'ಪೆಪೆ' ಚಿತ್ರದಲ್ಲಿ ಗ್ಯಾಂಗ್ ಲೀಡರ್ ಆದ ನಟ ವಿನಯ್ ರಾಜ್‌ಕುಮಾರ್

25-11-22 12:43 pm       Source: Vijayakarnataka   ಸಿನಿಮಾ

ಮೇಕಿಂಗ್‌ ಮತ್ತು ವಿಭಿನ್ನ ಸ್ಟೈಲ್‌ನ ಕಥೆ ಎಂಬ ಕಾರಣಕ್ಕೆ ಸುದ್ದಿಯಾಗಿದ್ದ ‘ಪೆಪೆ’ ಸಿನಿಮಾದ ಹೊಸ ಅಪ್ಡೇಟ್‌ ಇಲ್ಲಿದೆ. ಟೀಸರ್‌ ಬಿಡುಗಡೆಯಾದಾಗಲೇ ಈ ಸಿನಿಮಾದ ಬಗ್ಗೆ ಬಹಳಷ್ಟು ಜನ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಟೈಟಲ್‌ ಮತ್ತು ಫಸ್ಟ್‌ ಲುಕ್‌ನಿಂದಾಗಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ‘ಪೆಪೆ’ ಸಿನಿಮಾದ ಚಿತ್ರೀಕರಣ ಕಂಪ್ಲೀಟ್‌ ಆಗಿದೆ. ಟೀಸರ್‌ ಬಿಡುಗಡೆಯಾದಾಗಲೇ ಈ ಸಿನಿಮಾದ ಬಗ್ಗೆ ಬಹಳಷ್ಟು ಜನ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಶ್ರೀಲೇಶ್‌ ಎಸ್‌ ನಾಯರ್‌ ಎಂಬ ಹೊಸ ಹುಡುಗ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇಷ್ಟು ದಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡ ಸಕಲೇಶಪುರದಲ್ಲಿ ನಡೆದ ಕ್ಲೈಮ್ಯಾಕ್ಸ್‌ ಸೀನ್‌ ಶೂಟಿಂಗ್‌ ಬಳಿಕ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದಿದೆ. ಸಾಹಸ ನಿರ್ದೇಶಕ ರವಿವರ್ಮ ಕಂಪೋಸ್‌ ಮಾಡಿದ ಫೈಟಿಂಗ್‌ ಸೀನ್‌ ಚಿತ್ರೀಕರಣ ಮಾಡಿಕೊಳ್ಳಲಾಗಿದೆ.

Kaajal Kunder to play the lead opposite Vinay Rajkumar in 'Pepe' | Kannada  Movie News - Times of India

ಹಳ್ಳಿಯೊಂದರಲ್ಲಿ ನಡೆಯಲಿರುವ ಗ್ಯಾಂಗ್‌ ವಾರ್‌ ಕಥೆ ಈ ಸಿನಿಮಾದಲ್ಲಿದೆ. ನಟ ವಿನಯ್‌ ರಾಜ್‌ಕುಮಾರ್‌ ಮಾಡಿರುವುದು ಕೆಲವೇ ಸಿನಿಮಾ ಆದರೂ ಆರಂಭದಿಂದಲೂ ಹೊಸ ರೀತಿಯ ಪ್ರಯೋಗಗಳನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಗ್ಯಾಂಗ್‌ ಲೀಡರ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಟೀಸರ್‌, ಪೋಸ್ಟರ್‌ ಅವರ ಲುಕ್‌ ಕಂಪ್ಲೀಟ್‌ ಮಾಸ್‌ ಲುಕ್‌ನಲ್ಲಿದೆ. ರಕ್ತಸಿಕ್ತವಾದ ವಿನಯ್‌ ಫೋಟೊಗಳು ಈಗಾಗಲೇ ವೈರಲ್‌ ಆಗಿವೆ.

‘ಇದು ನನ್ನ ಮೊದಲ ಆ್ಯಕ್ಷನ್‌ ಸಿನಿಮಾ. ಸ್ಕ್ರಿಪ್ಟ್ ಉತ್ತಮವಾಗಿದ್ದ ಕಾರಣಕ್ಕೆ ನಾನು ಈ ಸಿನಿಮಾವನ್ನು ಒಪ್ಪಿಕೊಂಡೆ. ‘ಪೆಪೆ’ ಯಲ್ಲಿ ನಾಯಕನಾದರೂ, ಅವನ ಸುತ್ತ ಇರುವ ಕ್ಯಾರೆಕ್ಟರ್‌ಗಳು ಬಹಳ ಮುಖ್ಯ. ಈ ಸಿನಿಮಾದ ಫೈಟ್‌ಗಳಲ್ಲಿ ಇಂಟೆನ್ಸ್‌ ಇದ್ದು, ಪ್ರತಿಯೊಂದು ತೆರೆ ಮೇಲೆ ಬಹಳ ಚೆನ್ನಾಗಿ ಮೂಡಿ ಬಂದಿದೆ. ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದು ಹೇಳಿದ್ದಾರೆ ವಿನಯ್‌ ರಾಜ್‌ಕುಮಾರ್‌.

ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸುತ್ತಿದ್ದಾರೆ. ಕನ್ನಡದ ಖ್ಯಾತ ಖಳ ನಟ ಯಶ್‌ ಶೆಟ್ಟಿ , ಅರುಣಾ ಬಾಲರಾಜ್‌, ನವೀನ್‌ ಡಿ ಪಡೀಲ್‌, ಬಾಲಾ ರಾಜ್ವಾಡಿ, ಮೆದಿನಿ ಕೆಳಮನಿ ಒಳಗೊಂಡ ತಾರಾಬಳಗವಿದೆ. ಅಭಿಷೇಕ್‌ ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಕೊಡಗು, ಸಕಲೇಶಪುರದಲ್ಲಿ ಚಿತ್ರೀಕರಣ ಮಾಡಲಾಗಿದೆ.

ಸ‘ಪೆಪೆ’ ಸಿನಿಮಾದಲ್ಲಿನಾನು ರಗಡ್‌ ಪಾತ್ರದಲ್ಲಿ ನಟಿಸಿದ್ದೇನೆ. ನನ್ನ ಹೆಸರು ಇದರಲ್ಲಿ ಪ್ರದೀಪ. ಆದರೆ ಹುಡುಗರು ಪೆಪೆ ಎಂದು ಕರೆಯುತ್ತಿರುತ್ತಾರೆ. ಇದೊಂದು ಕಲ್ಟ್‌ ಸಿನಿಮಾ ಎಂದಿದ್ದಾರೆ ನಟ ವಿನಯ್‌ ರಾಜ್‌ಕುಮಾರ್‌

Actor Vinay Rajkumar Starrer Pepe Kannada Movie.