ಪಾಪ್ಯುಲಾರಿಟಿಯಿಂದ ಸೈಡ್ ಎಫೆಕ್ಟ್ಸ್ ಇವೆ - ವಿಜಯ್ ದೇವರಕೊಂಡ

01-12-22 02:22 pm       Source: Vijayakarnataka   ಸಿನಿಮಾ

ಟಾಲಿವುಡ್ ನಟ ವಿಜಯ್ ದೇವರಕೊಂಡ ಇಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದರು. ತಮ್ಮ ‘ಲೈಗರ್’ ಚಿತ್ರಕ್ಕೆ ಹಾಕಿರುವ ಬಂಡವಾಳ ಮೂಲದ ತನಿಖೆಗೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿರುವ ಇಡಿ ಕಚೇರಿಗೆ ನಟ ವಿಜಯ್ ದೇವರಕೊಂಡ ಭೇಟಿ ಕೊಟ್ಟಿದ್ದರು.

ಟಾಲಿವುಡ್ ನಟ ವಿಜಯ್ ದೇವರಕೊಂಡ ಇಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದರು. ತಮ್ಮ ‘ಲೈಗರ್’ ಚಿತ್ರಕ್ಕೆ ಹಾಕಿರುವ ಬಂಡವಾಳ ಮೂಲದ ತನಿಖೆಗೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿರುವ ಇಡಿ ಕಚೇರಿಗೆ ನಟ ವಿಜಯ್ ದೇವರಕೊಂಡ ಭೇಟಿ ಕೊಟ್ಟಿದ್ದರು. ಸತತ 12 ಗಂಟೆಗಳ ವಿಚಾರಣೆಯ ಬಳಿಕ ಮಾಧ್ಯಮಗಳ ಮುಂದೆ ವಿಜಯ್ ದೇವರಕೊಂಡ ಪ್ರತ್ಯಕ್ಷವಾದರು.

ನಟ ವಿಜಯ್ ದೇವರಕೊಂಡ ಹೇಳಿದ್ದೇನು?
‘’ಜಾರಿ ನಿರ್ದೇಶನಾಲಯಕ್ಕೆ ಕೆಲವು ಸ್ಪಷ್ಟೀಕರಣಗಳ ಅಗತ್ಯವಿತ್ತು. ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ’’ ಎಂದು ಮಾಧ್ಯಮಗಳ ಮುಂದೆ ವಿಜಯ್ ದೇವರಕೊಂಡ ಹೇಳಿದರು. ‘’ಇಲ್ಲಿನ ವಿಚಾರಣೆಯನ್ನೂ ಒಂದು ಅನುಭವವಾಗಿ ನಾನು ಪರಿಗಣಿಸಿದ್ದೇನೆ. ಜನಪ್ರಿಯತೆ ಜೊತೆಗೆ ಇಂತಹ ಅಡ್ಡ ಪರಿಣಾಮಗಳೂ ಉಂಟಾಗುತ್ತವೆ’’ ಎಂದರು ವಿಜಯ್ ದೇವರಕೊಂಡ.

Vijay Deverakonda breaks silence on ED questioning him over Liger funding |  Bollywood Bubble

ಆರೋಪ ಇರಲಿಲ್ಲ!
‘’ಇಂದು ಬೆಳಗ್ಗೆ ನಾನು ಇಲ್ಲಿಗೆ ಬಂದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಕೆಲವು ಸ್ಪಷ್ಟನೆಗಳನ್ನ ನೀಡಬೇಕಿತ್ತು. ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರಿಸಿದ್ದೇನೆ. ನೀವೆಲ್ಲಾ ನನಗೆ ಇಷ್ಟೋಂದು ಪ್ರೀತಿ ಕೊಟ್ಟಿದ್ದೀರಾ. ಆ ಪ್ರೀತಿಯಿಂದ ನನಗೆ ಜನಪ್ರಿಯತೆ, ಖ್ಯಾತಿ ಲಭಿಸಿದೆ. ಪಾಪ್ಯುರಿಟಿಯಿಂದ ಸೈಡ್ ಎಫೆಕ್ಟ್ಸ್ ಇವೆ. ಅದರಲ್ಲಿ ಇದೂ ಒಂದು. ಆದರೆ, ಇದನ್ನ ಒಂದು ಅನುಭವವಾಗಿ ನಾನು ಪರಿಗಣಿಸುತ್ತೇನೆ. ಇದು ಜೀವನ. ನನ್ನನ್ನ ವಿಚಾರಣೆಗೆ ಕರೆದರು. ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ಆರೋಪಗಳು ಇರಲಿಲ್ಲ. ಸ್ಪಷ್ಟನೆ ಬೇಕಾಗಿತ್ತು ಅಷ್ಟೇ’’ ಎಂದು ಮಾಧ್ಯಮಗಳಿಗೆ ವಿಜಯ್ ದೇವರಕೊಂಡ ತಿಳಿಸಿದರು.

ಜಾರಿ ನಿರ್ದೇಶನಾಲಯದ ವಿಚಾರಣೆ
ಈ ಹಿಂದೆ ‘ಲೈಗರ್’ ಚಿತ್ರದ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ನಟಿ-ನಿರ್ಮಾಪಕಿ ಚಾರ್ಮಿ ಕೌರ್ ಅವರುಗಳನ್ನೂ ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿತ್ತು. ‘ಲೈಗರ್’ ಚಿತ್ರದಲ್ಲಿ ಮಾಜಿ ಬಾಕ್ಸರ್ ಮೈಕ್ ಟೈಸನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೈಕ್ ಟೈಸನ್‌ಗೆ ಪಾವತಿಸಿದ ಸಂಭಾವನೆಗೆ ಸಂಬಂಧಿಸಿದಂತೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಉಲ್ಲಂಘನೆಯಾಗಿದೆಯೇ ಎಂಬುದರ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಬಿಗ್ ಬಜೆಟ್ ಸಿನಿಮಾ
‘ಲೈಗರ್’ ಸಿನಿಮಾ ಸುಮಾರು 100 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿತ್ತು. ಇದರಲ್ಲಿ ಅಮೇರಿಕನ್ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಕೂಡ ಅಭಿನಯಿಸಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡದ ‘ಲೈಗರ್’ ಫ್ಲಾಪ್ ಸ್ಟೇಟಸ್ ಪಡೆದುಕೊಂಡಿತು.

‘ಲೈಗರ್’ ವಿರುದ್ಧ ಆರೋಪ
ಬ್ಲಾಕ್ ಮನಿಯನ್ನ ವೈಟ್ ಮಾಡಲು ಕೆಲ ರಾಜಕಾರಣಿಗಳು 125 ಕೋಟಿ ರೂಪಾಯಿಗಳನ್ನು ಚಲನಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಎಂದು ಆರೋಪಿಸಿ ವಾರಂಗಲ್‌ನ ಕಾಂಗ್ರೆಸ್ ಮುಖಂಡ ಬಕ್ಕಾ ಜಡ್ಸನ್ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದರು. ಹೀಗಾಗಿ, ‘ಲೈಗರ್’ ಚಿತ್ರದ ಬಂಡವಾಳ ಮೂಲದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ‘ಲೈಗರ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಅನನ್ಯ ಪಾಂಡೆ ಕಾಣಿಸಿಕೊಂಡಿದ್ದರು. ಕಳೆದ ಆಗಸ್ಟ್ ತಿಂಗಳಿನಲ್ಲಿ ‘ಲೈಗರ್’ ಬಿಡುಗಡೆಯಾಗಿತ್ತು.

Vijay Deverakonda Questioned By Enforcement Directorate Over Funding Of Liger.