ಬ್ರೇಕಿಂಗ್ ನ್ಯೂಸ್
03-11-22 01:02 pm HK News Desk ಸಿನಿಮಾ
ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಸದ್ಯ ದಕ್ಷಿಣ ಭಾರತದ ಸಿನಿ ಪ್ರೇಕ್ಷಕರ ಗಮನ ಸೆಳೆದಿರುವಂತಹ ಕಲಾವಿದನಾಗಿ ನಿಂತಿದ್ದಾರೆ. ನಟನಾಗಲು ಸ್ಟೈಲಿಷ್ ಲುಕ್ ಅಗತ್ಯವಿಲ್ಲ, ಕಲೆ ಮುಖ್ಯ ಎಂಬುದನ್ನು ಸಾಬೀತುಪಡಿಸಿದ ಮತ್ತೋರ್ವ ಕಲಾವಿದ ಎನಿಸಿಕೊಂಡರು ರಾಜ್ ಬಿ ಶೆಟ್ಟಿ.
ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ತಾನೇ ನಿರ್ದೇಶನ ಹಾಗೂ ನಟನೆ ಎರಡನ್ನೂ ಮಾಡಿ ಬೃಹತ್ ಸಾಹಸವೊಂದಕ್ಕೆ ಕೈ ಹಾಕಿದ್ದ ರಾಜ್ ಬಿ ಶೆಟ್ಟಿ ಒಳ್ಳೆಯ ಪ್ರಶಂಸೆ ಪಡೆದುಕೊಂಡರೂ ಸಹ ಬಾಕ್ಸ್ ಆಫೀಸ್‌ನಲ್ಲಿ ಗೆದ್ದದ್ದು ಹಾಗೂ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದು 'ಗರುಡ ಗಮನ ವೃಷಭ ವಾಹನ' ಚಿತ್ರದ ಮೂಲಕ. ಇನ್ನು ಒಂದು ಮೊಟ್ಟೆಯ ಕಥೆ ನಂತರ ಅಮ್ಮಚ್ಚಿ ಎಂಬ ನೆನಪು, ಮಹಿರ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ರೀತಿಯ ಚಿತ್ರಗಳಲ್ಲಿ ನಟಿಸಿದ್ದ ರಾಜ್ ಬಿ ಶೆಟ್ಟಿ ಯಶಸ್ಸು ಸಾಧಿಸಿರಲಿಲ್ಲ.
ಹೀಗೆ ಸಾಲು ಸಾಲು ಸೋಲು ಕಂಡು ಮತ್ತೊಮ್ಮೆ ತಾನೇ ಡೈರೆಕ್ಟರ್ ಹ್ಯಾಟ್ ತೊಟ್ಟು ಭಯಂಕರ ಹುಲಿ ಹೆಜ್ಜೆ ಹಾಕಿ ಗೆದ್ದ ರಾಜ್ ಬಿ ಶೆಟ್ಟಿ ಮುಂದಿನ ಚಿತ್ರ ಯಾವುದು ಎಂದು ಇದೀಗ ಇಡೀ ದಕ್ಷಿಣ ಭಾರತ ಚಿತ್ರರಂಗದ ಸಿನಿ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಹೀಗಿರುವಾಗ ರಾಜ್ ಬಿ ಶೆಟ್ಟಿ ತಮ್ಮ ನಿರ್ದೇಶನದ ಮುಂದಿನ ಚಿತ್ರ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಜತೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಎಂದು ಘೋಷಿಸಿದರು. ಇದರ ಬೆನ್ನಲ್ಲೇ ಇದೀಗ ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರರಂಗಕ್ಕೂ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಅದೂ ಸಹ ನಾಯಕ ನಟನಾಗಿ, ರಾಷ್ಟ್ರ ಪ್ರಶಸ್ತಿ ಪಡೆದ ನಾಯಕಿ ಜತೆಗೆ..
ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರರಂಗ ಪ್ರವೇಶಿಸುತ್ತಿರುವ ವಿಷಯವನ್ನು ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ರಿವೀಲ್ ಮಾಡಲಾಗಿದೆ. ಚಿತ್ರವನ್ನು ನವ ನಿರ್ದೇಶಕ ಜಿಶೋ ಲೋನ್ ಆಂಟನಿ ಎಂಬುವವರು ನಿರ್ದೇಶಿಸಲಿದ್ದು 'ರುಧಿರಂ' ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಇನ್ನು ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತೆ ಅಪರ್ಣ ಬಾಲಮುರಳಿ ನಟಿಸಲಿದ್ದಾರೆ. ಚಿತ್ರಕ್ಕೆ ವಿಎಸ್ ಲಾಲನ್ ಬಂಡವಾಳ ಹೂಡಲಿದ್ದು ಮಿಥುನ್ ಮುಕುಂದನ್ ಸಂಗೀತ ಚಿತ್ರಕ್ಕಿರಲಿದೆ.
ಇನ್ನು ಇತ್ತೀಚೆಗಿನ ದಿನಗಳಲ್ಲಿ ಚಿತ್ರವನ್ನು ಪರಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡುವ ಪ್ರವೃತ್ತಿ ದೊಡ್ಡ ಮಟ್ಟದಲ್ಲಿದ್ದು, ರುಧಿರಂ ಚಿತ್ರ ಕೂಡ ಅದೇ ಮಾರ್ಗದಲ್ಲಿ ಸಾಗಿದೆ. ಆದರೆ ಇತರೆ ಚಿತ್ರಗಳ ಹಾಗೆ ರುಧಿರಂ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವ ಬದಲು ವಿಭಿನ್ನ ಪ್ರಯತ್ನಕ್ಕೆ ಕೈಹಾಕಲಾಗಿದೆ. ಹೌದು, ರುಧಿರಂ ಚಿತ್ರವನ್ನು ಮಲಯಾಳಂ, ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು ಈ ಮೂಲಕ ಹಿಂದಿಯಲ್ಲಿ ಚಿತ್ರ ಬಿಡುಗಡೆಯಾಗುವುದಿಲ್ಲ ಎಂಬುದು ತಿಳಿದುಬಂದಿದೆ. ಸದ್ಯ ಹಿಂದಿ ಬೆಲ್ಟ್‌ನಲ್ಲಿ ದಕ್ಷಿಣ ಭಾರತದ ಚಿತ್ರಗಳು ಭರ್ಜರಿ ಸದ್ದು ಮಾಡುತ್ತಿರುವ ವೇಳೆ ಚಿತ್ರತಂಡದ ಈ ನಿರ್ಣಯ ಅಚ್ಚರಿ ಮೂಡಿಸುವುದರ ಜೊತೆಗೆ ಕುತೂಹಲವನ್ನೂ ಸಹ ಹುಟ್ಟುಹಾಕಿದೆ.
ಇನ್ನು ರಾಜ್ ಬಿ ಶೆಟ್ಟಿ ನಟನೆಯ ಈ ಮಲಯಾಳಂನ ರುಧಿರಂ ಚಿತ್ರದ ಚಿತ್ರೀಕರಣ ಮುಂದಿನ ವರ್ಷ ಶುರುವಾಗಲಿದ್ದು, ಇದಕ್ಕೂ ಮುನ್ನ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರೀಕರಣದ ಕೆಲಸವನ್ನೂ ಸಹ ಆರಂಭಿಸುವ ಸಾಧ್ಯತೆಯಿದೆ. ಹಾಗೂ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ರಮ್ಯಾ ನಟಿಯಾಗಿ ನಟಿಸಲಿದ್ದಾರೆ ಎಂದು ಪೋಸ್ಟರ್ ಮೂಲಕ ಅಧಿಕೃತವಾಗಿ ತಿಳಿಸಲಾಗಿತ್ತು. ಆದರೆ ಇತ್ತೀಚೆಗೆ ಹರಿದಾಡಿದ ಸುದ್ದಿಯ ಪ್ರಕಾರ ನಟಿ ರಮ್ಯಾ ಈ ಚಿತ್ರದಿಂದ ಹೊರನಡೆದಿದ್ದು 'ಸಕುಟುಂಬ ಸಮೇತ' ಚಿತ್ರದಲ್ಲಿ ನಟಿಸಿ ವೀಕ್ಷಕರ ಮನ ಗೆದ್ದಿದ್ದ ನಟಿ ಸಿರಿ ರವಿಕುಮಾರ್ ರಮ್ಯಾ ಸ್ಥಾನ ತುಂಬಲಿದ್ದಾರೆ ಎನ್ನಲಾಗುತ್ತಿದೆ.
Kannada filmmaker-actor Raj B Shetty announced his debut Malayalam film on Tuesday. He unveiled the poster of the film, which has been titled Rudhiram. The project will go on the floors next year. “The Axe Forgets, But the Tree Remembers. #Rudhiram Kickstarting from 2023,” he captioned. Rudhiram will be written and directed by ad filmmaker Jisho Lon Antony. The film stars Aparna Balamurali of Soorarai Pottru fame as the female lead.
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
07-02-25 05:27 pm
HK News Desk
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
07-02-25 10:13 pm
Mangalore Correspondent
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
Mangalore airport: ಮಂಗಳೂರು ಏರ್ಪೋರ್ಟ್ ರನ್ ವೇ ವ...
06-02-25 10:16 pm
Prasad Attavar, Saloon Attack, Mangalore: ಮಸಾ...
05-02-25 10:51 pm
07-02-25 11:55 am
Mangalore Correspondent
Mangalore crime, blackmail Temple priest: ಅರ್...
06-02-25 09:32 pm
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm