ಬ್ರೇಕಿಂಗ್ ನ್ಯೂಸ್
26-10-22 01:43 pm Source: Vijayakarnataka ಸಿನಿಮಾ
ಡಾಲಿ ಧನಂಜಯ ( Dhananjaya ), ಲೂಸ್ ಮಾದ ಯೋಗಿ ನಟನೆಯ 'ಹೆಡ್ ಬುಷ್' ಸಿನಿಮಾ ( Head Bush Movie ) ರಿಲೀಸ್ ಆಗಿ, ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರದಲ್ಲಿ ಡಾನ್ ಎಂ ಪಿ ಜಯರಾಜ್ ಪಾತ್ರದಲ್ಲಿ ಧನಂಜಯ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಆರಂಭದಿಂದಲೂ ಒಂದಲ್ಲ ಒಂದು ವಿವಾದಕ್ಕೆ ಗುರಿಯಾಗುತ್ತಿದೆ. ಈ ಚಿತ್ರ ತೆರೆಕಂಡ ನಂತರದಲ್ಲಿ ವೀರಗಾಸೆಗೆ ಅವಮಾನ ಆಗಿದೆ ಎಂಬ ಮಾತು ಕೇಳಿಬಂದಿತ್ತು. ಈ ಬಗ್ಗೆ ಧನಂಜಯ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ವೀರಗಾಸೆ ಹಾಕಿಕೊಂಡವರ ಮೇಲೆ ಡಾನ್ ಜಯರಾಜ್ ಹಲ್ಲೆ ಮಾಡಿದಂತೆ ಚಿತ್ರದಲ್ಲಿ ತೋರಿಸಲಾಗಿತ್ತು. ಇದರಿಂದ ವೀರಗಾಸೆಗೆ ಅವಮಾನ ಆಗಿತ್ತು ಎಂದು ಕೆಲವರು ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಧನಂಜಯ ಅವರು, "ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೆೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ. ನಾನು ಚಿಕ್ಕ ವಯಸ್ಸಿನಿಂದ ವೀರಗಾಸೆಯನ್ನು ನೋಡುತ್ತ ಬಂದಿದ್ದೇನೆ. ನನ್ನ ಸಿನಿಮಾ ರಿಲೀಸ್ ಸಂದರ್ಭದಲ್ಲಿ ವೀರಗಾಸೆಯನ್ನು ಕರೆಸಿದ್ದೆ. ನಮ್ಮೂರಿನ ಜಾತ್ರೆ, ದೇವಸ್ಥಾನದ ಕಾರ್ಯಕ್ರಮದಲ್ಲಿ ವೀರಗಾಸೆ ಇದ್ದೇ ಇರುತ್ತದೆ. ನನ್ನಿಂದ ಅದಕ್ಕೆ ಅವಮಾನ ಆಗುತ್ತದೆ ಎಂದಿದ್ದರೆ ನಾನು ಅಲ್ಲಿ ಅದನ್ನು ತರುತ್ತಿರಲಿಲ್ಲ" ಎಂದಿದ್ದಾರೆ.
"ಫೈಟ್ ನಡೆಯುವಾಗ ವೀರಗಾಸೆ ಹಾಕಿಕೊಂಡವರು ಹಿಂದೆ ಸರಿಯುತ್ತಾರೆ. ವೀರಗಾಸೆ ರೀತಿಯ ವೇಷ ಹಾಕಿದವರು ಮುಂದೆ ಬರುತ್ತಾರೆ. ವೀರಗಾಸೆ ವೇಳೆ ಚಪ್ಪಲಿ ಹಾಕುವಂತಿಲ್ಲ. ಆದರೆ ಜಯರಾಜ್ ಮೇಲೆ ಹಲ್ಲೆ ಮಾಡಿದವರು ಶೂ ಧರಿಸುತ್ತಾರೆ. ಆಗ ಅವನಿಗೆ ಇವರು ವೀರಗಾಸೆಯವರು ಅಲ್ಲ ಎಂದು ಗೊತ್ತಾಗುತ್ತದೆ. ಆಗ ಅವರ ಮೇಲೆ ಜಯರಾಜ್ ಹಲ್ಲೆ ಮಾಡುತ್ತಾನೆ. ವೀರಗಾಸೆಗೆ ಅವಮಾನ ಮಾಡುತ್ತಿರುವವರ ಮೇಲೆ ಜಯರಾಜ್ ಹೊಡೆಯುತ್ತಾನೆಯೇ ಹೊರತು, ಜಯರಾಜ್ ವೀರಗಾಸೆಗೆ ಅವಮಾನ ಮಾಡಿಲ್ಲ" ಎಂದು ಧನಂಜಯ ಹೇಳಿದ್ದಾರೆ.
'ಬಡವ ರಾಸ್ಕಲ್' ಸಿನಿಮಾಕ್ಕೆ ಧನಂಜಯ ಹಣ ಹೂಡಿದ್ದರು. ಅದಾದ ನಂತರದಲ್ಲಿ 'ಹೆಡ್ ಬುಷ್' ಚಿತ್ರಕ್ಕೆ ಹಣ ಹೂಡಿದ್ದಾರೆ. 70-80ರ ದಶಕದಲ್ಲಿ ನಡೆದ ನೈಜ ಘಟನೆ ಆಧರಿಸಿ ಅಗ್ನಿ ಶ್ರೀಧರ್ ಅವರ ‘ಮೈ ಡೇಸ್ ಇನ್ ದ ಅಂಡರ್‌ವರ್ಲ್ಡ್’ ಪುಸ್ತಕವನ್ನು ಬರೆದಿದ್ದರು. ಈ ಪುಸ್ತಕವೇ ಈಗ ‘ಹೆಡ್ ಬುಷ್’ ಸಿನಿಮಾ ಆಗಿದೆ. ಕೊತ್ವಾಲ್ ಪಾತ್ರದಲ್ಲಿ ವಸಿಷ್ಠ ಸಿಂಹ, ಗಂಗ ಅನ್ನೋ ಪಾತ್ರದಲ್ಲಿ ನಟ ಲೂಸ್ ಮಾದ ಯೋಗಿ, ರತ್ನಪ್ರಭಾ ಎಂಬ ರಾಜಕಾರಣಿಯೊಬ್ಬರ ಪಾತ್ರದಲ್ಲಿ ಶ್ರುತಿ ಹರಿಹರನ್ ನಟಿಸಿದ್ದಾರೆ. ಇದರ ಜೊತೆಗೆ ದೇವರಾಜ್, ರವಿಚಂದ್ರನ್, ಬಾಲು ನಾಗೇಂದ್ರ, ರಘು ಮುಖರ್ಜಿ, ಪೂರ್ಣಚಂದ್ರ, ರೋಷನ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಧನಂಜಯಗೆ ನಾಯಕಿಯಾಗಿ ಬಹುಭಾಷಾ ನಟಿ ಪಾಯಲ್ ರಜಪೂತ್ ನಟಿಸಿದ್ದಾರೆ.
Actor Dolly Dhananjaya Reaction On Head Bush Movie Veeragase Controversy.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm