ಸದ್ದಿಲ್ಲದೇ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್ ಮಾಡಿದ ರಾಮ್ ಚರಣ್; ಡೈರೆಕ್ಟರ್ ಯಾರು?

29-11-22 12:58 pm       Source: Vijayakarnataka   ಸಿನಿಮಾ

'ಆರ್‌ಆರ್‌ಆರ್' ಸಿನಿಮಾದಿಂದ ಬ್ಲಾಕ್ ಬಸ್ಟರ್ ಸಕ್ಸಸ್ ಪಡೆದುಕೊಂಡಿರುವ ನಟ ರಾಮ್ ಚರಣ್ ಅವರ ಮುಂದಿನ 'ಆರ್‌ಸಿ 15' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ.

ನಟ ರಾಮ್‌ ಚರಣ್‌ ಈ ವರ್ಷ 'ಆರ್‌ಆರ್‌ಆರ್‌'ನಂತರ ಬ್ಲಾಕ್ ಬಸ್ಟರ್ ಸಿನಿಮಾವನ್ನು ನೀಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಆ ಸಿನಿಮಾವು 1100 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಬಾಚಿಕೊಂಡಿದೆ. ಈ ಮಧ್ಯೆ ತಮಿಳು ನಿರ್ದೇಶಕ ಶಂಕರ್ ಜೊತೆಗೆ ಒಂದು ಸಿನಿಮಾವನ್ನು ರಾಮ್ ಚರಣ್ ಮಾಡುತ್ತಿದ್ದಾರೆ. ಅದರ ಶೂಟಿಂಗ್ ಬಿರುಸಿನಿಂದ ಸಾಗಿದೆ. ಈ ನಡುವೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವನ್ನು ರಾಮ್ ಚರಣ್ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾವನ್ನು 'ಉಪ್ಪೆನ' ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ.

2021ರಲ್ಲಿ ತೆರೆಗೆ ಬಂದ 'ಉಪ್ಪೆನ' ದೊಡ್ಡ ಹಿಟ್ ಆಗಿತ್ತು. ಆ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಬುಚ್ಚಿ ಬಾಬು ಸನಾ. ಅದು ಅವರ ಮೊದಲ ಸಿನಿಮಾವಾಗಿತ್ತು. 'ಉಪ್ಪೆನ' ಬಳಿಕ ಎನ್‌ಟಿಆರ್ ಜೊತೆಗೆ ಬುಚ್ಚಿ ಬಾಬು ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬಂದಿತ್ತು. ಇದೀಗ ಅದು ಸುಳ್ಳಾಗಿದೆ. ಸದ್ದಿಲ್ಲದೇ, 'ಮೆಗಾ ಪವರ್ ಸ್ಟಾರ್‌' ರಾಮ್ ಚರಣ್ ಜೊತೆಗೆ ಬುಚ್ಚಿ ಬಾಬು ಸನಾ ಜೋಡಿಸಿದ್ದಾರೆ. ಈ ಬಾರಿ ಪ್ಯಾನ್ ಇಂಡಿಯಾ ಲೆವೆಲ್‌ಗೆ ಆಗುವ ಚಿತ್ರಕಥೆಯೊಂದನ್ನು ಬುಚ್ಚಿ ಬಾಬು ಸಿದ್ಧಪಡಿಸಿದ್ದು, ಈ ಚಿತ್ರದ ಮೂಲಕ ರಾಮ್ ಚರಣ್ ಜೊತೆಗೆ ಸಿನಿಮಾ ಮಾಡಲಿದ್ದಾರೆ.

RRR star Ram Charan's comes together with Uppena director Buchi Babu Sana  for NEW pan-India film

ಈ ಬಿಗ್ ಬಜೆಟ್ ಸಿನಿಮಾಗೆ ನಿರ್ಮಾಪಕರು ಯಾರು?
ರಾಮ್ ಚರಣ್ ಅವರ ಈ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದು, ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಅವರು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಸುಕುಮಾರ್ ಅವರ ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ ನಿರ್ಮಾಣದಲ್ಲಿ ಪಾಲುದಾರಿಕೆಯಲ್ಲಿ ಈ ಅದ್ದೂರಿ ಬಜೆಟ್ನ ಸಿನಿಮಾ ಟೇಕ್‌ ಆಫ್ ಆಗಲಿದೆ. ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣ ಮುಂದಿನ ವರ್ಷ ಪ್ರಾರಂಭವಾಗಲಿದೆ.

ಈ ಬಿಗ್ ಬಜೆಟ್ ಸಿನಿಮಾಗೆ ನಿರ್ಮಾಪಕರು ಯಾರು?
ರಾಮ್ ಚರಣ್ ಅವರ ಈ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದು, ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಅವರು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಸುಕುಮಾರ್ ಅವರ ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ ನಿರ್ಮಾಣದಲ್ಲಿ ಪಾಲುದಾರಿಕೆಯಲ್ಲಿ ಈ ಅದ್ದೂರಿ ಬಜೆಟ್ನ ಸಿನಿಮಾ ಟೇಕ್‌ ಆಫ್ ಆಗಲಿದೆ. ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣ ಮುಂದಿನ ವರ್ಷ ಪ್ರಾರಂಭವಾಗಲಿದೆ.

ಇನ್ನು, ರಾಮ್‌ ಚರಣ್ ಜೊತೆಗೆ ಮುಂದಿನ ಸಿನಿಮಾವನ್ನು ಗೌತಮ್‌ ತಿನ್ನನೂರಿ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಅವರ ಹಿಂದಿ ಸಿನಿಮಾ 'ಜೆರ್ಸಿ' ಸೋಲು ಕಂಡಮೇಲೆ ರಾಮ್ ಗೌತಮ್‌ ಜೊತೆಗೆ ಸಿನಿಮಾ ಮಾಡುವ ಪ್ಲ್ಯಾನ್‌ನಿಂದ ಚರಣ್ ಹಿಂದೆ ಸರಿದರು. ಕನ್ನಡದ ನರ್ತನ್‌ ಕೂಡ ರಾಮ್ ಚರಣ್‌ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ ಅಂತಿಮವಾಗಿ ಬುಚ್ಚಿ ಬಾಬು ಸನಾ ಜೊತೆಗೆ ರಾಮ್ ಚರಣ್ ಕೈಜೋಡಿಸಿದ್ದಾರೆ.

Rrr Actor Ram Charan And Uppena Director Buchi Babu Sana Join Hands New Film.