'ಪಾನಿಪುರಿ' ಕಿಟ್ಟಿ ಜತೆಗಿನ ಗಲಾಟೆ ಪ್ರಕರಣ: ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದ 'ದುನಿಯಾ' ವಿಜಯ್

17-12-22 01:36 pm       Source: Vijayakarnataka   ಸಿನಿಮಾ

ನಟ ದುನಿಯಾ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ಮಧ್ಯೆ 2018ರಲ್ಲಿ ಗಲಾಟೆ ಆಗಿತ್ತು. ಆಗ ಇಬ್ಬರು ದೂರು-ಪ್ರತಿದೂರು ನೀಡಿದ್ದರು. ಅಂದು ದುನಿಯಾ ವಿಜಯ್ ನೀಡಿದ್ದ ದೂರಿನ ಆಧಾರದ ಮೇಲೆ.

 

2018ರಲ್ಲಿ ನಟ ದುನಿಯಾ ವಿಜಯ್ (Duniya Vijay) ಹಾಗೂ ಪಾನಿಪುರಿ ಕಿಟ್ಟಿ (Panipuri Kitty) ನಡುವೆ ಬೆಂಗಳೂರಿನಲ್ಲಿ ಗಲಾಟೆ ಆಗಿತ್ತು. ಆನಂತರ 'ದುನಿಯಾ' ವಿಜಯ್ ವಿರುದ್ಧ ದೂರು ಕೂಡ ದಾಖಲಾಗಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣವನ್ನು ಕ್ಲೋಸ್ ಮಾಡಲಾಗಿತ್ತು. ಅದೇ ಸಮಯದಲ್ಲಿ 'ದುನಿಯಾ' ವಿಜಯ್ ಕೂಡ ಪಾನಿಪುರಿ ಕಿಟ್ಟಿ ವಿರುದ್ಧ ಪ್ರತಿ ದೂರು ನೀಡಿದ್ದರು. ಇದೀಗ ಪಾನಿಪುರಿ ಕಿಟ್ಟಿ ವಿರುದ್ಧ ಹೊಸ ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಂತೆ ಶುಕ್ರವಾರ (ಡಿ.16) ವಿಚಾರಣೆಗೆ ಹಾಜರಾಗುವಂತೆ ನಗರದ ಹೈಗ್ರೌಂಡ್ಸ್‌ ಪೊಲೀಸರು ನಟ 'ದುನಿಯಾ' ವಿಜಯ್‌ಗೆ ನೋಟಿಸ್‌ ನೀಡಿದ್ದಾರೆ. ಆದರೆ ವಿಜಯ್‌ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದ್ದಾರೆ.

'ಸದ್ಯ ಹೈದರಾಬಾದ್‌ನಲ್ಲಿ ಸಿನಿಮಾವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. 'ಭೀಮ' ಸೇರಿದಂತೆ ಹಲವು ಸಿನಿಮಾಗಳ ಪೂರ್ವ ನಿಗದಿತ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ಹೀಗಾಗಿ, ವಿಚಾರಣೆಗೆ ಹಾಜರಾಗಲು ಬಿಡುವಿಲ್ಲ. ಮುಂದಿನ ವಾರ ವಿಚಾರಣೆಗೆ ಹಾಜರಾಗುತ್ತೇನೆ' ಎಂದು ವಿಜಯ್‌ ಪೊಲೀಸರಿಗೆ ತಿಳಿಸಿದ್ದಾರೆ.

Duniya Vijay Assault Case, 'ಪಾನಿಪುರಿ' ಕಿಟ್ಟಿ ಜತೆಗಿನ ಗಲಾಟೆ ಪ್ರಕರಣ: ವಿಚಾರಣೆಗೆ  ಹಾಜರಾಗಲು ಕಾಲಾವಕಾಶ ಕೋರಿದ 'ದುನಿಯಾ' ವಿಜಯ್ - duniya vijay and panipuri kitty  assault case veera simha reddy ...

ಏನಿದು ಘಟನೆ?
ವಸಂತನಗರದ ಅಂಬೇಡ್ಕರ್‌ ಭವನದಲ್ಲಿ 2018ರಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಆಗ ಪಾನಿಪುರಿ ಕಿಟ್ಟಿ ಹಾಗೂ 'ದುನಿಯಾ' ವಿಜಯ್‌ ಗುಂಪಿನ ನಡುವೆ ಗಲಾಟೆಯಾಗಿತ್ತು. ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪಾನಿಪುರಿ ಕಿಟ್ಟಿಯ ಅಣ್ಣನ ಮಗ ಮಾರುತಿ ಗೌಡನನ್ನು ಗಲಾಟೆ ನಂತರ ದುನಿಯಾ ವಿಜಯ್‌ ಕಾರಿನಲ್ಲಿ ಎಳೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಪೊಲೀಸರ ಸೂಚನೆ ಮೇರೆಗೆ ವಿಜಯ್‌, ಮಾರುತಿಗೌಡನನ್ನು ಮಧ್ಯರಾತ್ರಿ ಠಾಣೆ ಬಳಿಗೆ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದರು. ತೀವ್ರ ಹಲ್ಲೆಗೊಳಗಾಗಿದ್ದ ಮಾರುತಿ ಗೌಡ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಸಂಬಂಧ ಕಿಟ್ಟಿ, ವಿಜಯ್‌ ವಿರುದ್ಧ ದೂರು ದಾಖಲಿಸಿದ್ದರು.

ಆಪ್ತ ಸ್ನೇಹಿತರಾಗಿದ್ದ ಕಿಟ್ಟಿ ಮತ್ತು ದುನಿಯಾ ವಿಜಯ್‌ ಪರಸ್ಪರ ಬಡಿದಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸ್ಪರರು ದೂರು-ಪ್ರತಿದೂರು ದಾಖಲಿಸಿದ್ದರು. ವಿಜಯ್‌ ಹೈಕೋರ್ಟ್‌ನ ಮೊರೆ ಹೋಗಿ ಕಿಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ ಕಿಟ್ಟಿ, ಮೂರ್ನಾಲ್ಕು ದಿನಗಳ ಹಿಂದೆ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರುದಾರ ವಿಜಯ್‌ ಅವರಿಗೆ ಪೊಲೀಸರು ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಮತ್ತು ಆರೋಪಕ್ಕೆ ಸಂಬಂಧಪಟ್ಟ ಸಾಕ್ಷ್ಯಾಧಾರ ಒದಗಿಸುವಂತೆ ಸೂಚಿಸಿದ್ದರು.

ಸದ್ಯ ನಟ ದುನಿಯಾ ವಿಜಯ್ ಹೈದರಾಬಾದ್‌ನಲ್ಲಿದ್ದಾರೆ. ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯಿಸುತ್ತಿರುವ ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ದುನಿಯಾ ವಿಜಯ್ ವಿಲನ್ ಆಗಿ ಬಣ್ಣ ಹಚ್ಚಿದ್ದು, ಆ ಸಿನಿಮಾ ಜನವರಿ 12ರಂದು ತೆರೆಗೆ ಬರಲಿದೆ.

ಪಾನಿಪುರಿ ಕಿಟ್ಟಿ ಹೇಳಿದ್ದೇನು?
ಹೊಸ ಎಫ್‌ಐಆರ್ ದಾಖಲಾಗಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದ ಕಿಟ್ಟಿ, 'ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ನಂಬಿಕೆ ಇದೆ. ಈ ಹಿಂದೆಯೂ ನಾವು ಕೋರ್ಟ್‌ಗೆ ಹೋಗಿದ್ವಿ. ಈಗ ಮತ್ತೆ ಎಫ್‌ಐಆರ್ ಹಾಕಿದ್ದಾರೆ. ಕೋರ್ಟ್‌ನಲ್ಲಿ ಏನು ತೀರ್ಮಾನ ಆಗುತ್ತೋ, ಅದರಂತೆ ನಡೆದುಕೊಳ್ಳುತ್ತೇವೆ. ನಾವು ರಾಜಿಗೆ ಹೋಗುವುದಿಲ್ಲ' ಎಂದು ತಿಳಿಸಿದ್ದರು.

Duniya Vijay And Panipuri Kitty Assault Case Veera Simha Reddy Actor Gets Notice From High Grounds Police Station.