ವಿಜಯ್ ಕಿರಗಂದೂರು, ರಿಷಬ್​ಗೆ ಸಿಕ್ತು ಮುಂಗಡ ಜಾಮೀನು! ಕೋರ್ಟ್ ಹೇಳಿದ್ದೇನು?

10-02-23 01:22 pm       Source: news18   ಸಿನಿಮಾ

ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಕೇರಳ ಹೈಕೋರ್ಟ್ (Kerala Highcourt) ಮುಂಗಡ ಜಾಮೀನು ಕೊಟ್ಟಿದೆ.

ಕೋಝಿಕ್ಕೋಡ್ ನಗರ ಪೊಲೀಸ್ ಠಾಣೆಯಲ್ಲಿ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್​ನ ಖ್ಯಾತ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಕ್ರೈಂ ನಂ.703/2022 ರಲ್ಲಿ ಹೆಸರಿಸಲ್ಪಟ್ಟಿದ್ದಾರೆ. ಕಾಪಿರೈಟ್ ಆ್ಯಕ್ಟ್ 1956ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಅನುಮತಿ ಇಲ್ಲದೆ ಕಾಪಿ ಮಾಡಲಾಗಿದೆ

ಅರ್ಜಿದಾರರ ಪ್ರಕಾರ ವರಾಹರೂಪಂ ಹಾಡು ನವರಸಂ ಹಾಡಿನ ಅನಧಿಕೃತ ಕಾಪಿಯಾಗಿದೆ ಎಂದು ಹೇಳಲಾಗಿದೆ. ಮಾತೃಭೂಮಿ ಮುದ್ರಣ ಹಾಗೂ ಪ್ರಸರಣ ಕಂಪೆನಿ ಲಿಮಿಟೆಡ್​​ನ ಕಪ್ಪ ಟಿವಿಯಲ್ಲಿ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ನವರಸಂ ಹಾಡನ್ನು ಪರ್ಫಾರ್ಮ್ ಮಾಡಿದ್ದರು. ಆದರೆ ವರಾಹ ರೂಪಂ ಹಾಡಿನ ತಂಡ ಇದು ಒಂದು ಸ್ವತಂತ್ರ ರಚನೆಯಾಗಿದ್ದು ಯಾವುದನ್ನೂ ಕಾಪಿ ಮಾಡಿಲ್ಲ ಎಂದು ಹೇಳಿತ್ತು. ಆದರೆ ವಿವಾದ ಇನ್ನೂ ಕೊನೆಯಾಗಿಲ್ಲ.

Kantara: Prime Video removes Varaha Roopam song from OTT release, fans  disappointed | Entertainment News,The Indian Express

ಇದು ಕಾಪಿ ಅಲ್ಲ, ಸ್ಫೂರ್ತಿ ಎಂದಿದ್ದ ಕಾಂತಾರ ತಂಡ

‘ಕಾಂತಾರ’ ಚಿತ್ರ ಬಿಡುಗಡೆ ಆದಾಗಲೇ ‘ವರಾಹ ರೂಪಂ..’ ಮತ್ತು ‘ನವರಸಂ..’ ಹಾಡಿನ ನಡುವೆ ಇರುವ ಸಾಮ್ಯತೆ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಅನೇಕರು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಆದರೆ ‘ಇದು ಕಾಪಿ ಅಲ್ಲ, ಕೇವಲ ಸ್ಫೂರ್ತಿ ಪಡೆದು ಮಾಡಿದ್ದು. ರಾಗಗಳು ಒಂದೇ ಆಗಿರುವ ಕಾರಣದಿಂದ ಸಾಮ್ಯತೆ ಸಹಜ’ ಎಂದು ಅಜನೀಶ್​ ಬಿ. ಲೋಕನಾಥ್ ಅವರು ಸಮಜಾಯಿಷಿ ನೀಡಿದ್ದರು.

Kantara makers ordered to stop playing the song Varaha Roopam in theatres,  streaming platforms | Entertainment News,The Indian Express

ಮ್ಯೂಸಿಕ್ ಆ್ಯಪ್​​ಗಳಿಂದ ಡಿಲೀಟ್ ಮಾಡಿದ್ದ ಹಾಡು

ಮ್ಯೂಸಿಕ್ ಆ್ಯಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಕಾಪಿ ರೈಟ್ ಎನ್ನುವುದು ಸೂಕ್ಷ್ಮ ಸಂಗತಿ. ಹಾಡು, ಕಂಟೆಂಟ್​​ಗಳು ಕಾಪಿ ಆದಾಗ ಅದರ ಬಗ್ಗೆ ಎಚ್ಚರಿಕೆಯನ್ನೂ ನೀಡಲಾಗುತ್ತದೆ. ಹಾಡನ್ನು ಪ್ಲೇ ಮಾಡದಂತೆ ಕೋರ್ಟ್ ಆದೇಶಿಸಿದ ಕೆಲವು ದಿನಗಳ ನಂತರ ಈಗ ಹಾಡನ್ನು ಎಲ್ಲೆಡೆ ಡಿಲೀಟ್ ಮಾಡಲಾಗಿತ್ತು.

ಕೇರಳದ ಸ್ಥಳೀಯ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಹಾಡನ್ನು ಬಳಸದಂತೆ ಕಾಂತಾರ ತಂಡಕ್ಕೆ ಆದೇಶ ಹೊರಡಿಸಿತ್ತು. ಈಗ ಈ ಆದೇಶಕ್ಕೆ ಚಿತ್ರತಂಡ ತಲೆಬಾಗಿದ್ದು ಯೂಟ್ಯೂಬ್, ಮ್ಯೂಸಿಕ್ ಆ್ಯಪ್​ಗಳಾದ ಸಾವನ್, ಗಾನ ಮೊದಲಾದ ಪ್ಲಾಟ್​ಫಾರ್ಮ್​ಗಳಿಂದ ಈ ಸಾಂಗ್ ಡಿಲೀಟ್ ಮಾಡಲಾಗಿತ್ತು.

Kantara makers get Anticipatory Bail told not to Exhibit Song Varaharoopam Song.