ರಜನಿಕಾಂತ್ 'ಎಂದಿರನ್' ನಿರ್ದೇಶಕರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ: ಶಂಕರ್ ಹೇಳಿದ್ದೇನು?

02-02-21 02:24 pm       Source: FILMIBEAT Shruthi Gk   ಸಿನಿಮಾ

ಕಥೆ ಕದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ನಿರ್ದೇಶಕ ಶಂಕರ್ ವಿರುದ್ಧ ಚೆನ್ನೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ಕಥೆ ಕದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಖ್ಯಾತ ನಿರ್ದೇಶಕ ಶಂಕರ್ ವಿರುದ್ಧ ಚೆನ್ನೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಶಂಕರ್ ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಐಶ್ವರ್ಯ ರೈ ನಟನೆಯ ಎಂದಿರನ್ ಸಿನಿಮಾದ ಕಥೆ ಕಳ್ಳತನದ ಪ್ರಕರಣದಲ್ಲಿ ಶಂಕರ್ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯಕ್ಕೆ ಹಾಜರಾಗದೆ ಇರುವ ಕಾರಣ ಶಂಕರ್ ವಿರುದ್ಧ ವಾರೆಂಟ್ ಜಾರಿಯಾಗಿದೆ ಎನ್ನುವ ಸುದ್ದಿ ವೈರಲ್ ಆಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಶಂಕರ್, 'ಈ ಸುದ್ದಿ ನೋಡಿ ಆಘಾತವಾಗಿದೆ. ನಮ್ಮ ವಕೀಲರು ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಜಾಮೀನು ರಹಿತ ವಾರೆಂಟ್ ಬಂದಿಲ್ಲ. ಇದು ವದಂತಿ ಅಷ್ಟೆ. ಆನ್ ಲೈನ್ ನ್ಯಾಯಾಲಯದ ವರದಿಯ ದೋಷದಿಂದ ಹಾಗಾಗಿರಬಹುದು. ಈಗ ಸರಿಪಡಿಸಲಾಗಿದೆ. ಯಾವುದೇ ಪರಿಶೀಲನೆ ಮಾಡದೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದು ಬೇಸರ ತಂದಿದೆ. ಇದು ನಮ್ಮ ಕುಟುಂಬ ಮತ್ತು ಹಿತೈಶಿಗಳಿಗೂ ನೋವುಂಟು ಮಾಡಿದೆ' ಎಂದು ಹೇಳಿದ್ದಾರೆ. ಎಂದಿರನ್ ಸಿನಿಮಾ 2010ರಲ್ಲಿ ತೆರೆಗೆ ಬಂದಿದೆ.

ಈ ಸಿನಿಮಾ ರಿಲೀಸ್ ಆದ ಸಮಯದಲ್ಲಿ ಶಾರ್ಟ್ ಸ್ಟೋರಿ ಬರಹಗಾರ ತಮಿಳುನಾಡನ್ ಮದ್ರಾಸ್ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದರು. ಶಂಕರ್, ತನ್ನ ಕಥೆ 'ಜಿಗುಬಾ' ಎನ್ನುವ ಕಥೆಯನ್ನು ಕದ್ದಿರುವುದಾಗಿ ಆರೋಪಿಸಿದ್ದರು. ಈ ಕಥೆ ತಮಿಳು ನಿಯತಕಾಲಿಕೆ ಪ್ರಕರಟವಾಗಿದ್ದಲ್ಲದೆ, ಕಾದಂಬರಿಯಾಗಿಯೂ ಪ್ರಕಟಿಸಲಾಗಿದೆ ಎಂದು ತಮಿಳುನಾಡನ್ ಉಲ್ಲೇಖಿಸಿದ್ದಾರೆ

ತನ್ನ ಕಥೆಯನ್ನು ಕದ್ದು ಸಿನಿಮಾ ಮಾಡಿದ್ದೆ. ಸಿನಿಮಾ ಕೋಟಿ ಕೋಟಿ ಗಳಿಸಿದೆ. ಆದರೆ ಇದು ನನ್ನ ಆಲೋಚನೆ ಎಂದು ದೂರಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ವಿಚಾರಣೆ ಪ್ರಾರಂಭವಾದರೂ, ಶಂಕರ್ ಅಥವಾ ಅವರ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ ಎನ್ನುವ ಸುದ್ದಿ ಹರಿದಾಡಿತ್ತು.

This News Article is a Copy of FILMIBEAT