ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಕಬ್ಜ' ಟೀಸರ್‌ ರಿಲೀಸ್ ಮಾಡಲಿರುವ ರಾಣಾ ದಗ್ಗುಬಾಟಿ

17-09-22 01:01 pm       Source: Vijayakarnataka   ಸಿನಿಮಾ

ರಿಯಲ್‌ ಸ್ಟಾರ್‌ ಉಪೇಂದ್ರ ನಾಯಕರಾಗಿ ನಟಿಸಿರುವ ‘ಕಬ್ಜ’ ಸಿನಿಮಾದ ಟೀಸರ್‌ ಇಂದು ಅದ್ಧೂರಿ ಕಾರ್ಯಕ್ರಮ ನಡೆಯಲಿದ್ದು, ದಕ್ಷಿಣ.

ಕನ್ನಡ ಚಿತ್ರರಂಗದ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾದ ‘ಕಬ್ಜ’ ಸಿನಿಮಾದ ( Kabzaa ) ಟೀಸರ್‌ ಇಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ವಿಶೇಷ ಎಂದರೆ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಟಾಲಿವುಡ್‌ನ ಖ್ಯಾತ ನಟ ರಾಣಾ ದಗ್ಗುಬಾಟಿ ( Rana Daggubati ) ಭಾಗವಹಿಸಿ, ಟೀಸರ್‌ ಬಿಡುಗಡೆ ಮಾಡಲಿದ್ದಾರೆ. ಇವರ ಜತೆ ಸ್ಯಾಂಡಲ್‌ವುಡ್‌ನ ಪ್ರಮುಖ ನಟರು ಸಹ ಹಾಜರಿರಲಿದ್ದಾರೆ.

ಆರ್‌.ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ ಏಳೆಂಟು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ‘ಕೆಜಿಎಫ್‌’ ನಂತರ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿ ಉಪೇಂದ್ರ ( Upendra ) ಜತೆಗೆ ಕಿಚ್ಚ ಸುದೀಪ್‌ ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಶ್ರಿಯಾ ಸರಣ್‌ ನಾಯಕಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಕಂಪ್ಲೀಟ್‌ ಮಾಡಿರುವ ಆರ್‌.ಚಂದ್ರು ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಈ ಟೀಸರ್‌ ಅನ್ನು ತಮ್ಮ ಕಡೆಯಿಂದ ಉಪ್ಪಿಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ.

Rana Daggubati to release Upendra's 'Kabzaa' teaser tomorrow | Kannada Movie  News - Times of India

‘ಕಬ್ಜ’ ತನ್ನ ಕಥೆ ಮತ್ತು ಮೇಕಿಂಗ್‌ ವಿಚಾರದಲ್ಲಿ ಕನ್ನಡ ಚಿತ್ರರಂಗವನ್ನು ಮತ್ತೊಮ್ಮೆ ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗುವಂತಹ ಸಿನಿಮಾ ಎಂಬ ಮಾತು ಹಲವರಿಂದ ಕೇಳಿಬರುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಮೋಶನ್‌ ಪೋಸ್ಟರ್‌ ಮತ್ತು ಫೋಟೊಗಳ ಮೂಲಕ ಬಾಲಿವುಡ್‌ ಸೇರಿದಂತೆ ಹಲವು ಕಡೆಗಳಲ್ಲಿಸಿನಿಮಾಗೆ ಡಿಮಾಂಡ್‌ ಬಂದಿದೆ.

Kabzaa Movie Cast & Crew and Release Date Details

‘ಇಂದು ರಾಣಾ ದಗ್ಗುಬಾಟಿ ಟೀಸರ್‌ ಬಿಡುಗಡೆ ಮಾಡಲಿದ್ದಾರೆ. ನಮ್ಮ ತಂಡದಿಂದ ಉಪೇಂದ್ರ, ಶ್ರಿಯಾ ಸರಣ್‌ ಸೇರಿದಂತೆ ಎಲ್ಲಾ ಕಲಾವಿದರು, ತಂತ್ರಜ್ಞರು ಹಾಜರಿರಲಿದ್ದಾರೆ. ಇಷ್ಟು ದಿನ ಬರೀ ಸ್ಟಿಲ್ಸ್‌ ಮೂಲಕ, ಪೋಸ್ಟರ್‌ಗಳ ಮೂಲಕ ‘ಕಬ್ಜ’ದ ಬಗೆಗೆ ತಿಳಿದುಕೊಂಡಿದ್ದವರಿಗೆ ಆ ಸಿನಿಮಾದಲ್ಲಿ ವಿಷುಯಲ್ಸ್‌ ಹೇಗಿರುತ್ತದೆ ಎಂಬ ಝಲಕ್‌ ಟೀಸರ್‌ನಲ್ಲಿ ತೋರಿಸಲಿದ್ದೇವೆ’ ಎಂದು ಹೇಳುತ್ತಾರೆ ನಿರ್ದೇಶಕ ಚಂದ್ರು.

‘ಕೆಜಿಎಫ್‌’ ನಂತರ ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದಂತಹ ಸಿನಿಮಾಗಳ ಸಾಲಿಗೆ ‘ಕಬ್ಜ’ ಸಹ ಸೇರಿಕೊಳ್ಳುತ್ತದೆ ಎಂದು ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದ ಕಥೆಗಾಗಿ ಆರ್‌. ಚಂದ್ರು ಸುಮಾರು 140 ದಿನಗಳಿಗೂ ಅಧಿಕ ಕಾಲ ಚಿತ್ರೀಕರಣ ನಡೆಸಿದ್ದಾರೆ. ಬೆಂಗಳೂರು, ಮಂಗಳೂರು, ವಿಶಾಖಪಟ್ಟಣ, ಹೈದರಾಬಾದ್‌ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿಬೃಹತ್‌ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗಿದೆ.

ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದು, ಎ.ಜೆ. ಶೆಟ್ಟಿ ಸಿನಿಮಾಟೋಗ್ರಾಫರ್‌ ಆಗಿ ಕೆಲಸ ಮಾಡಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದ ಖ್ಯಾತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಟೀಸರ್‌ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಚಾರವನ್ನು ಚಂದ್ರು ಅಧಿಕೃತವಾಗಿ ಇಂದಿನಿಂದ ಆರಂಭ ಮಾಡಲಿದ್ದಾರೆ.

"ಟೀಸರ್‌ ಒಂದು ಸಣ್ಣ ಝಲಕ್‌ ಅಷ್ಟೇ. ಸಿನಿಮಾದಲ್ಲಿಇನ್ನೂ ಸಾಕಷ್ಟು ವಿಷಯವಿದೆ. ಮುಂದಿನ ದಿನಗಳಲ್ಲಿ ಟ್ರೇಲರ್‌ ಸಹ ಬಿಡುಗಡೆ ಮಾಡುತ್ತೇವೆ. ತಮ್ಮ ಮೂರ್ನಾಲ್ಕು ವರ್ಷಗಳ ಶ್ರಮ ಇದರಲ್ಲಿದೆ" ಎಂದು ಹೇಳಿದ್ದಾರೆ ನಿರ್ದೇಶಕ ಆರ್‌.ಚಂದ್ರು

Rana Daggubati Release Real Star Upendra Starrer Kabzaa Movie Teaser.