ನನ್ನ ತಂದೆ ಕನ್ನಡಿಗ, ಅವರಾಸೆಯಂತೆ ಕನ್ನಡ ಚಿತ್ರ ಮಾಡುವೆ: ತಮಿಳು ನಟ ವಿಶಾಲ್

16-12-22 01:57 pm       Source: Vijayakarnataka   ಸಿನಿಮಾ

ತಮಿಳು ನಟ ವಿಶಾಲ್ ಅಭಿನಯದ ಹೊಸ ಚಿತ್ರ 'ಲಾಠಿ' ವಿಶ್ವದಾದ್ಯಂತ ಡಿ.22ಕ್ಕೆ ಬೆಳ್ಳಿಪರದೆಗೆ ಅಪ್ಪಳಿಸುತ್ತಿದೆ. ಮೈಸೂರಿನಲ್ಲಿ ಚಿತ್ರದ ಪ್ರಚಾರಕ್ಕಾಗಿ ನಟ ವಿಶಾಲ್ ಆಗಮಿಸಿದ್ದರು.

ಕಾಲಿವುಡ್‌ನ ಸ್ಟಾರ್ ವಿಶಾಲ್ ( Vishal ) ಅಭಿನಯದ ಹೊಸ ಚಿತ್ರ 'ಲಾಠಿ' ( Lathi ) ವಿಶ್ವದಾದ್ಯಂತ ಡಿ.22ಕ್ಕೆ ಬೆಳ್ಳಿಪರದೆಗೆ ಅಪ್ಪಳಿಸುತ್ತಿದೆ. 'ಲಾಠಿ' ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಚಿತ್ರದ ಪ್ರೊಮೋಷನ್‌ಗೆ ನಟ ವಿಶಾಲ್ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಸಿನಿಮಾ ಕುರಿತ ಮಾಹಿತಿಯನ್ನ ಹಂಚಿಕೊಂಡ್ರು.

ಈ ಚಿತ್ರದಲ್ಲಿ ವಿಶಾಲ್ ಪೊಲೀಸ್ ಕಾನ್‌ ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನೋದ್ ಕುಮಾರ್ ನಿರ್ದೇಶನವಿರುವ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸಿದ್ದಾರೆ.

Laththi' first look: Vishal tunes into action mode once again | Tamil Movie  News - Times of India

"ಚಿತ್ರ ಉತ್ತಮ ಕಥಾಹಂದರ ಹೊಂದಿದೆ. ಈವರೆಗೂ ಮಾಡಿರದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು ಸಂತಸ ತಂದಿದೆ. ಅಭಿಮಾನಿಗಳಿಗೆ ತಮ್ಮ ನಟನೆ ಸಿಕ್ಕಾಪಟ್ಟೆ ಖುಷಿ ಕೊಡಲಿದೆ" ಅಂತ ವಿಶಾಲ್ ತಿಳಿಸಿದ್ದಾರೆ.

ಕನ್ನಡ ಸಿನಿಮಾ ತಂದೆ ಕನಸು..!
ವಿಶಾಲ್ ಅವರು ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುವ ಕನಸು ಹೊಂದಿದ್ದಾರೆ. ಕನ್ನಡ ಸಿನಿಮಾದಲ್ಲಿ ಅಭಿನಯಿಸಬೇಕು ಅನ್ನೋದು ನನ್ನ ತಂದೆಯ ಕನಸು. ಕನ್ನಡ ಭಾಷೆಯ ಚಿತ್ರದಲ್ಲಿ ನಟಿಸಲು ನಾನು ಸಿದ್ಧನಿದ್ದೇನೆ. ನನ್ನ ತಂದೆ ಕನ್ನಡಿಗರಾಗಿರುವುದರಿಂದ ಈ ಆಸೆ ಪಡುತ್ತಿದ್ದಾರೆ. ಅವರ ಆಸೆ ಈಡೇರಿಸಲು ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತೇನೆ. ಕನ್ನಡ ಚಿತ್ರರಂಗದಿಂದ ಈಗಾಗಲೇ ನನಗೆ ಆಫರ್ ಬಂದಿದೆ. 2023ರಲ್ಲಿ ನಾನು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದೇನೆ. 2024ರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸುತ್ತೇನೆ’ ಎಂದು ವಿಶಾಲ್ ತಿಳಿಸಿದ್ರು.

