ನಟ ಪ್ರಮೋದ್ ಈಗ 'ಬಾಂಡ್‌ ರವಿ'; ಖಡಕ್ ಟೀಸರ್ ರಿಲೀಸ್ ಮಾಡಿ ಸಂಭ್ರಮಿಸಿದ ಚಿತ್ರತಂಡ

26-09-22 02:41 pm       Source: Vijayakarnataka   ಸಿನಿಮಾ

'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಪ್ರಮೋದ್ 'ಮತ್ತೆ ಉದ್ಭವ', 'ಪ್ರೀಮಿಯರ್ ಪದ್ಮಿನಿ' ಹಾಗೂ ‘ರತ್ನನ್ ಪ್ರಪಂಚ’ ಸಿನಿಮಾಗಳಲ್ಲಿ.

'ಪ್ರೀಮಿಯರ್ ಪದ್ಮಿನಿ', 'ರತ್ನನ್ ಪ್ರಪಂಚ' ಸಿನಿಮಾಗಳಲ್ಲಿ ನಟಿಸಿ ಗಮನಸೆಳೆದಿದ್ದ ಪ್ರಮೋದ್ ಈಗ 'ಬಾಂಡ್ ರವಿ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದ ಬಹುತೇಕ ಶೂಟಿಂಗ್ ಮುಕ್ತಾಯಗೊಂಡಿದ್ದು, ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿದೆ. 'ರತ್ನನ್ ಪ್ರಪಂಚ'ದಲ್ಲಿ ಉಡಾಳ್ ಬಾಬು ಆಗಿ ಪ್ರೇಕ್ಷಕರ ಮನಸೂರೆಗೊಂಡಿದ್ದ ಪ್ರಮೋದ್ ಈಗ 'ಬಾಂಡ್ ರವಿ'ಯಾಗಿ ತೆರೆಮೇಲೆ ಬರುವುದಕ್ಕೆ ಸಜ್ಜಾಗಿದ್ದಾರೆ. ವಿಶೇಷವೆಂದರೆ, ಈ ಸಿನಿಮಾದ ಟೀಸರ್ ಅನ್ನು ಸಿನಿಮಾ ಪತ್ರಕರ್ತರೇ ರಿಲೀಸ್ ಮಾಡಿದ್ದು ವಿಶೇಷ.

ಅಂದಹಾಗೆ, ಪ್ರಮೋದ್ ಮೊದಲು 'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟರು. 'ಮತ್ತೆ ಉದ್ಭವ', 'ಪ್ರೀಮಿಯರ್ ಪದ್ಮಿನಿ', 'ರತ್ನನ್ ಪ್ರಪಂಚ' ಅವರು ಇನ್ನಿತರ ಸಿನಿಮಾಗಳು. ತಮ್ಮ ಅಭಿನಯದ ಮೂಲಕ ಅಪಾರ ಮನ್ನಣೆ ಗಳಿಸಿಕೊಂಡಿದ್ದಾರೆ ಪ್ರಮೋದ್. ಸದ್ಯ 'ಬಾಂಡ್ ರವಿ' ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಅವರು ಇಟ್ಟುಕೊಂಡಿದ್ದಾರೆ. 'ನಾನು ಈ ಕಥೆಯನ್ನು ತುಂಬಾ ಮೆಚ್ಚಿಕೊಂಡು ಇಷ್ಟಪಟ್ಟು ಮಾಡಿದ್ದೇನೆ. ಈ ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ಬಲವಾದ ನಂಬಿಕೆ ನನಗೆ ಇದೆ. ಅಷ್ಟು ಒಳ್ಳೆಯ ಕಂಟೆಂಟ್, ಕಥೆ ಈ ಸಿನಿಮಾದಲ್ಲಿದೆ. ನಾನು ಕೂಡ ಈ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತೇನೆ ಎಂಬ ಭರವಸೆ ಇದೆ. ಬಾಂಡ್ ರವಿ ಆಕ್ಷನ್ ಲವ್ ಸ್ಟೋರಿ ಸಿನಿಮಾ' ಎನ್ನುತ್ತಾರೆ ಪ್ರಮೋದ್.

