಟಿ ವೇದಿಕೆ ಪ್ರೈಂ ವಿಡಿಯೋನಲ್ಲಿ ಉಚಿತವಾಗಿ ವೀಕ್ಷಣೆಗೆ ಲಭ್ಯವಾಗಲಿದೆ.

ಕೆಲವು ದಿನಗಳ ಹಿಂದೆಯೇ ಸಿನಿಮಾ ಪ್ರೈಂ ವಿಡಿಯೋನಲ್ಲಿ ಬಿಡುಗಡೆಯಾಗಿತ್ತು. ಆದರೆ, ಪ್ರೈಂ ಚಂದಾದಾರರಾಗಿದ್ದರೂ ಈ ಸಿನಿಮಾ ವೀಕ್ಷಿಸಲು  ಹಣ ಪಾವತಿಸಬೇಕಿತ್ತು. ಜೂನ್‌ 3ರಿಂದ ಚಂದಾದಾರರು ಉಚಿತವಾಗಿ ಈ ಸಿನಿಮಾ ನೋಡಬಹುದು.

KGF 2 Release Making Amazon Prime Happy

ಯಶ್ ನಾಯಕನಾಗಿ ನಟಿಸಿದ ಚಿತ್ರವು ಪ್ರಪಂಚದಾದ್ಯಂತ 1000 ಕೋಟಿಗೂ ಹೆಚ್ಚು ಹಣ ಗಳಿಸಿದೆ ಹಾಗೂ ಭಾರತದಾದ್ಯಂತ ಅನೇಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯಿತು. ಕೆಜಿಎಫ್  2, ಏಪ್ರಿಲ್ 14 ರಂದು ಬಿಡುಗಡೆಯಾಯಿತು.

ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮತ್ತು ಪ್ರಕಾಶ್ ರಾಜ್ ನಟಿಸಿರುವ ಈ ಚಿತ್ರಕ್ಕೆ ಭುವನ್ ಗೌಡ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರ್ ಅವರ ಸಂಗೀತವಿದೆ.

KGF-2 will be available on Amazon Prime from June 3.