விஷால், Vishal : விஷால் நடிப்பில் உருவான லத்தி பட ரிலீஸ் தேதி அறிவிப்பு…!  குஷியான ரசிகர்கள்…! - lathi movie release date announced by vishal acting!  kushiyana fans! - Samayam Tamil

ಶಕ್ತಿಧಾಮದ ಸ್ವಯಂಸೇವಕ..!
ಡಾ.ರಾಜ್ ಕುಟುಂಬ ಶಕ್ತಿಧಾಮವನ್ನ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಶಕ್ತಿಧಾಮದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿದೆ. ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರ ಕಾರ್ಯವನ್ನು ಅವರ ಕುಟುಂಬ ಮುಂದುವರೆಸಿದೆ, 1800 ಮಕ್ಕಳಿಗೆ ಬೆಳಕಾಗಿದೆ. ಅವರಿಗೆ ನೆರವಾಗಲು ಸದಾ ಸಿದ್ಧ. ಶಕ್ತಿಧಾಮದ ಮಕ್ಕಳನ್ನು ದತ್ತು ಪಡೆಯಲು ನಾನು ಸದಾ ಸಿದ್ಧನಿದ್ದೇನೆ ಎಂದು ವಿಶಾಲ್ ಹೇಳಿದ್ರು.

ಡಾ. ರಾಜ್‌ಕುಮಾರ್ ಕುಟುಂಬದವರ ಒಪ್ಪಿಗೆಗಾಗಿ ಕಾಯುತ್ತಿದ್ದೇನೆ. ಶಕ್ತಿಧಾಮದ ಸ್ವಯಂಸೇವಕನಾಗಿ ದುಡಿಯಲು ಉತ್ಸುಕನಾಗಿದ್ದೇನೆ. ವಿಶ್ವದ ಯಾವುದೇ ಮೂಲೆಯಲ್ಲಿ ಇದ್ದರೂ ನಾನು ಇಲ್ಲಿಗೆ ಬರುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ಶಕ್ತಿಧಾಮಕ್ಕೆ ಸಹಾಯದ ಅವಶ್ಯಕತೆ ಇಲ್ಲ. ಅವಶ್ಯಕತೆ ಇದ್ದಾಗ ನಾನು ಶಕ್ತಿಧಾಮದ ಜೊತೆಗಿರುತ್ತೇನೆ ಎಂದು ಹೇಳಿದ್ರು .

ಹಾಗೆಯೇ ನಟ ಪ್ರಕಾಶ್ ರಾಜ್ ಆರಂಭಿಸಿರುವ 'ಪುನೀತ್ ಆಂಬ್ಯುಲೆನ್ಸ್ ' ಯೋಜನೆಗಾಗಿ ಐದು ವಾಹನ ನೀಡುವುದಕ್ಕೆ ಒಪ್ಪಿದ್ದೇನೆ ಅಂದ್ರು ವಿಶಾಲ್.ದಕ್ಷಿಣ ಚಿತ್ರರಂಗದ

ಪಾರುಪತ್ಯ..!
ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳು ದೇಶದಲ್ಲಿ ದೊಡ್ಡ ಹೆಸರು ಮಾಡುತ್ತಿವೆ. ಸ್ಯಾಂಡಲ್‌ವುಡ್‌ನಲ್ಲಿ ‘ಕೆಜಿಎಫ್’ ನಂತರ ‘ಕಾಂತಾರ’ ಸಹ ಒಳ್ಳೆಯ ಸಿನಿಮಾ ಆಗಿದೆ. ನಾನು ಕೂಡ ಈ ಚಿತ್ರವನ್ನು ನೋಡಿದ್ದೇನೆ, ಬಹಳ ಚೆನ್ನಾಗಿದೆ. ರಿಷಬ್ ಶೆಟ್ಟಿಗೆ ಕರೆ ಮಾಡಿ ಸಿನಿಮಾ ಚೆನ್ನಾಗಿದೆ ಅಂತ ತಿಳಿಸಿದ್ದೇನೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಇಲ್ಲಿನ ಕಲೆ ಸಂಸ್ಕೃತಿ ಅನಾವರಣ ಆಗುತ್ತಿದೆ. ಉತ್ತರ ಭಾರತದವರಿಗೆ ಇದು ಇಷ್ಟವಾಗ್ತಿದೆ. ದಕ್ಷಿಣ ಭಾರತ, ಉತ್ತರ ಭಾರತದ ಸಿನಿಮಾ ಎಂಬ ಭೇದ ಇಲ್ಲ. ಎಲ್ಲವೂ ಭಾರತದ ಸಿನಿಮಾ ಎಂದು ವಿಶಾಲ್ ತಿಳಿಸಿದರು.

Tamil Actor Vishal Speaks About Lathi Movie Release And Shakthidhama.