ದುನಿಯಾ ವಿಜಯ್ ಬರ್ತ್​ಡೇ, ಭರ್ಜರಿ ಬಾಡೂಟ

20-01-23 01:42 pm       Source: news18   ಸಿನಿಮಾ

ಸ್ಯಾಂಡಲ್​ವುಡ್ ನಟ ದುನಿಯಾ ವಿಜಯ್ ಬರ್ತ್​ಡೇಗೆ ಭರ್ಜರಿ ಸಿದ್ಧತೆ ನಡೆದಿದ್ದು ಆನೇಕಲ್​​ನಲ್ಲಿ ಅಭಿಮಾನಿಗಳಿಗಾಗಿ ಬಾಡೂಟ ವ್ಯವಸ್ಥೆ ಮಾಡಲಾಗಿದೆ. ಚಿಕನ್ ಬಿರಿಯಾನಿ, ಚಿಕನ್ ಚಾಪ್ಸ್ ವ್ಯವಸ್ಥೆ ಮಾಡಲಾಗಿದೆ.

ಆನೇಕಲ್​ನಲ್ಲಿ ನಟ ದುನಿಯಾ ವಿಜಯ್ ಬರ್ತ್​ಡೇ ಆಚರಣೆಗೆ ಭರದ ಸಿದ್ಧತೆ ನಡೆದಿದೆ. ಸ್ಯಾಂಡಲ್​ವುಡ್ ಸಲಗ ದುನಿಯಾ ವಿಜಿ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ ಅಭಿಮಾನಿಗಳು. ತಂದೆ ತಾಯಿಯ ಸಮಾಧಿಯ ಬಳಿ ಹುಟ್ಟುಹಬ್ಬ ಆಚರಿಸಿಕೊಳ್ಳು ದುನಿಯಾ ವಿಜಯ್ ಸಿದ್ದತೆ ಮಾಡಿಕೊಂಡಿದ್ದಾರೆ. ಹುಟ್ಟೂರು ಕುಂಬಾರನಹಳ್ಳಿಯಲ್ಲಿ ದುನಿಯಾ ವಿಜಿ ಬರ್ತ್ ಡೇ ಆಚರಣೆ ನಡೆಯಲಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿಮ ಕುಂಬಾರನಹಳ್ಳಿಯಲ್ಲಿ ತಂದೆ ರುದ್ರಪ್ಪ ಹಾಗೂ ತಾಯಿ ನಾರಾಯಣಮ್ಮ ಸಮಾಧಿ ಬಳಿ ಬರ್ತ್ ಡೇ ಸಿದ್ದತೆ ನಡೆದಿದೆ. ಇಲ್ಲಿ ವಿಜಯ್ 49ನೇ ವರ್ಷದ ಬರ್ತ್ಡೇ ಆಚರಿಸಲಿದ್ದಾರೆ. ತಂದೆ-ತಾಯಿ ಸಮಾಧಿಗೆ ದೇವಸ್ಥಾನದ ಮಂಟಪ ರೀತಿ ಸಿಂಗಾರ ಮಾಡಲಾಗಿದ್ದು ಸಮಾಧಿ ಬಳಿ ಆದ್ದೂರಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಎಕರೆಗಟ್ಟಲೇ ಪೇಂಡಲ್ ಹಾಕಿ ಸಿದ್ದತೆ ಮಾಡಿದ್ದು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ.

 ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿಮ ಕುಂಬಾರನಹಳ್ಳಿಯಲ್ಲಿ ತಂದೆ ರುದ್ರಪ್ಪ ಹಾಗೂ ತಾಯಿ ನಾರಾಯಣಮ್ಮ ಸಮಾಧಿ ಬಳಿ ಬರ್ತ್ ಡೇ ಸಿದ್ದತೆ ನಡೆದಿದೆ. ಇಲ್ಲಿ ವಿಜಯ್ 49ನೇ ವರ್ಷದ ಬರ್ತ್ಡೇ ಆಚರಿಸಲಿದ್ದಾರೆ.

ದುನಿಯಾ ವಿಜಯ್ ಅವರ ಮುಂಬವರು ಸಿನಿಮಾ ಭೀಮ ಚಿತ್ರದ ಪೋಸ್ಟರ್ ಗಳು ಎಲ್ಲೆಡೆ ರಾರಾಜಿಸಿವೆ. ಕುಂಬಾರನಹಳ್ಳಿ ಗ್ರಾಮದತ್ತ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.  ನೆಚ್ಚಿನ ನಟನ ಆಗಮನಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬರ್ತ್ ಡೇ ಗೆ ಬಂದ ಅಭಿಮಾನಿಗಳಿಗೆ ಭರ್ಜರಿ ಬಾಡೂಟ ತಯಾರಿಯೂ ಮಾಡಲಾಗಿದೆ.

 ತಂದೆ-ತಾಯಿ ಸಮಾಧಿಗೆ ದೇವಸ್ಥಾನದ ಮಂಟಪ ರೀತಿ ಸಿಂಗಾರ ಮಾಡಲಾಗಿದ್ದು ಸಮಾಧಿ ಬಳಿ ಆದ್ದೂರಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಎಕರೆಗಟ್ಟಲೇ ಪೇಂಡಲ್ ಹಾಕಿ ಸಿದ್ದತೆ ಮಾಡಿದ್ದು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ.

ದುನಿಯಾ ವಿಜಯ್ ಅಭಿಮಾನಿಗಳಿಗೆ ಚಿಕನ್ ಬಿರಿಯಾನಿ, ಚಿಕನ್ ಚಾಪ್ಸ್ ವ್ಯವಸ್ಥೆ ಮಾಡಲಾಗಿದ್ದು ಮೂರು ಸಾವಿರಕ್ಕೂ ಅಧಿಕ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

Preparations done for Dvuniya Vijay Birthday Celebration in Anekal.