'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್‌ಗೆ ಪ್ರಶಸ್ತಿಗಳನ್ನು ತಂದುಕೊಟ್ಟ ಸಿನಿಮಾಗಳ ಪಟ್ಟಿ ಇಲ್ಲಿದೆ

02-09-22 03:49 pm       Source: Vijayakarnataka   ಸಿನಿಮಾ

ತಮ್ಮ ಅದ್ಭುತ ನಟನೆಯಿಂದ ಎಲ್ಲರನ್ನೂ ಮೋಡಿ ಮಾಡಿರುವ ನಟ ಕಿಚ್ಚ ಸುದೀಪ್. ಹಾಗಾಗಿಯೇ ಅವರನ್ನು ಅಭಿಮಾನಿಗಳು 'ಅಭಿನಯ ಚಕ್ರವರ್ತಿ' ಎಂದು ಕರೆಯುತ್ತಾರೆ. ಸುದೀಪ್ ಜನ್ಮದಿನದ...

ನಟ 'ಕಿಚ್ಚ' ಸುದೀಪ್ ಅವರಿಗೆ ಇಂದು (ಸೆ.2) ಹುಟ್ಟುಹಬ್ಬದ ಸಂಭ್ರಮ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಕಿಚ್ಚ ಸುದೀಪ್ ಅವರ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಡಬಲ್ ಸಂಭ್ರಮ ಇದೆ. ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ದೊಡ್ಡ ಗೆಲುವು ಕಂಡಿದೆ. ಅಲ್ಲದೆ, ಸೆ.2ರಂದೇ ಆ ಸಿನಿಮಾ ಓಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ಜೊತೆಗೆ ಹುಟ್ಟುಹಬ್ಬ. ಅಭಿಮಾನಿಗಳು ಖುಷಿಯಿಂದ ಸುದೀಪ್ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.

ಅಂದಹಾಗೆ, ಸುದೀಪ್‌ ಒಬ್ಬ ಅದ್ಭುತ ನಟ ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ನಟನಾ ಸಾಮರ್ಥ್ಯದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸುದೀಪ್ ಸಂಪಾದಿಸಿದ್ದಾರೆ. ಸುದೀಪ್ ಅವರ ಅಭಿನಯಕ್ಕೆ ಹಲವು ಪ್ರಶಸ್ತಿಗಳು ಕೂಡ ಲಭಿಸಿವೆ. ಅವರ ಯಾವ ಸಿನಿಮಾಗಳಿಗೆ ಯಾವೆಲ್ಲ ಪ್ರಶಸ್ತಿ ಸಿಕ್ಕಿವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಫಿಲ್ಮ್‌ಫೇರ್ ಪ್ರಶಸ್ತಿ

Vikrant Rona' Box-office Day 3: Kiccha Sudeep's film to become the 4th  Kannada film to mint Rs 100 crores this year | Telugu Movie News - Times of  India
ಕಿಚ್ಚ ಸುದೀಪ್ ಅವರಿಗೆ ಒಟ್ಟು 4 ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಸಿಕ್ಕಿದೆ. ಮೊದಲು ಅವರಿಗೆ 'ಹುಚ್ಚ' ಚಿತ್ರದ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಸಿಕ್ಕಿತ್ತು. ನಂತರದ ಎರಡು ವರ್ಷಗಳು ಕೂಡ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ಸಿಕ್ಕಿತ್ತು. 2002ರಲ್ಲಿ 'ನಂದಿ' ಹಾಗೂ 2003ರಲ್ಲಿ 'ಸ್ವಾತಿಮುತ್ತು' ಸಿನಿಮಾದ ನಟನೆಗಾಗಿ ಸುದೀಪ್ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ಸಿಕ್ಕಿದೆ. 2012ರಲ್ಲಿ 'ಈಗ' ಚಿತ್ರದ ನಟನೆಗಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸುದೀಪ್ ಅವರಿಗೆ ಸಿಕ್ಕಿದೆ. ಈ ಮಧ್ಯೆ ಹಲವು ಬಾರಿ ಅವರು ಫಿಲ್ಮ್‌ಫೇರ್ ಪ್ರಶಸ್ತಿ ಪಟ್ಟಿಯಲ್ಲಿ ನಾಮಿನೇಟ್ ಕೂಡ ಆಗಿದ್ದಾರೆ.

ರಾಜ್ಯ ಪ್ರಶಸ್ತಿ

Nandi ನಂದಿ Full Kannada Action Movie | ‪‎Sudeep‬, ‪‎SindhuMenon‬ ‪| ‬New  Kannada Release Movie 2017 - YouTube
2002-2003ರ ಸಾಲಿನ ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿಯು ಸುದೀಪ್‌ ಅವರಿಗೆ ಲಭಿಸಿತ್ತು. ಆ ವರ್ಷ ತೆರೆಕಂಡ 'ನಂದಿ' ಚಿತ್ರದ ಅಭಿನಯಕ್ಕಾಗಿ ಸುದೀಪ್‌ ಅವರಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಲಭಿಸಿತ್ತು.

Prime Video: Eega

ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಸುದೀಪ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ತೆಲುಗು, ತಮಿಳು, ಹಿಂದಿಯಲ್ಲೂ ತೆರೆಕಂಡಿತ್ತು. ಜೊತೆಗೆ ಈ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದಕ್ಕಾಗಿ ಸುದೀಪ್ ಅವರಿಗೆ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಸೈಮಾ ಪ್ರಶಸ್ತಿ, ಸಿನಿಮಾ ಅವಾರ್ಡ್ಸ್, ಟೊರಂಟೋ ಫಿಲ್ಮ್‌ಫೆಸ್ಟಿವಲ್‌ ಅವಾರ್ಡ್, ನಂದಿ ಪ್ರಶಸ್ತಿ (ಖಳ ನಟ) ಹೀಗೆ ಸಾಕಷ್ಟು ಪ್ರಶಸ್ತಿಗಳು ಸುದೀಪ್ ಅವರಿಗೆ ಸಿಕ್ಕಿವೆ. ಈ ಒಂದು ಸಿನಿಮಾದಿಂದ ಸುದೀಪ್ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದ್ದು ಸುಳ್ಳಲ್ಲ.

ಕಿಚ್ಚ ಸುದೀಪ್ ಹೊಸ ಸಿನಿಮಾ ಯಾವುದು?

Kabza Pan India Cinema : ಕಬ್ಜ ಪ್ಯಾನ್‌ ಇಂಡಿಯಾ ಸಿನಿಮಾಕ್ಕೆ ಆರ್‌ ಆರ್‌ ಆರ್‌  ಬೆಡಗಿ - Kanlish News : Karnataka - Latest Kannada Breaking News Today,  Headlines, Movies, Fashion, Political, Sports News And Entertainment ...
ಪ್ರಸ್ತುತ ಸುದೀಪ್‌ ಯಾವ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ. ಉಪೇಂದ್ರ ಅವರ 'ಕಬ್ಜ' ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿರುವುದು ಬಿಟ್ಟರೆ, ಬೇರಾವ ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡಿಲ್ಲ. ಹಾಗಾಗಿ, ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

Vikrant Rona Actor Kiccha Sudeeps Movies And Awards List.