ಸ್ವಲ್ಪ ವಿಸ್ಕಿ, ಆಮೇಲೆ ಟ್ವಿಟ್ಟರ್ ರಿಸ್ಕಿ: ನಟ ವಿಕ್ರಮ್‌ಗೆ ವೈಯಕ್ತಿಕ ಅನುಭವ ಹಂಚಿಕೊಂಡ ಕಪಿಲ್ ಶರ್ಮಾ

27-09-22 01:44 pm       Source: Vijayakarnataka   ಸಿನಿಮಾ

ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ಜಯಂ ರವಿ, ವಿಕ್ರಮ್, ತ್ರಿಷಾ ನಟನೆಯ 'ಪೊನ್ನಿಯನ್ ಸೆಲ್ವನ್' ಸಿನಿಮಾ ತಂಡ ಕಪಿಲ್ ಶರ್ಮಾ ಶೋಗೆ ಆಗಮಿಸಿದೆ. ಆ ವೇಳೆ.

ಕಪಿಲ್ ಶರ್ಮಾ ಶೋ ( Kapil Sharma ) ದಕ್ಷಿಣ ಭಾರತದ ಸಿನಿಮಾಗಳನ್ನು ಹಿಂದಿ ಜನರಿಗೆ ಮುಟ್ಟಿಸಲು ಇರುವ ಬಲವಾದ ವೇದಿಕೆ ಎನ್ನಬಹುದು. ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ಜಯಂ ರವಿ, ವಿಕ್ರಮ್, ತ್ರಿಷಾ ನಟನೆಯ 'ಪೊನ್ನಿಯನ್ ಸೆಲ್ವನ್' ಸಿನಿಮಾ ( Ponniyin Selvan ) ತಂಡ ಭರ್ಜರಿಯಾಗಿ ಸಿನಿಮಾ ಪ್ರಚಾರ ಮಾಡುತ್ತಿದೆ. ಅಂತೆಯೇ ಈ ತಂಡ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿತ್ತು.

ಕಪಿಲ್ ಶರ್ಮಾ ಅವರು ಎಂದಿನಂತೆ ತಮಿಳು ನಟ ವಿಕ್ರಮ್ ಅವರ ಕಾಲೆಳೆದಿದ್ದಾರೆ. "ಒಂದಿನ ಕಪಿಲ್ ಶರ್ಮಾ ಅವರ ಶೋಗೆ ಹೋಗ್ತೀನಿ ಅಂತ ಅಂದುಕೊಂಡಿದ್ರಾ?" ಎಂದು ಕಪಿಲ್ ಶರ್ಮಾ ಕೇಳಿದ್ದಾರೆ. ಆಗ ಮಾತನಾಡಿದ ವಿಕ್ರಮ್, "ನಾನು ಆ ರೀತಿ ಯೋಚನೆ ಮಾಡಿರಲಿಲ್ಲ. 1976ರಲ್ಲಿ ನಾನು 8ನೇ ತರಗತಿ ಓದುತ್ತಿದ್ದೆ. ನೀವು ಆಗ ಹುಟ್ಟಿರಲಿಲ್ಲ ಅಲ್ವಾ? ಆಗಲೇ ನಿಮ್ಮ ಶೋಗೆ ನಾನು ಬರ್ತೀನಿ ಅಂತ ಬರೆಯಲಾಗಿತ್ತು" ಎಂದು ಉತ್ತರ ನೀಡಿದ್ದಾರೆ.

Kapil Sharma advises Ponniyin Selvan star Vikram to be careful on Twitter:  'It's very risky after whiskey' | Entertainment News,The Indian Express

ವಿಕ್ರಮ್ ಅವರಿಗೆ ಟ್ವಿಟ್ಟರ್ ಬಳಕೆಯ ಕುರಿತು ಕಪಿಲ್ ಶರ್ಮಾ ಸಲಹೆ ನೀಡಿದ್ದು, "ಇತ್ತೀಚೆಗೆ ನೀವು ಟ್ವಿಟ್ಟರ್‌ ಬಳಸುತ್ತಿದ್ದೀರಿ ಅಲ್ಲವೇ..ನಿಮಗೆ ಟ್ವಿಟ್ಟರ್ ಬಗ್ಗೆ ನಾನು ಒಂದು ವಿಷಯ ಹೇಳಬೇಕಿದೆ. ಸ್ವಲ್ಪ ವಿಸ್ಕಿ ತಗೊಂಡ ಬಳಿಕ ಟ್ವಿಟ್ಟರ್ ರಿಸ್ಕಿ ಆಗತ್ತೆ, ಇದು ನನ್ನ ವೈಯಕ್ತಿಕ ಅನುಭವ" ಎಂದು ಹೇಳಿದ್ದಾರೆ.

"ಸಾಹಸ ದೃಶ್ಯ ಮಾಡುವಾಗ ನನ್ನ ಅಕ್ಕ ಪಕ್ಕದಲ್ಲಿ ಯಾರೂ ಖಳನಟರು ಇರಲಿಲ್ಲ. ನನ್ನ ಧೋತಿಯೇ ವಿಲನ್ ಆಗಿತ್ತು" ಎಂದಿದ್ದಾರೆ ಕಾರ್ತಿ

After twitter controversy Kapil Sharma gives Ponniyin Selvan actor Vikram  advice says twitter is risky after having whisky | The Kapil Sharma Show:  ट्वीट पर ट्रोल हो चुके कपिल शर्मा ने अब

ನಟಿ ತ್ರಿಷಾ ಅವರು ಕಪಿಲ್ ಜೀ ನೀವು ಆ ರೀತಿ ಹೇಳಿದ್ದಕ್ಕೆ ಐ ಲವ್ ಯು ಎಂದಿದ್ದಾರೆ. ಆಗ ಕಪಿಲ್, "ನೀವು ಐ ಲವ್ ಯು ಎಂದರೆ ನಾನು ಹಿಂದೆ ಹಿಂದೆ ಬಂದುಬಿಡ್ತೀನಿ" ಎಂದು ಹೇಳಿ ನಗೆಚಟಾಕಿ ಹಾರಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಪ್ರಾಬಲ್ಯ ಮೆರೆದಿದ್ದ ಚೋಳರ ಇತಿಹಾಸ ಹೇಳುವ ಕಥೆಯೇ ‘ಪೊನ್ನಿಯನ್ ಸೆಲ್ವನ್’ ಸಿನಿಮಾದ ಒನ್‌ಲೈನ್ ಸ್ಟೋರಿ. ಕಲ್ಕಿ ಕೃಷ್ಣಮೂರ್ತಿ ಬರೆದಿರುವ ‘ಪೊನ್ನಿಯನ್ ಸೆಲ್ವನ್’ ಎಂಬ ಐತಿಹಾಸಿಕ ಪುಸ್ತಕವನ್ನು ಆಧರಿಸಿರುವ ಚಿತ್ರವಿದು. ‘ಪೊನ್ನಿಯನ್ ಸೆಲ್ವನ್’ ಚಿತ್ರವನ್ನು 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದ್ದು, 9ನೇ ಶತಮಾನದ ಕಥಾನಕ ಇರುವುದರಿಂದ ಅಂದಿನ ಕಾಲಘಟದ ಸೆಟ್ ಮತ್ತು ಕಾಸ್ಟ್ಯೂಮ್ಸ್‌ಗಳನ್ನು ಚಿತ್ರದಲ್ಲಿ ಬಳಸಲಾಗಿದೆ.

ಆದಿತ್ಯ ಕರಿಕಾಳನ್ ಆಗಿ ನಟ ವಿಕ್ರಮ್, ನಂದಿನಿ/ ಮಂದಾಕಿನಿ ದೇವಿಯಾಗಿ ಐಶ್ವರ್ಯ ರೈ, ರಾಜ ರಾಜ ಚೋಳನಾಗಿ ಜಯಂ ರವಿ ಮತ್ತು ರಾಜಕುಮಾರಿ ಕುಂದವೈ ಪಿರತ್ತಿಯಾರ್ ಪಾತ್ರದಲ್ಲಿ ತ್ರಿಷಾ, ವಲ್ಲವರಾಯನ್ ವಂದಿಯಾದೇವನ್ ಆಗಿ ಕಾರ್ತಿ, ಸುಂದರ ಚೋಳ ಆಗಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದಾರೆ.ಮಣಿರತ್ನಂ ನಿರ್ದೇಶನದ ಈ ಸಿನಿಮಾಕ್ಕೆ ಎ ಆರ್ ರೆಹಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ.

Kapil Sharma Advice To Actor Vikram That Twitter Is Very Risky, After Little Bit Whisky.