ಅಪ್ಪು ಜನ್ಮದಿನದಂದೇ ಉಪೇಂದ್ರ ಕಬ್ಜ ರಿಲೀಸ್

24-01-23 01:28 pm       Source: news18   ಸಿನಿಮಾ

ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅಭಿನಯದ ಕಬ್ಜ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರೋ ಈ ಚಿತ್ರವನ್ನು ವಿಶೇಷ ದಿನವೇ (Kabzaa Movie Release) ರಿಲೀಸ್ ಮಾಡಲಾಗುತ್ತಿದೆ.

ರಿಯಲ್ ಸ್ಟಾರ್ ಸಿನಿಮಾ ಪವರ್ ಸ್ಟಾರ್ ಜನ್ಮ ದಿನದಂದು ರಿಲೀಸ್ ಆಗುತ್ತಿದೆ. ನಿಜಕ್ಕೂ ಈ ಒಂದು ಮಾತು ಸ್ಪೆಷಲ್ ಆಗಿದೆ ನೋಡಿ. ಈ ರೀತಿ ನಿರ್ಧಾರವನ್ನ ಎಲ್ಲರೂ ತೆಗೆದುಕೊಳ್ಳುವುದಿಲ್ಲ. ಆದರೆ ಕಬ್ಜ ಚಿತ್ರದ ನಿರ್ದೇಶಕರು ಈ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ.

ನಿರ್ಮಾಪಕ-ನಿರ್ದೇಶಕ ಆರ್. ಚಂದ್ರು ಅವರ ಈ ಒಂದು ನಿರ್ಧಾರಕ್ಕೆ ಎಲ್ಲ ಭಾಷೆಯ ವಿತರಕರೂ ಸಾಥ್ ಕೊಟ್ಟಿದ್ದಾರೆ. ದೊಡ್ಡ ಬಜೆಟ್​ನ ಸಿನಿಮಾ ಆಗಿರೋದರಿಂದ ಎಲ್ಲರ ಸಪೋರ್ಟ್ ಕೂಡ ಬೇಕಾಗುತ್ತದೆ. ಅದಕ್ಕೆ ನಿರ್ಮಾಪಕ ಆರ್​.ಚಂದ್ರು ಅವರಿಗೆ ಎಲ್ಲರೂ ಈಗ ಸಾಥ್ ಕೊಟ್ಟಿದ್ದಾರೆ.

Kabzaa (Kabza) Fan Photos | Kabzaa Photos, Images, Pictures # 70263 -  FilmiBeat

Kabzaa Movie going to Release on Puneeth Birthday

ಅಪ್ಪು ಜನ್ಮ ದಿನಕ್ಕೆ ಉಪ್ಪಿ ಸಿನಿಮಾ ರಿಲೀಸ್ ಯಾಕೆ ?
ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳು ಅಂದ್ರೆ ಎಲ್ಲರಿಗೂ ಇಷ್ಟ ಆಗುತ್ತವೆ. ಅದೇ ರೀತಿ ಉಪ್ಪಿಯ ಕಬ್ಜ ಚಿತ್ರದ ಎಲ್ಲ ಹಂತಗಳನ್ನೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನೋಡಿಕೊಂಡು ಬಂದಿದ್ದರು. ಸಿನಿಮಾದ ಪ್ರತಿ ವಿಷಯವನ್ನು ಆರ್.ಚಂದ್ರು ಅವರಿಂದ ತಿಳಿದುಕೊಂಡಿದ್ದರು.

ತೆರೆ ಹಿಂದಿನ ಈ ವಿಷಯವನ್ನ ಡೈರೆಕ್ಟರ್ ಆರ್.ಚಂದ್ರು ನ್ಯೂಸ್​-18 ಕನ್ನಡ ಡಿಜಿಟಲ್​ ಜೊತೆಗೆ ಹಂಚಿಕೊಂಡಿದ್ದಾರೆ. ನಮ್ಮ ಚಿತ್ರದ ಪ್ರತಿ ಹಂತವನ್ನೂ ಅಪ್ಪು ಸರ್ ಗಮನಿಸಿದ್ದಾರೆ. ದೊಡ್ಡ ಸಿನಿಮಾ ಮಾಡುತ್ತಿದ್ದೀರಾ, ಬಜೆಟ್ ಕೂಡ ದೊಡ್ಡದೇ ಇದೆ. ಚಿತ್ರವನ್ನ ನೋಡಿಕೊಂಡು ಮಾಡಿ, ಹುಷಾರಾಗಿ ಮಾಡಿ ಅಂತಲೂ ಆರ್​​.ಚಂದ್ರು ಅವರಿಗೆ ಅಪ್ಪು ಹೇಳಿದ್ದರು.

Kabzaa Teaser: Upendra and Kichcha Sudeep's gangster actioner is a story of  rags to riches | PINKVILLA

ಚಿತ್ರದ ಮೋಷನ್ ಪೋಸ್ಟರ್, ಪೋಸ್ಟರ್ ಹೀಗೆ ಚಿತ್ರದ ಪ್ರತಿ ವಿಷಯವನ್ನ ಪುನೀತ್ ಗಮನಿಸಿದ್ದಾರೆ. ಅದನ್ನ ಅಷ್ಟೇ ಖುಷಿಯಿಂದಲೂ ಮೆಚ್ಚಿಕೊಂಡು ಆರ್​​.ಚಂದ್ರು ಅವರಿಗೆ ಹೇಳಿದ್ದಾರೆ. ಅದೇ ಒಂದು ಪ್ರೀತಿಯಿಂದಲೇ ಅಪ್ಪು ಅವರ ಮೇಲಿನ ಗೌರವದಿಂದಲೇ ಆರ್ ಚಂದ್ರು ತಮ್ಮ ಕಬ್ಜ ಚಿತ್ರವನ್ನ ಪುನೀತ್ ಜನ್ಮ ದಿನಕ್ಕೆ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.

