ಬ್ರೇಕಿಂಗ್ ನ್ಯೂಸ್
14-10-22 12:57 pm Source: Vijayakarnataka ಸಿನಿಮಾ
ಮೊದಲೆಲ್ಲಾ ಬಾಲಿವುಡ್‌ನಲ್ಲಿ ಕೆಲಸ ಮಾಡುವುದು ಪ್ರಾದೇಶಿಕ ಭಾಷೆಯವರಿಗೆ ಗಗನ ಕುಸುಮವಾಗಿತ್ತು. ಈಗ ಸೌತ್ ಸಿನಿಮಾಗಳು ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಸದ್ದು ಮಾಡುತ್ತಿರುವ ಕಾರಣ ಇಲ್ಲಿನ ನಟರು, ತಂತ್ರಜ್ಞರೆಲ್ಲರಿಗೂ ಡಿಮ್ಯಾಂಡ್ ಬಂದಿದ್ದು, ಸಾಕಷ್ಟು ಜನ ಬಾಲಿವುಡ್‌ನತ್ತ ಹೋಗುತ್ತಿದ್ದಾರೆ. ಈಗ ಕನ್ನಡದ ಇಬ್ಬರು ತಂತ್ರಜ್ಞರಾದ ಸಾಹಸ ನಿರ್ದೇಶಕ ರವಿವರ್ಮ, ಕೋರಿಯೋಗ್ರಫರ್ ಇಮ್ರಾನ್ ಸರ್ದಾರಿಯಾ ಬಾಲಿವುಡ್‌ನತ್ತ ಹೆಜ್ಜೆ ಹಾಕಿದ್ದಾರೆ. ಇವರಿಬ್ಬರೂ ಸೇರಿಕೊಂಡು ಒಂದು ಹಿಂದಿ ಸಿನಿಮಾವನ್ನು ನಿರ್ದೇಶನ ಮಾಡಲು ಹೊರಟಿದ್ದಾರೆ.
ಕನ್ನಡದಲ್ಲಿ ಸ್ಟಾರ್‌ಗಳಿಗೆ ನೃತ್ಯ ನಿರ್ದೇಶನ ಮಾಡಿದ ಅನುಭವ ಇರುವ ಇಮ್ರಾನ್ ಇಲ್ಲಿಈಗಾಗಲೇ ಒಂದಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ರವಿವರ್ಮ ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿ ಹೀಗೆ ಎಲ್ಲಾ ಭಾಷೆಗಳಲ್ಲಿಯೂ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಜತೆಗೆ ಈಗಾಗಲೇ ‘ರುಸ್ತುಂ’ ಸಿನಿಮಾವನ್ನು ನಿರ್ದೇಶನ ಮಾಡಿದ ಅನುಭವ ಅವರಿಗಿದೆ. ಈಗ ಇವರಿಬ್ಬರೂ ಜಂಟಿಯಾಗಿ ಬಾಲಿವುಡ್‌ನ ನಟ ಸಲ್ಮಾನ್ ಖಾನ್ ಅವರ ಸಹೋದರಿಯ ಪತಿ ಆಯುಶ್ ಶರ್ಮ ಅವರಿಗೆ ಸಿನಿಮಾವನ್ನು ನಿರ್ದೇಶಿಸಲು ಸಿದ್ಧತೆ ನಡೆಸಿದ್ದಾರೆ. ವಿಶೇಷ ಎಂದರೆ ಇವರಿಬ್ಬರ ಸ್ಕ್ರೀನ್ ಹೆಸರನ್ನು ‘ಫೈರ್ ಆ್ಯಂಡ್ ಐಸ್’ ಎಂದು ಇಟ್ಟುಕೊಂಡಿದ್ದಾರೆ.
