ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ

26-01-21 04:32 pm       Source: FILMIBEAT Bharath Kumar K   ಸಿನಿಮಾ

ಭಾರತೀಯ ಸಂಗೀತ ಕ್ಷೇತ್ರಕ್ಕೆ ಕೆಎಸ್ ಚಿತ್ರಾ ಅವರು ನೀಡಿರುವ ಕೊಡುಗೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ಘೋಷಿಸಿ ಗೌರವಿಸಿದೆ.

ಭಾರತೀಯ ಸಂಗೀತ ಕ್ಷೇತ್ರಕ್ಕೆ ಕೆಎಸ್ ಚಿತ್ರಾ ಅವರು ನೀಡಿರುವ ಕೊಡುಗೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ಘೋಷಿಸಿ ಗೌರವಿಸಿದೆ. ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟಿಸಿದರೆ, ಕೆಎಸ್ ಚಿತ್ರಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಿದೆ. ವಿಶೇಷ ಅಂದ್ರೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಮತ್ತು ಕೆಎಸ್ ಚಿತ್ರಾ ಅವರು ಅನೇಕ ಹಾಡುಗಳಿಗೆ ಒಟ್ಟಿಗೆ ದನಿಗೂಡಿಸಿದ್ದಾರೆ. ಈ ಇಬ್ಬರಿಗೂ 72ನೇ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ಭಾರತದ ಅತ್ಯುನ್ನತ ಗೌರವ ನೀಡಲಾಗಿದೆ.

ಕೆಎಸ್ ಚಿತ್ರ ಅವರು ಮೂಲತಃ ಸಂಗೀತ ಕುಟುಂಬದಿಂದ ಬಂದವರು. ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. 1979ರಲ್ಲಿ ಹಿನ್ನೆಲೆ ಗಾಯಕಿಯಾಗಿ ವೃತ್ತಿ ಆರಂಭಿಸಿದ ಚಿತ್ರ ಸುಮಾರು ನಾಲ್ಕು ದಶಕಗಳವರೆಗೂ ಸಂಗೀತ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.

ಕೆಎಸ್ ಚಿತ್ರ ಅವರು ಇದುವರೆಗೂ ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ, ಬೆಂಗಾಳಿ, ತುಳು ಸೇರಿದಂತೆ ಇತರೆ ಪ್ರಮುಖ ಭಾಷೆಗಳಲ್ಲಿ ಸೇರಿ ಸುಮಾರು 25000 ಹಾಡುಗಳನ್ನು ಹಾಡಿದ್ದಾರೆ. ಮಲಯ್, ಲ್ಯಾಟಿನ್, ಅರೇಬಿಕ್, ಸಿಂಹಳೀಯ, ಇಂಗ್ಲಿಷ್ ಮತ್ತು ಫ್ರೆಂಚ್ ಮುಂತಾದ ವಿದೇಶಿ ಭಾಷೆಗಳಲ್ಲೂ ಚಿತ್ರ ಹಾಡಿದ್ದಾರೆ. ತಮ್ಮ ಅದ್ಭುತ ಗಾಯನಕ್ಕಾಗಿ ಇದುವರೆಗೂ ಏಂಟು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದು ಯಾವ ಮಹಿಳಾ ಗಾಯಕಿಯೂ ಮಾಡಿರದ ಸಾಧನೆ.

ಕೆಎಸ್ ಚಿತ್ರ ಅವರನ್ನು ಉತ್ತರ ಭಾರತದ ಪಿಯಾ ಬಸಂತಿ ಎಂದು, ಆಂಧ್ರಪ್ರದೇಶದ ಮತ್ತು ತೆಲಂಗಾಣದಲ್ಲಿ ಸಂಗೀತ ಸರಸ್ವತಿ ಎಂದು ಹಾಗೂ ತಮಿಳಿನಲ್ಲಿ ಚಿನ್ನಾ ಕುಯಿಲ್ ಎಂದು ಕರೆಯುತ್ತಾರೆ.

This News Article is a Copy of FILMIBEAT