108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆಯನ್ನು ನಂಬಬೇಡಿ, ಜನರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ, ಆರೋಗ್ಯ ಸಚಿವ ಯು.ಟಿ ಖಾದರ್ ಬಿಟ್ಟಿ ಸಲಹೆ !

14-10-26 02:02 pm       HK News Staffer   ಕರ್ನಾಟಕ

ರಾಜ್ಯದಲ್ಲಿ 108 ಆರೋಗ್ಯ ಕವಚ ಆಂಬ್ಯುಲೆನ್ಸ್ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಅಕ್ಟೋಬರ್ 14ರ ರಾತ್ರಿ 10 ಗಂಟೆಯಿಂದ ರಾಜ್ಯಾದ್ಯಂತ ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಅಕ್ಟೋಬರ್ 15ರಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿಯೂ ತಿಳಿಸಿದ್ದಾರೆ.

ಬೆಂಗಳೂರು, ಅ.14: ರಾಜ್ಯದಲ್ಲಿ 108 ಆರೋಗ್ಯ ಕವಚ ಆಂಬ್ಯುಲೆನ್ಸ್ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಅಕ್ಟೋಬರ್ 14ರ ರಾತ್ರಿ 10 ಗಂಟೆಯಿಂದ ರಾಜ್ಯಾದ್ಯಂತ ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಅಕ್ಟೋಬರ್ 15ರಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿಯೂ ತಿಳಿಸಿದ್ದಾರೆ. 

ಆದರೆ 108 ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ನಿರ್ಲಕ್ಷ್ಯ ಮಾಡಿರುವ ಆರೋಗ್ಯ ಸಚಿವ ಯು.ಟಿ ಖಾದರ್, 108 ಸೇವೆಯನ್ನು ಮೇಲೆ ಅವಲಂಬನೆ ಆಗಬೇಡಿ. ಜನರು ತಾವಾಗಿಯೇ ವ್ಯವಸ್ಥೆ ಮಾಡಿಕೊಳ್ಳುವಂತೆ ಬಿಟ್ಟಿ ಸಲಹೆ ಮಾಡಿದ್ದಾರೆ.

ಅನಿರ್ದಿಷ್ಟ ಅಂಬುಲೆನ್ಸ್‌ ಮುಷ್ಕರ ಕುರಿತು ಮಾತನಾಡಿದ ಯು.ಟಿ.ಖಾದರ್‌, 108 ಅಂಬುಲೆನ್ಸ್ ಮೇಲೆ ಅವಲಂಬನೆ ಆಗಬೇಡಿ. ಎರಡು ತಿಂಗಳು ಕಾಲ ಅಂಬುಲೆನ್ಸ್ ಮೇಲಿನ ಅವಲಂಬನೆ ತಪ್ಪಿಸಿ. ನಾವು ವ್ಯವಸ್ಥೆ ಸರಿ ಮಾಡುತ್ತಿದ್ದೇವೆ. ಹೊಸ ಅಂಬುಲೆನ್ಸ್ ಖರೀದಿ ಮಾಡಿ ಸಮಸ್ಯೆ ಸರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಂಬುಲೆನ್ಸ್ ಕಡಿಮೆ ಇದೆ. ನಾವು ಖರೀದಿ ಮಾಡುತ್ತೇವೆ. ಅಲ್ಲಿಯ ವರೆಗೆ ಜನರೇ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸಚಿವರು ಹೇಳಿದ್ದಾರೆ.

"ಜನರು 108 ಆಂಬ್ಯುಲೆನ್ಸ್ ಸೇವೆಯನ್ನಷ್ಟೇ ನಂಬಬೇಡಿ, ತುರ್ತು ಸಂದರ್ಭಗಳಲ್ಲಿ ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಆಂಬ್ಯುಲೆನ್ಸ್ ಹಾಗೂ ಪರ್ಯಾಯ ವ್ಯವಸ್ಥೆಗಳನ್ನು ಬಳಸಿಕೊಳ್ಳಿ" ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ನೌಕರರು 'ಜಿವಿಕೆ ಇಎಂಆರ್‌ಐ' ಸಂಸ್ಥೆಯ ನೌಕರರೇ ಹೊರತು ನೇರ ಸರ್ಕಾರಿ ನೌಕರರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೇವೆಯಲ್ಲಿ ವ್ಯತ್ಯಯವಾಗಿ ಸಾರ್ವಜನಿಕರಿಗೆ ತೊಂದರೆಯಾದರೆ ಆ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಅಂಬುಲೆನ್ಸ್‌ ನೌಕರರ ಬ್ಲ್ಯಾಕ್‌ಮೇಲ್‌ಗೆ ಬಗ್ಗೋದಿಲ್ಲ. ರೋಗಿಗಳಿಗೆ ತೊಂದರೆ ಆದರೆ ಕಂಪನಿಗಳೇ ಹೊಣೆಯಾಗಬೇಕು. ಮೂರು ತಿಂಗಳಿಗೊಮ್ಮೆ ಬಂದು ಮುಷ್ಕರ ಅಂದರೆ ಏನು ಅರ್ಥ? ನಾನು ಇವರ ಬ್ಲ್ಯಾಕ್‌ಮೇಲ್‌ಗೆ ಬಗ್ಗಲ್ಲ ಎಂದು ಹೇಳಿದ್ದಾರೆ. 
ಆಂಬುಲೆನ್ಸ್ ಚಾಲಕರು ತಮ್ಮ ವೇತನ ಪರಿಷ್ಕರಣೆ, ವಾರ್ಷಿಕ ಹೆಚ್ಚುವರಿ ವೇತನ, ವಲಯವಾರು ವಿಂಗಡಿತ ವೇತನ ರದ್ದುಪಡಿಸಿ ಸಮಾನ ವೇತನ ಕೊಡಿ, ಕರ್ತವ್ಯದ ಸಮಯ ಸರಿಪಡಿಸುವುದು ಸೇರಿ ವಿವಿಧ ಬೇಡಿಕೆ ಮುಂದಿಟ್ಟು ಮುಷ್ಕರ ಕೈಗೊಂಡಿದ್ದಾರೆ.