ಭಾರಿ ಮೊತ್ತಕ್ಕೆ ರಾಬರ್ಟ್ ತೆಲುಗು ವಿತರಣೆ ಹಕ್ಕು ಪಡೆದ ನಿರ್ಮಾಪಕ

05-02-21 01:40 pm       Source: FILMIBEAT Bharath Kumar K   ಸಿನಿಮಾ

ತೆಲುಗಿನ ಹಿರಿಯ ನಿರ್ದೇಶಕ-ನಿರ್ಮಾಪಕ ರಾಬರ್ಟ್ ಚಿತ್ರದ ತೆಲುಗು ವರ್ಷನ್ ಸಿನಿಮಾವನ್ನು ವಿತರಣೆ ಮಾಡ್ತಿದ್ದು, ಭಾರಿ ಬೆಲೆ ನೀಡಿ ಹಕ್ಕು ಖರೀದಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ 'ರಾಬರ್ಟ್' ಚಿತ್ರದ ತೆಲುಗು ಬಿಡುಗಡೆಯ ಹಾದಿ ಸುಗಮವಾಗಿದೆ. ಏಕಕಾಲದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ರಾಬರ್ಟ್ ರಿಲೀಸ್ ಮಾಡಲು ಕಷ್ಟ ಎಂದು ಹೇಳಿದ್ದ ವಿತರಕರು ಈಗ ದಾಸನ ಚಿತ್ರಕ್ಕೆ ರೆಡ್‌ ಕಾರ್ಪೆಟ್ ಹಾಕಿ ಸ್ವಾಗತ ಮಾಡ್ತಿದ್ದಾರೆ. ನಿಗದಿಯಾಗಿರುವಂತೆ ಮಾರ್ಚ್ 11 ರಂದೇ ಕನ್ನಡ ಮತ್ತು ತೆಲುಗಿನಲ್ಲಿ ರಾಬರ್ಟ್ ತೆರೆಕಾಣುತ್ತಿದೆ. ನೆರೆರಾಜ್ಯಗಳಲ್ಲೂ ರಾಬರ್ಟ್ ಕ್ರೇಜ್ ಜೋರಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಡಿ ಬಾಸ್ ಸಿನಿಮಾ ಬಿಡುಗಡೆಯಾಗುತ್ತಿದೆ. ತೆಲುಗಿನ ಹಿರಿಯ ನಿರ್ದೇಶಕ-ನಿರ್ಮಾಪಕ ರಾಬರ್ಟ್ ಚಿತ್ರದ ತೆಲುಗು ವರ್ಷನ್ ಸಿನಿಮಾವನ್ನು ವಿತರಣೆ ಮಾಡ್ತಿದ್ದು, ಭಾರಿ ಬೆಲೆ ನೀಡಿ ಹಕ್ಕು ಖರೀದಿಸಿದ್ದಾರೆ ಎನ್ನಲಾಗಿದೆ.

ಚಂಚಲವಾಡ ಶ್ರೀನಿವಾಸ್ ರಾವ್ ವಿತರಣೆ

ರಾಬರ್ಟ್ ಚಿತ್ರವನ್ನು ತೆಲುಗಿನ ಹಿರಿಯ ನಿರ್ದೇಶಕ ಚಂಚಲವಾಡ ಶ್ರೀನಿವಾಸ್ ರಾವ್ ವಿತರಣೆ ಮಾಡುತ್ತಿದ್ದಾರೆ. ಶ್ರೀ ವೆಂಕಟೇಶ್ವರ‌ ಮೂವೀಸ್ ಮೂಲಕ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ದರ್ಶನ್ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.



ದುಬಾರಿ ಬೆಲೆಗೆ ರಾಬರ್ಟ್ ಸೇಲ್?

ರಾಬರ್ಟ್ ಚಿತ್ರದ ವಿತರಣೆ ಹಕ್ಕು ದೊಡ್ಡ ಬೆಲೆ ಮಾರಾಟ ಆಗಿದೆ ಎಂಬ ಸುದ್ದಿ ವರದಿಯಾಗಿದೆ. ಆದರೆ, ನಿಖರವಾಗಿ ಎಷ್ಟು ಹಣ ಎಂದು ಬಹಿರಂಗವಾಗಿಲ್ಲ. ದರ್ಶನ್ ಅವರ ಚಿತ್ರಕ್ಕೆ ತೆಲುಗಿನಲ್ಲಿ ಹೆಚ್ಚು ಬೇಡಿಕೆಯಿದ್ದು, ದಾಖಲೆಯ ಹಣ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.



400ಕ್ಕೂ ಹೆಚ್ಚು ಥಿಯೇಟರ್‌?

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ರಾಬರ್ಟ್ ಚಿತ್ರಕ್ಕೆ 400ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಕಾಯ್ದಿರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಡಿ ಬಾಸ್ ಚಿತ್ರಗಳ ಪೈಕಿ ರಾಬರ್ಟ್ ಚಿತ್ರಕ್ಕೆ ಆಂಧ್ರ ಮತ್ತು ತೆಲಂಗಾಣದಲ್ಲಿ ದೊಡ್ಡ ಓಪನಿಂಗ್ ಸಿಗುತ್ತಿದೆ.



ಉಮಾಪತಿಗೆ ಸನ್ಮಾನ ಮಾಡಿದ್ದ ತೆಲುಗು ನಿರ್ಮಾಪಕರು

ರಾಬರ್ಟ್ ಚಿತ್ರಕ್ಕೆ ತೆಲುಗು ವಿತರಕರಿಂದ ಅಡ್ಡಿ ಎಂಬ ವಿವಾದದ ಬಳಿಕ, ಕನ್ನಡ ನಿರ್ಮಾಪಕ ಉಮಾಪತಿ ಅವರನ್ನು ಆಂಧ್ರಕ್ಕೆ ಕರೆಸಿಕೊಂಡಿದ್ದ ತೆಲುಗು ನಿರ್ಮಾಪಕರು ಸನ್ಮಾನ ಮಾಡಿದ್ದರು. ರಾಬರ್ಟ್ ಚಿತ್ರಕ್ಕೆ ಯಾವ ಅಡತಡೆಯೂ ಇರಲ್ಲ. ಸುಗಮವಾಗಿ ಬಿಡುಗಡೆಯಾಗಲಿದೆ ಎಂದು ಆಶ್ವಾಸನೆ ನೀಡಿದ್ದರು.

This News Article is a Copy of FILMIBEAT