ಬ್ರೇಕಿಂಗ್ ನ್ಯೂಸ್
02-08-23 01:42 pm Source: Filmy Beat kannada ಸಿನಿಮಾ
ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) ದೇಶದ ಅತ್ಯಂತ ಜನಪ್ರಿಯ ಪ್ರಶಸ್ತಿಗಳಲಲ್ಲಿ ಒಂದಾಗಿದೆ. ಪ್ರತಿ ವರ್ಷ ಕನ್ನಡ, ತೆಲುಗು, ತಮಿಳು, ಮತ್ತು ಮಲಯಾಳಂ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ SIIMA ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳಿಗೆ ಈ ವರ್ಷ ಪ್ರಶಸ್ತಿ ನೀಡಲಾಗುತ್ತದೆ. ಈಗಾಗಲೇ ನಾಮಿನೇಷನ್ ಪಟ್ಟಿ ಬಿಡುಗಡೆಯಾಗಿದೆ.
ಸೆಪ್ಟೆಂಬರ್ 15 ಮತ್ತು 16ರಂದು ದುಬೈನ ದಿ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಸೈಮಾ 2023 ಈವೆಂಟ್ ನಡೆಯಲಿದೆ. ಕಳೆದ ಬಾರಿ ಬೆಂಗಳೂರಿನಲ್ಲಿ ನಡೆದ ಬೆಂಗಳೂರಿನಲ್ಲಿ ಸೈಮಾ ಈವೆಂಟ್ ಸಡಗರ ಸಂಭ್ರಮದಿಂದ ನೆರವೇರಿತ್ತು. 11ನೇ ಸೈಮಾ ರಂಗುರಂಗಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ನಾಮಿನೇಷನ್ ವಿಚಾರಕ್ಕೆ ಬಂದರೆ ಕನ್ನಡದ 'KGF ಚಾಪ್ಟರ್- 2', 'ಕಾಂತಾರ', ತೆಲುಗಿನ 'RRR', 'ಸೀತಾ ರಾಮಂ', ತಮಿಳಿನ 'ಪೊನ್ನಿಯಿನ್ ಸೆಲ್ವನ್-1', 'ರಾಕೆಟ್ರಿ', ಮಲಯಾಳಂನ 'ಭೀಷ್ಮ ಪರ್ವಂ', 'ಹೃದಯಂ' ಸಿನಿಮಾಗಳು ಹೆಚ್ಚು ಪ್ರಶಸ್ತಿಗಳನ್ನು ಗೆಲ್ಲುವ ನಿರೀಕ್ಷೆ ಹುಟ್ಟಾಕ್ಕಿವೆ.
ತೆಲುಗಿನಲ್ಲಿ 'RRR', 'ಸೀತಾ ರಾಮಂ', 'DJ ತಿಲ್ಲು', 'ಕಾರ್ತಿಕೇಯ -2' ಮತ್ತು 'ಮೇಜರ್' ಸೈಮಾ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ 2023ಗಾಗಿ ಪೈಪೋಟಿ ನಡೆಸುತ್ತಿವೆ. ತಮಿಳಿನಲ್ಲಿ, ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್- 1', 'ರಾಕೆಟ್ರಿ; ದಿ ನಂಬಿ ಎಫೆಕ್ಟ್', 'ತಿರುಚಿತ್ರಬಲಂ', 'ವಿಕ್ರಂ', 'ಲವ್ ಟುಡೆ' ಸಿನಿಮಾಗಳು ಪೈಪೋಟಿಯಲ್ಲಿವೆ.
ಮಲಯಾಳಂನಲ್ಲಿ ಮೋಹನ್‌ಲಾಲ್ ಪುತ್ರನ 'ಹೃದಯಂ', ಮಮ್ಮುಟಿ ಅಭಿನಯದ 'ಭೀಷ್ಮ ಪರ್ವಂ', 'ಜನ ಗಣ ಮನ', 'ನಾನ್ ತಾನ್ ಕೇಸ್ ಕುಡು', 'ತಲ್ಲುಮಾಲ' ಸಿನಿಮಾ ಸೈಮಾ ಪ್ರಶಸ್ತಿಗೆ ನಾಮಿನೇಷನ್ ಆಗಿವೆ. ಬೇರೆ ವಿಭಾಗಗಳಲ್ಲಿ ಯಾವ ಯಾವ ಸಿನಿಮಾ ನಾಮಿನೇಟ್ ಆಗಿವೆ ಎನ್ನುವುದರ ಪಟ್ಟಿ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಹಲವು ಸಿನಿಮಾಗಳು ಈ ಬಾರಿ ಸೈಮಾ ಪ್ರಶಸ್ತಿ ರೇಸ್‌ನಲ್ಲಿದ್ದು ಭಾರೀ ಪೈಪೋಟಿ ಏರ್ಪಡುವ ಸುಳಿವು ಸಿಗುತ್ತಿದೆ.
ಕನ್ನಡದ ಸೂಪರ್ ಹಿಟ್ ಸಿನಿಮಾಗಳಾದ 'ಕಾಂತಾರ' ಹಾಗೂ 'KGF ಚಾಪ್ಟರ್- 2' ತಲಾ 11 ವಿಭಾಗಗಳಲ್ಲಿ ಪ್ರಶಸ್ತಿ ನಾಮಿನೇಟ್ ಆಗಿವೆ. ಅದೇ ರೀತಿ ತೆಲುಗಿನ 'RRR' ಸಿನಿಮಾ 11, 'ಸೀತಾ ರಾಮಂ' ಸಿನಿಮಾ 10 ಹಾಗೂ ತಮಿಳಿನ ಪೊನ್ನಿಯಿನ್ ಸೆಲ್ವನ್-1 ಸಿನಿಮಾ 10 ವಿಭಾಗಗಳಲ್ಲಿ ಪ್ರಶಸ್ತಿ ರೇಸ್‌ನಲ್ಲಿವೆ.
SIIMA awards 2023 nominations KGF 2 Kantara RRR take lead.
20-01-25 07:00 pm
HK News Desk
Hassan Suicide, Online Gaming: ಅಮ್ಮಾ ನನ್ನನ್ನು...
20-01-25 04:24 pm
ಕೇಸರಿ ಮನೆಯಲ್ಲಿ ಬಣ ಬಡಿದಾಟ ಜೋರು ; ಯತ್ನಾಳ್ ಬಣದ ಎ...
19-01-25 08:30 pm
ಮುಡಾ ಸೈಟ್ ಹಗರಣ ; 300 ಕೋಟಿ ಮೌಲ್ಯದ 142 ಆಸ್ತಿಗಳನ...
18-01-25 05:05 pm
ಗದಗ ; ಪ್ರೀತಿಸಲು ಪೀಡಿಸುತ್ತಿದ್ದ ಇಬ್ಬರು ಯುವಕರು,...
16-01-25 05:30 pm
19-01-25 08:17 pm
HK News Desk
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
Actor Saif Ali Khan attack stabbed: ಬಾಲಿವುಡ್...
16-01-25 04:24 pm
20-01-25 11:05 pm
Mangalore Correspondent
Mangalore, Ivan dsouza, CM Siddaramaiah: ಬಹು...
20-01-25 06:00 pm
International Kite Festival 2025, Thannirbhav...
18-01-25 09:27 pm
Mangalore Dinesh Gundu Rao, belthandy: ತಾಲೂಕು...
18-01-25 06:16 pm
CM Siddaramaiah, multicultural fest, Mangalor...
17-01-25 11:10 pm
20-01-25 10:18 pm
HK News Desk
Mangalore Kotekar Bank Robbery, Three Arreste...
20-01-25 07:19 pm
Mangalore Kotekar Robbery, Davanagere: ಮಂಗಳೂರ...
20-01-25 05:20 pm
Mysuru Robbery, Bidar Mangalore, Crime; ಬೀದರ್...
20-01-25 01:25 pm
Bidar Bank Robbery, bihar gang, Update: ಬೀದರ್...
19-01-25 07:52 pm