(ಹರೀಶ್ ಬಸವರಾಜ್)
ನಮಗೆ ದೊರೈ ಭಗವಾನ್, ಅಬ್ಬಾಸ್ ಮಸ್ತಾನ್‌ರಂತಹ ದಿಗ್ಗಜರೇ ಸ್ಫೂರ್ತಿ
‘ನಾನು ಮತ್ತು ಇಮ್ರಾನ್ ಮಾಸ್ಟರ್ ಯಾವಾಗಲೂ ಕಥೆಯ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತಿದ್ದೆವು. ಆಗ ಒಮ್ಮೆ ಅವರೇ ಈ ಕಥೆಯ ಐಡಿಯಾವನ್ನು ಹೇಳಿದರು. ಅಲ್ಲದೆ ನಾವಿಬ್ಬರೂ ಒಟ್ಟಿಗೆ ನಿರ್ದೇಶನ ಮಾಡಬಹುದು ಎಂದರು. ಇದೊಂದು ನನಗೆ ಹೊಸ ಐಡಿಯಾದಂತೆ ಫೀಲ್ ಆಯಿತು. ಇಷ್ಟು ವರ್ಷ ಹಲವು ನಿರ್ದೇಶಕರ ಬಳಿ ಕೆಲಸ ಮಾಡಿದ್ದೇವೆ. ಆ ಅನುಭವಗಳನ್ನು ಇಟ್ಟುಕೊಂಡು ಈ ಸಿನಿಮಾವನ್ನು ಒಟ್ಟಿಗೆ ನಿರ್ದೇಶನ ಮಾಡುತ್ತಿದ್ದೇವೆ. ಅದರಂತೆ ಸಿನಿಮಾದ ಕೆಲಸಗಳನ್ನು ಆರಂಭಿಸಿದ್ದೇವೆ. ನಮಗೆ ದೊರೈ ಭಗವಾನ್, ಅಬ್ಬಾಸ್ ಮಸ್ತಾನ್‌ರಂತಹ ದಿಗ್ಗಜರೇ ಸ್ಫೂರ್ತಿ. ಇಬ್ಬರೂ ಸೇರಿಕೊಂಡು ಒಂದೊಳ್ಳೆ ಪ್ರಾಡಕ್ಟ್ ಅನ್ನು ಹೊರ ತರುತ್ತೇವೆ’ ಎಂದು ಹೇಳುತ್ತಾರೆ ರವಿವರ್ಮ.
ನಾನು ಸೈಲೆಂಟ್ ಕೂಲ್ ಆಗಿ ಕೆಲಸ ಮಾಡುತ್ತೇನೆ
‘ರವಿವರ್ಮ ಅವರ ಜತೆ ಕೆಲಸ ಮಾಡುತ್ತಿರುವುದು ಬಹಳ ಖುಷಿಯ ವಿಚಾರ. ನಾನು ಅವರಿಗೆ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಕೇಳಿದಾಗ ಅವರು ಬಹಳ ಖುಷಿಯಾದರು. ಅವರು ತುಂಬಾ ಎನರ್ಜಿಯಿಂದ ಬೆಂಕಿಯಂತೆ ಕೆಲಸ ಮಾಡುತ್ತಾರೆ. ನಾನು ಸೈಲೆಂಟ್ ಕೂಲ್ ಆಗಿ ಕೆಲಸ ಮಾಡುತ್ತೇನೆ. ಹಾಗಾಗಿ ನಮ್ಮ ಸ್ಕ್ರೀನ್ ಹೆಸರನ್ನು ‘ಫೈರ್ ಆ್ಯಂಡ್ ಐಸ್’ಎಂದು ಇಟ್ಟುಕೊಂಡಿದ್ದೇವೆ. ನಾನು ನೃತ್ಯ ನಿರ್ದೇಶನದಲ್ಲಿಒಂದಷ್ಟು ಹೊಸ ಪ್ರಯೋಗಗಳನ್ನು ಮಾಡಿ ಗೆದ್ದಿದ್ದೇನೆ. ರವಿವರ್ಮ ಅವರು ಆ್ಯಕ್ಷನ್‌ನಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇಬ್ಬರಿಗೂ ಸಿನಿಮಾದ ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇದೆ. ಹೀಗಾಗಿ ಈಗ ಇಬ್ಬರೂ ಒಟ್ಟಿಗೆ ಸೇರಿ ಕೆಲಸ ಮಾಡಲು ಯೋಚಿಸಿದ್ದೇವೆ’ಎಂದು ಹೇಳಿದ್ದಾರೆ ಇಮ್ರಾನ್ ಸರ್ದಾರಿಯಾ.
