ಬ್ರೇಕಿಂಗ್ ನ್ಯೂಸ್
26-08-22 10:27 am Bangalore Correspondent ಸಿನಿಮಾ
ಬೆಂಗಳೂರು, 26 ಆಗಸ್ಟ್ 2022: ವೂಟ್ ಸೆಲೆಕ್ಟ್ ನಲ್ಲಿ ಬಹುನಿರೀಕ್ಷಿತ ಕನ್ನಡ ಕಾಮೆಡಿ ಚಿತ್ರ ಪೆಟ್ರೋಮ್ಯಾಕ್ಸ್ 26 ಆಗಸ್ಟ್ 2022 ರಂದು ಪ್ರಸಾರವಾಗಲಿದೆ. ಇದು ವೂಟ್ ಸೆಲೆಕ್ಟ್ ನ ಎಕ್ಸ್ ಕ್ಲೂಸಿವ್ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ ಆಗಿದ್ದು, ಸ್ಟ್ರೀಮಿಂಗ್ ಆಗಲಿದೆ. ಈ ಸಿನೆಮಾವನ್ನು ವಿಜಯಪ್ರಸಾದ್ ಅವರು ರಚನೆ ಮಾಡಿ ನಿರ್ದೇಶನ ಮಾಡಿದ್ದು, ಸುಧೀರ್ ಕೆಎಂ ಮತ್ತು ರಾಜಶೇಖರ್ ಕೆಜಿ ಅವರು ನಿರ್ಮಾಣ ಮಾಡಿದ್ದಾರೆ. ಖ್ಯಾತ ನಟರಾದ ಸತೀಶ್ ನೀನಾಸಂ, ಹರಿಪ್ರಿಯಾ, ನಾಗಭೂಷಣ್, ಕಾರುಣ್ಯ ರಾಂ, ಅಚ್ಯುತ್ ಕುಮಾರ್, ಸುಮನ್ ರಂಗನಾಥನ್ ಮತ್ತು ಅರುಣ್ ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸಂಪೂರ್ಣ ವಯಸ್ಕ ಕಾಮೆಡಿ ಶೋ ಆಗಿದ್ದು, ಕುಟುಂಬದ ಮೌಲ್ಯಗಳು ಮತ್ತು ಸಂಬಂಧಗಳ ಮೌಲ್ಯಗಳನ್ನು ಎತ್ತಿಹಿಡಿಯುವ ಅಂಶಗಳನ್ನು ಒಳಗೊಂಡಿರುವ ಈ ಸಿನೆಮಾ ``ಬೆಳಕು ಮತ್ತು ಜೀವನ’’ದ ರೀತಿಯಲ್ಲಿದೆ.
ಪೆಟ್ರೋಮ್ಯಾಕ್ಸ್ ಚಿತ್ರವು ನಾಲ್ವರು ಅನಾಥರ ಜೀವನದ ಮೇಲೆ ಕೇಂದ್ರೀಕೃತವಾಗಿದೆ. ಊದಬತ್ತಿ ಶಿವಪ್ಪ, ಅಗರಬತ್ತಿ ಮಾದಪ್ಪ, ಕೃಷ್ಣಮೂರ್ತಿ ಮತ್ತು ಕವಿತಾ ಕೃಷ್ಣಮೂರ್ತಿ ಪಾತ್ರಧಾರಿಗಳಿದ್ದು, ಇವರು ತಮ್ಮ ಪೋಷಕರಿಂದ ಬೇಷರತ್ತಾಗಿ ಪ್ರೀತಿಯನ್ನು ಪಡೆಯುವುದನ್ನು ಅನ್ವೇಷಣೆ ಮಾಡಲಿದ್ದಾರೆ. ಬಾಲ್ಯದಿಂದಲೂ ಅನಾಥಾಶ್ರಮದಲ್ಲಿ ಬೆಳೆದ ಈ ನಾಲ್ವರು ಪೋಷಕರಿಂದ ಕಾಳಜಿ ಮತ್ತು ಸಹಾನುಭೂತಿಯನ್ನು ಪಡೆಯಲು ಹಾತೊರೆಯುತ್ತಾರೆ. ವಿಧಿಯ ಪ್ರಕಾರ ಅವರು ತಮ್ಮ ಮನೆಯನ್ನು ಹುಡುಕಲು ಆರಂಭಿಸಿದಾಗ ಅವರಿಗೆ ರಿಯಲ್ ಎಸ್ಟೇಟ್ ಏಜೆಂಟ್ ಮೀನಾಕ್ಷಿ ಅವರ ಪರಿಚಯವಾಗುತ್ತದೆ. ಆಕೆ ಅವರನ್ನು ಅಡ್ಡದಾರಿ ಹಿಡಿಯುವಂತೆ ಮಾಡುತ್ತಾಳೆ. ಅಂತಿಮವಾಗಿ ಮೀನಾಕ್ಷಿ ಊದಬತ್ತಿ ಶಿವಪ್ಪನನ್ನು ಪ್ರೀತಿಸುತ್ತಾಳೆ. ನಂತರ ಎಲ್ಲರೂ ಸೇರಿ ಮನೆಗಳನ್ನು ಹುಡುಕಲು ಆರಂಭಿಸುತ್ತಾರೆ, ಏಕಾಂಗಿ ಜೀವನದ ಪ್ರಯೋಗಗಳು ಮತ್ತು ಕ್ಲೇಶಗಳನ್ನು ಬಿಂಬಿಸುವ ಈ ಚಿತ್ರವು ಒಡನಾಟ, ಮಾನವ ಸಂಬಂಧಗಳು ಮತ್ತು ಒಗ್ಗಟ್ಟಿನ ಸಾರವನ್ನು ವಿವರಿಸುತ್ತದೆ. ಈ ಸಂತೋಷಕರವಾದ ಚಿತ್ರಣವನ್ನು ವೂಟ್ ಸೆಲೆಕ್ಟ್ ನಲ್ಲಿ ಮಾತ್ರ ವೀಕ್ಷಿಸಿ.ಸತೀಶ್ ನೀನಾಸಂ ಅವರು ಈ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ``ನನಗೆ ಪೆಟ್ರೋಮ್ಯಾಕ್ಸ್ ಒಂದು ಅನನ್ಯವಾದ ಚಿತ್ರವಾಗಿದೆ. ಅತ್ಯಂತ ಸರಳವಾದ ರೀತಿಯಲ್ಲಿ ಕತೆಯನ್ನು ಹೆಣೆದಿರುವುದು ಸಂತಸ ತಂದಿದೆ. ದೈನಂದಿನ ಜೀವನದ ಸಂಕೀರ್ಣತೆಗಳ ಜೊತೆಗೆ ಭಾವನಾತ್ಮಕತೆಯನ್ನು ಮತ್ತು ವಿನೋದವನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ. ಇದು ನಟನೆಯಲ್ಲಿ ಮಾಸ್ಟರ್ ಕ್ಲಾಸ್ ಆಗಿದ್ದು, ಮಾನವನ ಭಾವನೆಗಳನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುವುದು ಸ್ವತಃ ಒಂದು ಸವಾಲಾಗಿದೆ. ಈ ಚಿತ್ರವು ಪ್ರತಿಯೊಂದು ದೃಶ್ಯದಲ್ಲಿಯೂ ನನ್ನ ಮಿತಿಗಳನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ವೂಟ್ ಸೆಲೆಕ್ಟ್ ನಲ್ಲಿ ಚಿತ್ರದ ಒಟಿಟಿ ಚೊಚ್ಚಲ ಪ್ರದರ್ಶನವನ್ನು ವೀಕ್ಷಿಸಲು ನಾನು ಉತ್ಸುಕನಾಗಿದ್ದೇನೆ ಮತ್ತು ಅದನ್ನು ದೇಶಾದ್ಯಂತ ಹೆಚ್ಚಿನ ಪ್ರೇಕ್ಷಕರಿಗೆ ತಲುಪಿಸುತ್ತಿರುವುದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ’’ ಎಂದರು.
