ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾದ ನಟ ಕಮಲ್ ಹಾಸನ್‌

24-11-22 01:45 pm       Source: Vijayakarnataka   ಸಿನಿಮಾ

ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್‌ ಆಸ್ಪತ್ರೆಗೆ ನಟ ಕಮಲ್ ಹಾಸನ್ ದಾಖಲಾಗಿದ್ದಾರೆ. ಜ್ವರದಿಂದ ಬಳಲುತ್ತಿರುವ ಕಮಲ್ ಹಾಸನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ನಟ ಕಮಲ್ ಹಾಸನ್ ಅವರು ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಲ್ತ್ ಚೆಕಪ್‌ಗಾಗಿ ಕಮಲ್ ಆಸ್ಪತ್ರೆಗೆ ತೆರಳಿದ್ದರು ಎಂದು ಕೂಡ ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಅವರಿಗೆ ಜ್ವರ ಕೂಡ ಇತ್ತು, ಹೀಗಾಗಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವೈದ್ಯರು ಕಮಲ್ ಹಾಸನ್ ಅವರಿಗೆ ಕೆಲ ದಿನಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದಿದ್ದಾರೆ.

Actor Kamal Haasan Admitted To Chennai Hospital.