ಬ್ರೇಕಿಂಗ್ ನ್ಯೂಸ್
28-10-22 01:14 pm Source: Vijayakarnataka ಸಿನಿಮಾ
ಸಹಜ ನಟನೆಯಿಂದ ಹೆಸರು ಮಾಡಿರುವ ಶ್ರುತಿ ಹರಿಹರನ್ ( Sruthi Hariharan ) ಮದುವೆ, ಮಗಳು ಎಂದು ಒಂದಷ್ಟು ದಿನಗಳ ಕಾಲ ಸಿನಿಮಾ ರಂಗದಿಂದ ದೂರವಿದ್ದರು. ನಟನೆಯ ಮೂಲಕ ಮತ್ತೆ ಚಿತ್ರರಂಗಕ್ಕೆ ವಾಪಾಸ್ಸಾಗಿರುವ ಅವರು, ಈಗ ನಿರ್ದೇಶನದತ್ತಲೂ ಮುಖ ಮಾಡಿದ್ದಾರೆ. ‘ರಾಟೆ’, ‘ಬ್ಯೂಟಿಫುಲ್ ಮನಸುಗಳು’ ಸೇರಿದಂತೆ ಹಲವು ಸಿನಿಮಾಗಳಲ್ಲಿಅದ್ಭುತ ನಟನೆಯ ಮೂಲಕ ಅನೇಕ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಶ್ರುತಿ ಹರಿಹರನ್, ತಮ್ಮದೇ ಆದ ನಿರ್ಮಾಣ ಸಂಸ್ಥೆ ಆರಂಭಿಸಿ, ಒಂದು ಕಿರುಚಿತ್ರವನ್ನೂ ನಿರ್ಮಾಣ ಮಾಡಿದ್ದರು. ಈಗ ಡೈರೆಕ್ಟರ್ ಕ್ಯಾಪ್ ತೊಡಲು ಅವರು ಸಜ್ಜಾಗುತ್ತಿದ್ದು, ಅದಕ್ಕಿಂತ ಮುನ್ನ ಒಂದು ವಿಡಿಯೊ ಆಲ್ಬಂ ಹಾಡನ್ನು ನಿರ್ದೇಶನ ಮಾಡಿದ್ದಾರೆ.
‘ನನಗೆ ನಿರ್ದೇಶನ ಮತ್ತು ಬರವಣಿಗೆ ಮೊದಲಿನಿಂದಲೂ ಬಹಳ ಇಷ್ಟ. ಆದರೆ ಅವಕಾಶ ಸಿಕ್ಕಿರಲಿಲ್ಲ. ಒಮ್ಮೆ ನನ್ನ ಕಾಲೇಜಿನ ಜೂನಿಯರ್ ವಿನೀತ್ ವಿನ್ಸೆಂಟ್ ಎಂಬವರು ವಿಡಿಯೊ ಆಲ್ಬಂ ಐಡಿಯಾ ಕೊಟ್ಟರು. ಅವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿರುವ ಸಂಗೀತಗಾರ. ಅವರ ವಿಡಿಯೋ ಆಲ್ಬಂನ್ನು ನಾನು ನಿರ್ದೇಶನ ಮಾಡಿದ್ದೇನೆ. ಇದು ಫುಟ್‌ಬಾಲ್ ಕುರಿತಾದ ಇಂಗ್ಲಿಷ್ ಹಾಡು’ ಎಂದಿದ್ದಾರೆ ಶ್ರುತಿ ಹರಿಹರನ್.
‘ಊರು, ಜಾತಿ, ಧರ್ಮ ಹೀಗೆ ಬೇರೆ ಬೇರೆಯಾಗಿ ಬದುಕುವ ನಾವು ಒಂದು ಹಾಡು ಕೇಳಿದಾಗ ಮತ್ತು ಆಟವಾಡುವಾಗ ಒಂದೇ ಆಗುತ್ತೇವೆ. ಇದೇ ಈ ಹಾಡಿನ ಕಾನ್ಸೆಪ್ಟ್. ಇದನ್ನು ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ ಫುಟ್ಬಾಲ್ ಗೀತೆಯನ್ನಾಗಿ ಬಳಸುತ್ತೇವೆ. ಈ ಹಾಡಿನಲ್ಲಿ ಹಲವು ಊರುಗಳ ಫುಟ್ಬಾಲ್ ಆಟಗಾರರು ಬಂದು ಹೋಗುತ್ತಾರೆ. ಇದರ ನಿರ್ದೇಶನ ಮಾಡಲು ನಾನು ಸಾಕಷ್ಟು ಹೋಮ್‌ವರ್ಕ್ ಮಾಡಿಕೊಂಡಿದ್ದೆ. ಒಂದಷ್ಟು ಸ್ಕ್ರೀನ್ ರೈಟಿಂಗ್ ವಿಡಿಯೊಗಳನ್ನು ನೋಡಲು ಆರಂಭಿಸಿದೆ. ಆನ್‌ಲೈನ್‌ನಲ್ಲಿ ಸಣ್ಣ ಕೋರ್ಸ್ ಮಾಡಿದೆ. ಅವೆಲ್ಲವೂ ನನಗೆ ಈ ಹಾಡನ್ನು ನಿರ್ದೇಶನ ಮಾಡಲು ಅನುಕೂಲವಾದವು. ಇದು ಮೂರು ನಿಮಿಷಗಳ ವಿಡಿಯೊ ಹಾಡು’ ಎಂದು ವಿವರಿಸಿದ್ದಾರೆ ಶ್ರುತಿ ಹರಿಹರನ್.
‘ಮುಂದಿನ ದಿನಗಳಲ್ಲಿಒಂದು ಅಂಥಾಲಜಿ ನಿರ್ದೇಶನ ಮಾಡುವ ಐಡಿಯಾ ಇದೆ. ಅದರ ಬಗೆಗಿನ ಕೆಲಸಗಳು ನಡೆಯುತ್ತಿವೆ. ಇದರ ಜತೆಗೆ ಒಂದು ಕಿರುಚಿತ್ರ ನಿರ್ದೇಶಿಸುವ ಪ್ರಯತ್ನದಲ್ಲಿದ್ದೇನೆ. ಬೆಂಗಳೂರಿನಂಥ ನಗರದಲ್ಲಿ ಹೇಗೆ ಹಲವು ಭಾಷೆಯವರು ಎಲ್ಲಾ ಭಾಷೆ ಮಾತನಾಡುತ್ತಾರೋ, ಅದೇ ರೀತಿ ಈ ಕಿರುಚಿತ್ರದಲ್ಲಿ ಬರುವ ಕಲಾವಿದರು ಎಲ್ಲಾ ಭಾಷೆಗಳನ್ನು ಮಾತನಾಡುತ್ತಾರೆ. ಹಾಗಾಗಿ ಇದು ಎಲ್ಲಭಾಷೆಗಳ ಕಿರುಚಿತ್ರ ಎನ್ನಬಹುದು’ ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ.
"ನಾನೀಗ ನಿರ್ದೇಶನ ಮಾಡಿರುವ ವಿಡಿಯೊ ಆಲ್ಬಂ ಹೆಸರು ‘ಲೆಟ್ ಇಟ್ ಫ್ಲೈ’. ಚಿತ್ರರಂಗದಲ್ಲಿದಿನ ಕಳೆದಂತೆ ಹೊಸತನ್ನು ಮಾಡುವ ತುಡಿತ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿನಾನು ನಿರ್ದೇಶನ ಮತ್ತು ಬರವಣಿಗೆ ಎರಡರಲ್ಲೂ ತೊಡಗಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ" ಎಂದಿದ್ದಾರೆ ಶ್ರುತಿ ಹರಿಹರನ್
Sruthi Hariharan Direct Video Album Let It Fly.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm