ಬಾಲಿವುಡ್​ನ ಜನಪ್ರಿಯ ಜೋಡಿ ಶಾರೂಖ್​, ದೀಪಿಕಾ ಮತ್ತೆ ಜತೆಯಾಗಿ ನಟಿಸ್ತಾರಂತೆ...ಯಾವ ಚಿತ್ರ?

07-08-20 01:47 pm       Headline Karnataka News Network   ಸಿನಿಮಾ

ಐದು ವರ್ಷಗಳ ನಂತರ ಅವರಿಬ್ಬರೂ ಮತ್ತೊಮ್ಮೆ ನಾಯಕ-ನಾಯಕಿಯಾಗಿ ನಟಿಸುತ್ತಿರುವುದಾಗಿ ಸುದ್ದಿಯಾಗಿದೆ. ಚಿತ್ರ ಯಾವುದು ಗೊತ್ತಾ?

ಬಾಲಿವುಡ್​ನ ಜನಪ್ರಿಯ ಜೋಡಿಗಳ ಪೈಕಿ ಶಾರೂಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅವರ ಜೋಡಿ ಸಹ ಒಂದು. ಅವರಿಬ್ಬರೂ ಜತೆಯಾಗಿ ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್​ಪ್ರೆಸ್​’ ಮತ್ತು ‘ಹ್ಯಾಪಿ ನ್ಯೂ ಇಯರ್’ ಚಿತ್ರಗಳಲ್ಲಿ ನಟಿಸಿದ್ದರು.

ಈಗ ಐದು ವರ್ಷಗಳ ನಂತರ ಅವರಿಬ್ಬರೂ ಮತ್ತೊಮ್ಮೆ ನಾಯಕ-ನಾಯಕಿಯಾಗಿ ನಟಿಸುತ್ತಿರುವುದಾಗಿ ಸುದ್ದಿಯಾಗಿದೆ. ಚಿತ್ರ ಯಾವುದು ಗೊತ್ತಾ? ‘ಪಠಾಣ್​’ .

ಯಶ್​ರಾಜ್​ ಫಿಲಂಸ್​ ಸಂಸ್ಥೆಯು ಇದೀಗ 50 ವರ್ಷಗಳನ್ನು ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಒಂದಿಷ್ಟು ಚಿತ್ರಗಳನ್ನು ಘೋಷಿಸುತ್ತಿದೆ. ಈ ಪೈಕಿ ಸಲ್ಮಾನ್​ ಖಾನ್​ ಅಭಿನಯದ ‘ಟೈಗರ್​-3’ ಚಿತ್ರ ಸಹ ಒಂದು. ಇದಲ್ಲದೆ, ಶಾರೂಖ್​ ಖಾನ್​ ಅಭಿನಯದಲ್ಲಿ ಒಂದು ಹೈವೋಲ್ಟೇಜ್​ ಆಕ್ಷನ್​ ಚಿತ್ರ ನಿರ್ಮಿಸುತ್ತಿದ್ದು, ಅದಕ್ಕೆ ‘ಪಠಾಣ್​’ ಎಂಬ ಹೆಸರನ್ನು ಇಡಲಾಗಿದೆ.

ಈ ಹಿಂದೆ ಹೃತಿಕ್​ ರೋಶನ್​ ಮತ್ತು ಟೈಗರ್​ ಶ್ರಾಫ್​ ಅಭಿನಯದ ‘ವಾರ್​’ ಚಿತ್ರವನ್ನು ನಿರ್ದೇಶಿಸಿದ್ದ ಸಿದ್ಧಾರ್ಥ್​ ಆನಂದ್​ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಒಂದು ಪಕ್ಕಾ ಆಕ್ಷನ್​ ಚಿತ್ರವನ್ನು ಮಾಡದೆ, ಶಾರೂಖ್​ ಖಾನ್​ ಬಹಳ ಕಾಲವೇ ಆಗಿದೆ. ಒಂದೊಳ್ಳೆಯ ಕಥೆಗಾಗಿ ಅವರು ಹುಡುಕಾಟ ನಡೆಸುತ್ತಿದ್ದರಂತೆ. ಇನ್ನೊಂದು ಕಡೆ, ಸಿದ್ಧಾರ್ಥ್​ ಆನಂದ್​ ಸಹ ಒಂದು ಹೈವೋಲ್ಟೇಜ್​ ಆಕ್ಷನ್​ ಕಥೆ ಮಾಡಿಟ್ಟುಕೊಂಡು ಶಾರೂಖ್​ ಖಾನ್​ಗೆ ಕೇಳಿದ್ದಾರೆ. ಕಥೆ ಕೇಳಿ ಇಷ್ಟವಾದ ಶಾರೂಖ್​ ಗ್ರೀನ್​ ಸಿಗ್ನಲ್​ ನೀಡಿದ್ದಾರೆ ಎನ್ನಲಾಗಿದೆ.