Kabzaa (2023) - Movie | Reviews, Cast & Release Date - BookMyShow

Kabzaa Movie going to Release on Puneeth Birthday

ಮಾರ್ಚ್​-17 ರಂದು ಕಬ್ಜ ಸಿನಿಮಾ ರಿಲೀಸ್
ರಿಯಲ್ ಸ್ಟಾರ್ ಉಪೇಂದ್ರ ಅವರ ಕಬ್ಜ ಚಿತ್ರ ಮಾರ್ಚ್​-17 ರಂದು ರಿಲೀಸ್ ಆಗುತ್ತಿದೆ. ಅಪ್ಪು ಜನ್ಮ ದಿನಕ್ಕೆ ಈ ಒಂದು ಚಿತ್ರ ರಿಲೀಸ್ ಮಾಡುತ್ತಿದ್ದೇವೆ. ಅಪ್ಪು ಅವರಿಗೆ ಈ ಮೂಲಕ ಗೌರವ ಸಲ್ಲಿಸುತ್ತಿದ್ದೇವೆ ಎಂದು ಚಿತ್ರದ ನಿರ್ದೇಶಕ-ನಿರ್ಮಾಪಕ ಆರ್.ಚಂದ್ರು ಹೇಳಿದ್ದಾರೆ.

ರಿಯಲ್ ಸ್ಟಾರ್ ಉಪ್ಪಿ ಅವರ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಕನ್ನಡದ ಕಾಂತಾರ ಚಿತ್ರ ಆದ್ಮೇಲೆ ಸದ್ಯಕ್ಕೆ ಯಾವುದೇ ದೊಡ್ಡ ಚಿತ್ರ ಪ್ಯಾನ್​ ಇಂಡಿಯಾ ಲೆವಲ್​ಗೆ ರಿಲೀಸ್ ಆಗುತ್ತಿಲ್ಲ ಅಂತಲೇ ಹೇಳಬಹುದು.

Kabza movie teaser will release one day before Upendra's birthday - News  Portal

ಕಬ್ಜ ರಿಲೀಸ್ ಬಗ್ಗೆ ಆರ್​.ಚಂದ್ರು ಏನ್ ಹೇಳ್ತಾರೆ?
ರಿಯಲ್ ಸ್ಟಾರ್ ಉಪೇಂದ್ರ ಅವರ ಕಬ್ಜ ಚಿತ್ರ ಮಾರ್ಚ್​-17 ರಂದು ರಿಲೀಸ್ ಆಗುತ್ತಿದೆ. ಅಪ್ಪು ಜನ್ಮ ದಿನಕ್ಕೆ ಈ ಒಂದು ಚಿತ್ರ ರಿಲೀಸ್ ಮಾಡುತ್ತಿದ್ದೇವೆ. ಅಪ್ಪು ಅವರಿಗೆ ಈ ಮೂಲಕ ಗೌರವ ಸಲ್ಲಿಸುತ್ತಿದ್ದೇವೆ. ಅವರು ಕನ್ನಡ ಚಿತ್ರರಂಗದ ದೇವರೇ ಆಗಿದ್ದಾರೆ ಎಂದು ಚಂದ್ರು ಹೇಳ್ತಾರೆ.

ಅಪ್ಪು ಅವರ ಜನ್ಮ ದಿನದಂದು ರಿಲೀಸ್ ಮಾಡೋ ನಿರ್ಧಾರ ತೆಗೆದುಕೊಂಡಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಎಲ್ಲ ಕೆಲಸಗಳು ನಡೆಯುತ್ತಿವೆ. ಯಾವುದು ಬಾಕಿ ಉಳಿದಿಲ್ಲ. ಇತರ ಕೆಲಸಗಳು ವೇಗದಲ್ಲಿಯೇ ಆಗುತ್ತಿವೆ ಅಂತಲೂ ಆರ್ ಚಂದ್ರು ಹೇಳುತ್ತಾರೆ.

ಕಬ್ಜ ಚಿತ್ರ ಈಗಾಗಲೇ ತನ್ನ ಮೇಕಿಂಗ್​ನಿಂದಲೇ ಹೆಚ್ಚು ಗಮನ ಸೆಳೆದಿದೆ. ಚಿತ್ರದ ಪೋಸ್ಟರ್ ಮತ್ತು ಟೀಸರ್ ಅತಿ ಹೆಚ್ಚು ನಿರೀಕ್ಷೆ ಮೂಡಿಸಿದೆ. ಕೆಜಿಎಫ್​ ರೀತಿನೆ ಈ ಚಿತ್ರವೂ ಇದೆ ಅಂತಲೇ ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನುಳಿದಂತೆ ಕಬ್ಜ ಕೂಡ ಕನ್ನಡದ ಮತ್ತೊಂದು ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಬಾಲಿವುಡ್​ನಲ್ಲಿ ಈಗಾಗಲೇ ಕಬ್ಜ ಸದ್ದು ಮಾಡುತ್ತಲೇ ಇದೆ.

Kabzaa movie going to release on Puneeth Birthday rvj.