ಪಕ್ಕಾ ಎಂಟರ್‌ಟೇನಿಂಗ್ ಮಾಸ್ ಸಿನಿಮಾ
‘ಈ ಸಿನಿಮಾಗೆ ಆಯುಷ್ ಶರ್ಮ ಬಹಳ ಚೆಂದವಾಗಿ ಹೊಂದಿಕೊಳ್ಳುತ್ತಾರೆ. ಅವರ ಕಣ್ಣಿನಲ್ಲಿ ಒಂದು ಮುಗ್ಧತೆ ಇದೆ. ಜತೆಗೆ ನಮ್ಮ ಕಥೆಗೆ ಹೇಗೆ ಬೇಕೋ ಹಾಗೆ ಸಿದ್ಧತೆ ನಡೆಸುತ್ತಿದ್ದಾರೆ. ಹಾಗಾಗಿ ಅವರನ್ನೇ ನಮ್ಮ ಹಿಂದಿ ಸಿನಿಮಾದ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದೇವೆ. ಇದೊಂದು ಪಕ್ಕಾ ಎಂಟರ್‌ಟೇನಿಂಗ್ ಮಾಸ್ ಸಿನಿಮಾವಾಗುತ್ತದೆ’ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕದ್ವಯರು.
ಈ ಸಿನಿಮಾದ ಚಿತ್ರೀಕರಣ ಜನವರಿಯಿಂದ ಆರಂಭವಾಗಲಿದೆ. ಅಷ್ಟರೊಳಗೆ ನಾಯಕಿ ಮತ್ತು ಉಳಿದ ಕಲಾವಿದರ ವಿವರವನ್ನು ತಿಳಿಸಲಿದ್ದೇವೆ. ಚಂದ್ರಮೌಳಿ ಸಂಭಾಷಣೆ ಬರೆಯುತ್ತಿದ್ದು, ಎ ಜೆ ಶೆಟ್ಟಿ ಸಿನಿಮಾಟೋಗ್ರಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕನ್ನಡದ ಹಲವು ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.
ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ
ನಮ್ಮಿಬ್ಬರ ಇಷ್ಟು ವರ್ಷಗಳ ಅನುಭವವನ್ನು ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಕನ್ನಡಿಗರ ಆಶೀರ್ವಾದ, ಪ್ರೀತಿ ನಮ್ಮ ಮೇಲಿದ್ದ ಕಾರಣ ಬಾಲಿವುಡ್‌ನ ಸಿನಿಮಾವನ್ನು ನಿರ್ದೇಶನ ಮಾಡುವವರೆಗೂ ಹೋಗಿದ್ದೇವೆ. ಆ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ.
-ರವಿ ವರ್ಮ, ನಿರ್ದೇಶಕ ಆ್ಯಕ್ಷನ್ ಅಡ್ವೆಂಚರ್ ಮಿಸ್ಟ್ರಿ
ಈ ಸಿನಿಮಾ ಮಾಡುತ್ತಿರುವುದು ನಮಗೆ ಖುಷಿಯ ಜತೆಗೆ ಜವಾಬ್ದಾರಿಯನ್ನು ಹೆಚ್ಚಿಸಿದೆ. ಇದನ್ನು ಆ್ಯಕ್ಷನ್ ಅಡ್ವೆಂಚರ್ ಮಿಸ್ಟ್ರಿ ಜಾನರ್ ಎನ್ನಬಹುದು. ನಮ್ಮಿಬ್ಬರ ಕಾಂಬಿನೇಶನ್ ಜತೆಗೆ ಇನ್ನೊಂದಿಷ್ಟು ಸರ್‌ಪ್ರೈಸ್‌ಗಳು ಸಿನಿಮಾದಲ್ಲಿರುತ್ತವೆ.
Stunt Director Ravi Varma And Choreographer Imran Sardariya Join Hands For Aayush Sharmas New Movie.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm