ಬ್ರೇಕಿಂಗ್ ನ್ಯೂಸ್
06-08-20 08:00 am Headline Karnataka News Network ಸಿನಿಮಾ
ಮುಂಬೈ: ಹೀರೋಗಳ ಜೊತೆ ಮಲಗಿ ನಾನು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡಿಲ್ಲ ಎಂದು 90ರ ದಶಕದ ಬಾಲಿವುಡ್‍ನ ನಟಿ ರವೀನಾ ಟಂಡನ್ ಅಚ್ಚರಿ ಹೇಳಿಕೆಯನ್ನು ನೋಡಿದ್ದಾರೆ.
ಇತ್ತೀಚೆಗೆ ನಟಿ ರವೀನಾ ಟಂಡನ್ ಸಂದರ್ಶನವೊಂದರಲ್ಲಿ ತನ್ನ ಸಿನಿಮಾ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದಲ್ಲಿ ಅವಕಾಶ ಪಡೆಯಲು ತಾವು ಅನುಭವಿಸಿದ ಕಷ್ಟಗಳು ಮತ್ತು ಕೆಲವು ಕಹಿ ಘಟನೆಯ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.
ನಾನು ಯಾವುದೇ ಗಾಡ್‍ಫಾದರ್‍ಗಳನ್ನು ಹೊಂದಿರಲಿಲ್ಲ. ಅಲ್ಲದೇ ನನ್ನನ್ನು ಯಾವುದೇ ನಾಯಕ ಕೂಡ ಪ್ರಮೋಟ್ ಮಾಡಲಿಲ್ಲ. ನಾನು ಸಿನಿಮಾದಲ್ಲಿ ಅಭಿನಯಿಸುವ ಅವಕಾಶಕ್ಕಾಗಿ ಹೀರೋಗಳ ಜೊತೆ ಮಲಗಲಿಲ್ಲ ಅಥವಾ ಯಾರೊಂದಿಗೂ ಅಫೇರ್ ಕೂಡ ಇಟ್ಟುಕೊಂಡಿರಲಿಲ್ಲ. ಬಹಳಷ್ಟು ಸಂದರ್ಭಗಳಲ್ಲಿ ನನ್ನನ್ನು ಅಹಂಕಾರ ಇರುವವಳು ಎಂದು ಕರೆದಿದ್ದರು. ಯಾಕೆಂದರೆ ನಾನು ಅವರು ಹೇಳಿದಂತೆ ಕೇಳುತ್ತಿರಲಿಲ್ಲ. ಅವರು ನಗು ಎಂದರೆ ನಗಬೇಕು, ನನ್ನನ್ನು ಕುಳಿತುಕೋ ಎಂದಾಗ ಕುಳಿತುಕೊಳ್ಳಬೇಕಿತ್ತು. ಹೀಗಾಗಿ ಅವರ ತಾಳಕ್ಕೆ ನಾನು ಕುಣಿಯುತ್ತಿರಲಿಲ್ಲ” ಎಂದು ತಾವು ಅನುಭವಿಸಿದ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ.
ತಾನು ನಟಿಯಾಗಿ ಅಭಿನಯಿಸುತ್ತಿದ್ದ ಸಂದರ್ಭದಲ್ಲಿ ನನ್ನ ವಿರುದ್ಧ ಗಾಸಿಪ್ ಕಾಲಂಗಳಲ್ಲಿ ಏನೇನೋ ಲೇಖನಗಳು ಪ್ರಕಟವಾಗುತ್ತಿದ್ದವು. ಆದರೆ ನಾನು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಾನು ನನ್ನದೇ ಆದ ಕೆಲಸವನ್ನು ಮಾಡಿಕೊಂಡು, ನನ್ನ ಸ್ವಂತ ನಿಯಮಗಳಿಗೆ ಅನುಗುಣವಾಗಿ ಬದುಕಲು ಬಯಸುತ್ತಿದ್ದೆ ಎಂದು ರವೀನಾ ಹೇಳಿದ್ದಾರೆ.
ಇಡೀ ಭಾರತ ಚಿತ್ರರಂಗವೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿದ್ದು ‘ಕೆಜಿಎಫ್’ ಸಿನಿಮಾ. ಕೆಜಿಎಫ್-2 ಸಿನಿಮಾ ಕೂಡ ಬಿಡುಗಡೆಯ ಮೊದಲೇ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ. ರವೀನಾ ಟಂಡನ್ ‘ಕೆಜಿಎಫ್-2’ ಸಿನಿಮಾದಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದ ಅಭಿನಯಿಸಿದ್ದಾರೆ.
ಇತ್ತೀಚೆಗೆ ಸಿನಿಮಾದ ಬಗ್ಗೆ ಮಾತನಾಡುತ್ತಾ, “ಕೆಜಿಎಫ್ ಸಿನಿಮಾದಲ್ಲಿ ನಾನು ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಅದು ತುಂಬ ಪವರ್ ಫುಲ್ ಪಾತ್ರವಾಗಿದೆ. ಅಲ್ಲದೇ ಬಹಳ ಕುತೂಹಲ ಹೊಂದಿರುವ ಈ ಸಿನಿಮಾದಲ್ಲಿ ಅವಳೇ ಹೀರೋ ಆಗಿರುತ್ತಾಳೆ. ಹಾಗೆಯೇ ವಿಲನ್ ಕೂಡ ಅವಳೇ ಆಗಿರುತ್ತಾಳೆ. ಕೆಜಿಎಫ್ ಸಿನಿಮಾ ಕಥೆ ತುಂಬಾ ಆಸಕ್ತಿದಾಯಕವಾಗಿದೆ” ಎಂದು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದರು.
05-02-25 12:29 pm
Bangalore Correspondent
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
Two-wheeler rider fined, Bangalore Traffic: ಎ...
04-02-25 03:09 pm
Cow theft, Mankal Vaidya: ಇನ್ಮುಂದೆ ಗೋಹತ್ಯೆ ನಡ...
04-02-25 12:59 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
04-02-25 07:47 pm
Mangalore Correspondent
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
Kotekar Bank Robbery, Shashi Tevar, update: ಬ...
02-02-25 05:02 pm
Air India Express, Mangalore Delhi flight: ಮಂ...
01-02-25 07:47 pm
03-02-25 05:46 pm
Mangalore Correspondent
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am