Oscars 2023: 'RRR', 'ದಿ ಕಾಶ್ಮೀರ್ ಫೈಲ್ಸ್' ಹಿಂದಿಕ್ಕಿ ಆಸ್ಕರ್ ಅಂಗಳಕ್ಕೆ ಹೋದ ಗುಜರಾತಿ ಸಿನಿಮಾ

21-09-22 02:50 pm       Source: Vijayakarnataka   ಸಿನಿಮಾ

Oscars Awards 2023: ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಇಂದು ಆಸ್ಕರ್ ಪ್ರಶಸ್ತಿಯ ಕುರಿತಂತೆ ಘೋಷಣೆ ಮಾಡಿದ್ದು, ಗುಜರಾತಿಯ 'Chhello Show' ಸಿನಿಮಾ ಅಧಿಕೃತವಾಗಿ ಆಸ್ಕರ್.

ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಇಂದು ಆಸ್ಕರ್ ಪ್ರಶಸ್ತಿಯ ಕುರಿತಂತೆ ಘೋಷಣೆ ಮಾಡಿದ್ದು, ಗುಜರಾತಿಯ 'Chhello Show' ಸಿನಿಮಾ ಅಧಿಕೃತವಾಗಿ ಆಸ್ಕರ್ ಅಂಗಳಕ್ಕೆ ಹೋಗಿದೆ. 95ನೇ ಅಕಾಡೆಮಿ ಪ್ರಶಸ್ತಿಯಲ್ಲಿ ಉತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ ಎಂದು ಆಯ್ಕೆಯಾಗಿದೆ.

ಪಾನ್ ನಲಿನ್ ಎನ್ನುವವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಭವಿನ್ ರಬರಿ, ಭವೇಶ್ ಶ್ರೀಮಲಿ, ರಿಚಾ ಮೀನಾ, ಡಿಪೆನ್ ರವಲ್, ಪರೆಶ್ ಮೆಹ್ತಾ ಎನ್ನುವವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 2021ರ ತ್ರಿಬೆಕಾ ಫಿಲ್ಮ್ ಫೆಸ್ತಿವಲ್‌ನಲ್ಲಿ ಈ ಚಿತ್ರ ಪ್ರದರ್ಶನವಾಗಿತ್ತು.

Chhello Show', A Gujarati Film Is India's Official Entry For Oscars 2023 -  Entertainment

Valladolid International Film Festivalನಲ್ಲಿ ಈ ಸಿನಿಮಾ ಮೆಚ್ಚುಗೆ ಗಳಿಸಿದೆ. Indiewire David Ehrlich ಅವರು ಈ ಸಿನಿಮಾವನ್ನು 'Coming Of Age Story' ಎಂದಿದ್ದಾರೆ.

RRR' release date announced! Ram Charan, Alia Bhatt, Jr NTR and Ajay  Devgn's magnum opus blocks two dates | Hindi Movie News - Times of India

ಎಸ್ ಎಸ್ ರಾಜಮೌಳಿ ನಿರ್ದೇಶನದ 'RRR' ಸಿನಿಮಾ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವು ಆಸ್ಕರ್‌ ಪ್ರಶಸ್ತಿಗೆ ಆಯ್ಕೆ ಆಗಲಿದೆ ಎಂದು ಹೇಳಲಾಗಿತ್ತು. ಈ ಎರಡೂ ಚಿತ್ರಗಳು ದೊಡ್ಟ ಮಟ್ಟದಲ್ಲಿ ಹಿಟ್ ಆಗಿದ್ದವು. ಅದರಲ್ಲಿಯೂ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಗ್ಗೆ ಭಾರತ ಒಂದೇ ಅಲ್ಲದೆ ವಿದೇಶದವರು ಮಾತನಾಡಿದ್ದರು. ಅವು ಯಾವುವು ನಿಜವಾಗಲಿಲ್ಲ.

ಕಳೆದ ವರ್ಷ Koozhangal (Pebbles) ಉತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ ಕ್ಯಾಟಗರಿಯಲ್ಲಿ ಆಯ್ಕೆಯಾಗಿತ್ತು. ಆದರೆ ಮುಂದಿನ ಹಂತಕ್ಕೆ ಹೋಗಲಿಲ್ಲ.

Gujarati Movie Chhello Show Is Indias Official Oscars Entry 2023.