Bond Ravi (2022) | Bond Ravi Kannada Movie | Bond Ravi Movie: Release Date,  Cast, Review, Trailer, Story, Budget, Box Office Collection – Filmibeat

ವಿಶೇಷವೆಂದರೆ, ಈ ಸಿನಿಮಾಗೆ ಸಂಗೀತ ನಿರ್ದೇಶಕ ಮನೋಮೂರ್ತಿ ಅವರು ಸಂಗೀತ ನೀಡಿದ್ದಾರೆ. 'ನನಗೂ ಕೂಡ ಈ ಸಿನಿಮಾ ಬಗ್ಗೆ ಅಪಾರ ಭರವಸೆ ಇದೆ. 'ಮುಂಗಾರು ಮಳೆ' ಕೂಡ ಹೀಗೆಯೇ ಆರಂಭವಾಗಿತ್ತು. ನಂತರ ಅದು ದೊಡ್ಡ ಹಿಟ್ ಆಯ್ತು. ಅದೇ ರೀತಿ ಈ ಸಿನಿಮಾ ಕೂಡ ಹಿಟ್ ಆಗುತ್ತೆ. ಪ್ರಮೋದ್ ಮತ್ತು ಕಾಜಲ್ ಕುಂದರ್ ಇಬ್ಬರು ಅಮೋಘವಾಗಿ ನಟಿಸಿದ್ದಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದಾರೆ. 'ನನ್ನ ಮೇಲೆ ನಂಬಿಕೆ ಇಟ್ಟು ಒಳ್ಳೆಯ ಪಾತ್ರವನ್ನು ಕೊಟ್ಟಿದ್ದಕ್ಕೆ ಚಿತ್ರತಂಡಕ್ಕೆ ತುಂಬಾ ಧನ್ಯವಾದಗಳು. ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂಬ ನಂಬಿಕೆ ಇದೆ. ಪ್ರಮೋದ್ ಅವರ ಜೊತೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ' ಎಂದರು ಕಾಜಲ್.

Bond Ravi Teaser Release: ಪ್ರಮೋದ್ ನಟನೆಯ 'ಬಾಂಡ್ ರವಿ' ಟೀಸರ್ ರಿಲೀಸ್; ಉಡಾಳ್  ಬಾಬು ಹೊಸ ಅವತಾರಕ್ಕೆ ಮೆಚ್ಚುಗೆ -actor pramod starrer bond ravi movie teaser  release

'ಬಾಂಡ್ ರವಿ' ಸಿನಿಮಾಗೆ ಪ್ರಜ್ವಲ್ ನಿರ್ದೇಶನ ಮಾಡಿದ್ದಾರೆ. 'ಇದು ನನ್ನ ಮೊದಲ ಸಿನಿಮಾ. ಈ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಒಂದೊಳ್ಳೆ ಸಿನಿಮಾ ಮಾಡಿದ ತೃಪ್ತಿ ನನಗಿದೆ. ಪ್ರಮೋದ್ ಅವರು ನನಗೆ ಸಿಕ್ಕಿದ್ದು ನನ್ನ ಅದೃಷ್ಟ ಅಂತನೇ ಹೇಳಬಹುದು. ಅವರೊಬ್ಬ ವ್ಯಕ್ತಿಯಾಗಿ, ನಟನಾಗಿ ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ನವೆಂಬರ್‌ನಲ್ಲಿ ಬಾಂಡ್ ರವಿ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂಬ ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಖಂಡಿತ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತೆ' ಎಂದು ತಮ್ಮ ಮನದಾಳದ ಮಾತುಗಳನ್ನು ಪ್ರಜ್ವಲ್ ಹಂಚಿಕೊಂಡರು. 11 ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ ದುಡಿದ ಅನುಭವ ಪ್ರಜ್ವಲ್‌ಗೆ ಇದೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಂತಾದವರು ನಟಿಸಿದ್ದಾರೆ.

ಲೈಫ್ ಲೈನ್ ಫಿಲಂ ಬ್ಯಾನರ್‌ನಡಿ 'ಬಾಂಡ್ ರವಿ' ಸಿನಿಮಾಗೆ ನರಸಿಂಹಮೂರ್ತಿ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರದಲ್ಲಿ ಅಪ್ಪು ಅಭಿಮಾನಿಯಾಗಿ ಪ್ರಮೋದ್ ನಟಿಸಿದ್ದಾರೆ. ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ, ಕುದುರೆಮುಖ, ಉಡುಪಿ, ಮಂಗಳೂರು ಮುಂತಾದ ಕಡೆ 'ಬಾಂಡ್ ರವಿ' ಚಿತ್ರೀಕರಣ ಮಾಡಲಾಗಿದೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ ಮಾಡಿದ್ದಾರೆ.

Pramod Kaajal Kunder Starrer Bond Ravi Movie Teaser Released.