ಚಿತ್ರ ನಿರ್ದೇಶಕ ವಿಜಯ ಪ್ರಸಾದ್ ಅವರು ಮಾತನಾಡಿ, ``ವಾಸ್ತವ ಜೀವನದಲ್ಲಿ ನಡೆಯುತ್ತಿರುವ ಸಾಮಾಜಿಕ ಸಮಸ್ಯೆಗಳ ಸುತ್ತ ಈ ಚಿತ್ರವನ್ನು ಮಾಡಲಾಗಿದೆ. ಇದು ಆಧನಿಕ ಮತ್ತು ಸಾಂಪ್ರದಾಯಿಕ ಜೀವನವು ತಡೆರಹಿತ ರೀತಿಯಲ್ಲಿ ಸಹಬಾಳ್ವೆ ನಡೆಸುವ ಸಾಧ್ಯತೆಯನ್ನು ತೋರಿಸುತ್ತದೆ. ಸ್ಕ್ರೀನ್ ಮೇಲೆ ನನ್ನ ದೃಷ್ಟಿಯನ್ನು ಜೀವಂತಗೊಳಿಸಲು ತುಂಬಾ ಕಷ್ಟಪಟ್ಟು ಪ್ರೀತಿಯಿಂದ ಕೆಲಸ ಮಾಡಿದ ನಮ್ಮ ನೆಚ್ಚಿನ ಕಲಾವಿದರು ಮತ್ತು ಸಿಬ್ಬಂದಿಗೆ ನಾನು ಕೃತಜ್ಞನಾಗಿದ್ದೇನೆ. ಒಟಿಟಿ ಬಿಡುಗಡೆಯ ಮೂಲಕ ವಿಭಿನ್ನವಾದ ವಿಮರ್ಶೆಗಳು ಮತ್ತು ಗ್ರಹಿಕೆಗಳನ್ನು ಅಳೆಯಲು ಇದು ನಮಗೆ ಸಹಾಯ ಮಾಡುತ್ತದೆ. ಇದನ್ನು ನೋಡಲು ನಾವು ಕುತೂಹಲದಿಂದ ಕಾಯುತ್ತಿದ್ದೇವೆ. ನಮ್ಮ ಪ್ರೀತಿಯ ಶ್ರಮವಾಗಿರುವ ಪೆಟ್ರೋಮ್ಯಾಕ್ಸ್ ಅನ್ನು ಇದೀಗ ವೂಟ್ ಸೆಲೆಕ್ಟ್ ನಲ್ಲಿ ಎಕ್ಸ್ ಕ್ಲೂಸಿವ್ ಆಗಿ ಸ್ಟ್ರೀಮಿಂಗ್ ಮಾಡಿ’’ ಎಂದು ಹೇಳಿದರು.
ಸಿನಿಮಾ ಸೇರಿದಂತೆ ಇನ್ನಿತರೆ ಮನರಂಜನೆಯ ಶೋಗಳನ್ನು ಸ್ಟ್ರೀಮಿಂಗ್ ಮಾಡುವ ಮೂಲಕ ಮನೆ ಮಾತಾಗಿರುವ ವೂಟ್ ಸೆಲೆಕ್ಟ್ ದೇಶದ ಎಲ್ಲಾ ಭಾಗಗಳಿಗೆ ಹೊಂದಿಕೆಯಾಗುವಂತಹ ಕಾರ್ಯಕ್ರಮಗಳನ್ನು ಪೂರೈಸುವುದನ್ನು ಮುಂದುವರಿಸುತ್ತಿದೆ. ಈ ನಿಟ್ಟಿನಲ್ಲಿ ಕನ್ನಡದ ಬಹುನಿರೀಕ್ಷಿತ ಚಿತ್ರ ಪೆಟ್ರೋಮ್ಯಾಕ್ಸ್ ಅನ್ನು ವೀಕ್ಷಕರ ಮನೆಯೊಳಗಿನ ಪರದೆಯಲ್ಲಿ ತರುತ್ತಿದೆ.
• ಆಗಸ್ಟ್ 26 ರಂದು ಪ್ರಸಾರವಾಗಲಿರುವ ಬಹುನಿರೀಕ್ಷಿತ ಚಿತ್ರ
• ಹಲವರು ಮುಖ್ಯಭೂಮಿಕೆಯಲ್ಲಿ ಸತೀಶ್ ನೀನಾಸಂ, ಕಾರುಣ್ಯ ರಾಂ, ಅಚ್ಯುತ್ ಕುಮಾರ್
• ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ
Watch Petromax exclusively on Voot Select, streaming from 26th August 2022!
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm