'ಮಿಸೆಸ್‌ ವರ್ಲ್ಡ್' 31 ವರ್ಷದ ಸರ್ಗಂ ಕೌಶಾಲ್‌; 21 ವರ್ಷಗಳ ಬಳಿಕ ಭಾರತಕ್ಕೆ ಪ್ರಶಸ್ತಿಯ ಗರಿ

19-12-22 12:48 pm       Source: Vijayakarnataka   ಸಿನಿಮಾ

21 ವರ್ಷಗಳ ಬಳಿಕ ಮಿಸೆಸ್‌ ವರ್ಲ್ಡ್ ಪ್ರತಿಷ್ಠಿತ ಪ್ರಶಸ್ತಿ ಭಾರತಕ್ಕೆ ದಕ್ಕಿದೆ. 2001ರಲ್ಲಿ ಅದಿತಿ ಗೋವಿತ್ರಿಕರ್‌ ಅವರು ಮಿಸೆಸ್‌ ವರ್ಲ್ಡ್ ಆಗಿ ಆಯ್ಕೆಯಾಗಿದ್ದರು.

ವಿವಾಹಿತ ಮಹಿಳೆಯರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಸರ್ಗಂ ಕೌಶಾಲ್‌ ಅವರಿಗೆ ಪ್ರಶಸ್ತಿ ದಕ್ಕಿದೆ. ಲಾಸ್‌ ಏಂಜಲೀಸ್‌ನಲ್ಲಿ ನಡೆದ ಅಂತಿಮ ಸುತ್ತಿನ ಬಿರುಸಿನ ಪೈಪೋಟಿಯಲ್ಲಿ 63 ದೇಶಗಳ ಸುಂದರಿಯರು ಭಾಗವಹಿಸಿದ್ದರು. 31 ವರ್ಷದ ಜಮ್ಮುವಿನ ಸುಂದರಿ ಗೆಲುವಿನ ನಗೆ ಬೀರಿದರು.

ಮಿಸೆಸ್‌ ಪಾಲಿನೇಷ್ಯಾ ಮೊದಲ ರನ್ನರ್‌ ಅಪ್‌ ಹಾಗೂ ಮಿಸೆಸ್‌ ಕೆನಡಾ ಎರಡನೇ ರನ್ನರ್‌ ಅಪ್‌ ಆಗಿ ಆಯ್ಕೆಯಾಗಿದ್ದಾರೆ. 21 ವರ್ಷಗಳ ಬಳಿಕ ಈ ಪ್ರತಿಷ್ಠಿತ ಪ್ರಶಸ್ತಿ ಭಾರತಕ್ಕೆ ದಕ್ಕಿದೆ. 2001ರಲ್ಲಿ ಅದಿತಿ ಗೋವಿತ್ರಿಕರ್‌ ಅವರು ಮಿಸೆಸ್‌ ವರ್ಲ್ಡ್ ಆಗಿ ಆಯ್ಕೆಯಾಗಿದ್ದರು.

Mrs World 2022 Sargam Koushal Crowning Moment Video: Watch Indian Beauty  Queen Win and Bring Crown Back to India After 21 Years! | 🛍️ LatestLY

ಸರ್ಗಂ ಅವರು ಇಂಗ್ಲಿಷ್‌ ಸಾಹಿತ್ಯದಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ವೈಜಾಗ್‌ನಲ್ಲಿ ಸರ್ಗಂ ಅವರು ಟೀಚರ್ ಆಗಿ ಕೆಲಸ ಮಾಡಿದ್ದರು. ಸರ್ಗಂ ಅವರ ಪತಿ ಭಾರತೀಯ ನೇವಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

Indias Sargam Koushal Crowned Mrs World 2022 WATCH VIDEO

ಅದಿತಿ ಗೋವಿತ್ರಿಕರ್‌ ಅವರು ಸರ್ಗಂ ಅವರಿಗೆ, "ಅಭಿನಂದನೆಗಳು. 21 ವರ್ಷಗಳ ಬಳಿಕ ಈ ಪಟ್ಟ ಸಿಕ್ಕಿದ್ದು ಖುಷಿಯಾಯ್ತು" ಎಂದು ಹೇಳಿದ್ದಾರೆ.

Mrs World 2022 Sargam Koushal Photos: 7 of Her Most Divine Looks on  Instagram That Prove She's a Winner Through and Through! | 👗 LatestLY

Sargam Koushal brings Mrs World 2022 title to India after 21 years

1984ರಲ್ಲಿ ಮೊದಲ ಬಾರಿಗೆ 'ಮಿಸೆಸ್‌ ವರ್ಲ್ಡ್' ಪ್ರಶಸ್ತಿ ಕೊಡಲು ಆರಂಭಿಸಲಾಗಿತ್ತು. ಆರಂಭದಲ್ಲಿ Mrs Woman of the world ನಿಂದ Mrs World ಎಂದು ಹೆಸರು ಬದಲಾಯಿಸಲಾಗಿತ್ತು. 80 ದೇಶಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಮೇರಿಕಕ್ಕೆ ಹೆಚ್ಚು ಪ್ರಶಸ್ತಿ ಸಿಕ್ಕಿವೆ.

Mrs World 2022 Winner Sargam Koushal Bringing The Crown Back To India After 21 Years.