ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್

26-01-21 04:44 pm       Source: FILMIBEAT Shruthi Gk   ಸಿನಿಮಾ

ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಈ ಬಾರಿಯ ಗಣರಾಜ್ಯದಿನವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ.

ಇಂದು ದೇಶದಾದ್ಯಂತ 72ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಈ ಬಾರಿಯ ಗಣರಾಜ್ಯದಿನವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಧನಂಜಯ್ ಸದ್ಯ ರತ್ನನ್ ಪ್ರಪಂಚ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರತ್ನನ್ ಪ್ರಪಂಚ ಸಿನಿಮಾದ ಚಿತ್ರೀಕರಣ ಹಳ್ಳಿಯಲ್ಲಿ ನಡೆಯುತ್ತಿದೆ. ಚಿತ್ರೀಕರಣದ ನಡುವೆಯೂ ಧನಂಜಯ್ ಹಳ್ಳಿಯ ಶಾಲೆಯೊಂದರ ಗಣರಾಜ್ಯೋತ್ಸವ ಸಂಭ್ರಮಕ್ಕೆ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದಾರೆ.

ಈ ಸಮಯದಲ್ಲಿ ಮಕ್ಕಳ ಮುಂದೆ ಭಾಷಣ ಮಾಡಿದ ನಟ ಧನಂಜಯ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂವಿಧಾನ ಎಂದರೇನು? ಅಂತ ಸರಳವಾಗಿ ವಿವರಿಸಿದ ಧನಂಜಯ್ ಮಾತಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.

ಗಣರಾಜ್ಯ ಎಂದರೇನು? ಧನಂಜಯ್ ಹೇಳ್ತಾರೆ ಕೇಳಿ

'ನಿಮ್ಮ ಜೊತೆ ಗಣರಾಜ್ಯ ದಿವಸ ಆಚರಿಸಿದ್ದು ತುಂಬಾ ಸಂತೋಷವಾಗುತ್ತಿದೆ. ಗಣರಾಜ್ಯ ಎಂದರೆ ತುಂಬಾ ಸರಳವಾಗಿ ಹೇಳಬೇಕು ಎಂದರೆ ಶಾಲೆ ನಡೆಸಲು ಒಂದು ರೀತಿ ನೀತಿ ಇರತ್ತೆ, ಎಲ್ಲರೂ ಒಂದೇ, ಎಲ್ಲರಿಗೂ ಸಮಾನ ಅವಕಾಶವಿದೆ. ದೇಶ ನಡೆಸಲು ಒಂದು ರೀತಿ ನೀತಿ ಇರಬೇಕಲ್ವಾ.' ಎಂದಿದ್ದಾರೆ.



ಅಂಬೇಡ್ಕರ್ ಮತ್ತು ಹಿರಿಯರು ಸೇರಿ ರಚಿಸಿದ ಗ್ರಂಥ

'ಅಂಬೇಡ್ಕರ್ ಅಂತ ಹಿರಿಯರು ಎಲ್ಲಾ ಸೇರಿ ದೇಶ ನಡೆಸಲು ಅದ್ಭುತವಾದ ಗ್ರಂಥ ಸಂವಿಧಾನವನ್ನು ರಚಿಸಿದ್ದಾರೆ. ಇದೇ ದೇಶದಲ್ಲಿ ಎಲ್ಲವನ್ನೂ ನೋಡಿ ಬೆಳೆದವರು ಅವರು, ಹಾಗಾಗಿ ಈ ದೇಶ ಅದ್ಭುತವಾಗಿ ನಡೆಸಬೇಕು ಎಂದು ರಚಿಸಿದ್ದಾರೆ. ನಾವೆಲ್ಲರೂ ಅದಕ್ಕೆ ಬದ್ಧರಾಗಿರಬೇಕು.'

ಪ್ರಜಾಪ್ರಭುತ್ವ ಎಂದರೇನು?

'ಪ್ರಜಾಪ್ರಭುತ್ವ ಎಂದರೆ ಎಲ್ಲರಿಗೂ ಗೊತ್ತಿದೆ. ಇನ್ನು ಸ್ವಲ್ಪ ವರ್ಷದಲ್ಲೇ ನೀವು ಓಟು ಮಾಡುತ್ತೀರಿ. ಆಗ ನಿಮಗೆ ಗೊತ್ತಿರಬೇಕು. ಪ್ರಜಾಪ್ರಭುತ್ವ ಎಂದರೇ ಏನು ಅಂತ. ಪ್ರಜೆ ಎಂದರೆ ಪ್ರಜೆಗಳು ಎಂದರೆ ನಾವು. ಪ್ರಭುತ್ವ ಎಂದರೆ ಆಳ್ವಿಕೆ. ನಾವು ಆಳಬೇಕು ಅಂದರೆ ಅಧಿಕಾರವನ್ನು ಕೊಡುವ ಮೂಲಕ. ನಾವು ಓಟು ಹಾಕುವ ಮೂಲಕ ಅಧಿಕಾರ ಕೊಡುತ್ತೀವಿ. ಆದರೀಗ ಅಧಿಕಾರ ತಗೊತಿದ್ದಾರೆ.

This News Article is a Copy of FILMIBEAT