ಬ್ರೇಕಿಂಗ್ ನ್ಯೂಸ್
08-02-21 02:58 pm Source: FILMIBEAT Bharath Kumar K ಸಿನಿಮಾ
ಕೊನೆಗೂ ಕನ್ನಡ ಬಿಗ್ ಬಾಸ್ ಹೊಸ ಆವೃತ್ತಿ ಅರಂಭಕ್ಕೆ ಮುಹೂರ್ತ ನಿಗದಿಯಾಗಿದೆ. ಅಧಿಕೃತವಾಗಿ ದಿನಾಂಕ ಪ್ರಕಟವಾಗಿಲ್ಲ. ಅದರೆ ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಯ ಆರಂಭದ ದಿನಾಂಕದ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ಫಿಲ್ಮಿಬೀಟ್‌ಗೆ ಲಭ್ಯವಾಗಿದೆ. ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿಯ ಸಿದ್ದತೆ ಕಾರ್ಯಗಳು ಬಹುತೇಕ ಅಂತ್ಯಕ್ಕೆ ಬಂದಿದ್ದು, ಸ್ಪರ್ಧಿಗಳ ಪಟ್ಟಿಯೂ ಅಂತಿಮವಾಗಿದೆ. ಹೊಸ ಸೀಸನ್‌ಗೆ ಆಯ್ಕೆಯಾದ ಸ್ಪರ್ಧಿಗಳನ್ನು ಕೆಲವು ದಿನ ಕ್ವಾರಂಟೈನ್ ಮಾಡಲಾಗುವುದು, ಬಳಿಕ ಬಿಗ್ ಬಾಸ್ ಮನೆಗೆ ಕಳುಹಿಸಿಕೊಡಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ.
ಫೆಬ್ರವರಿ 28ಕ್ಕೆ ಬಿಗ್ ಬಾಸ್ ಆರಂಭ?
ಫಿಲ್ಮಿಬೀಟ್‌ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿ ಫೆಬ್ರವರಿ 28 ರಂದು ಆರಂಭವಾಗಲಿದೆ. ಬಿಗ್‌ಬಾಸ್ ಹೊಸ ಆವೃತ್ತಿಗೆ ಸಂಬಂಧಿಸಿದಂತೆ ಎಲ್ಲ ತಯಾರಿ ನಡೆದಿದ್ದು, ಈ ತಿಂಗಳ ಕೊನೆಯ ಭಾನುವಾರದಿಂದ ದೊಡ್ಮನೆ ಆಟ ಆರಂಭವಾಗಲಿದೆಯಂತೆ.

ಸ್ಪರ್ಧಿಗಳಿಗೆ ಕ್ವಾರಂಟೈನ್ ಕಡ್ಡಾಯ?
ಪ್ರಸ್ತುತ ಕೊರೊನಾ ವೈರಸ್ ಭೀತಿ ಇರುವ ಕಾರಣ, ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳನ್ನು ಕಳುಹಿಸುವ ಮುನ್ನ ಕ್ವಾರಂಟೈನ್ ಮಾಡಲಾಗುತ್ತದೆ. ಬಿಗ್‌ಬಾಸ್‌ಗೆ ಹೋಗುವ ಎಲ್ಲ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದ್ದು, ನಂತರ ಕೊವಿಡ್ ಪರೀಕ್ಷೆ ಮಾಡಿ ಬಿಗ್ ಮನೆಗೆ ಎಂಟ್ರಿ ನೀಡಲಾಗುತ್ತದೆ.
ದುಬೈನಿಂದ ಮರಳಿದ ಸುದೀಪ್
ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ದುಬೈಗೆ ತೆರಳಿದ್ದ ಸುದೀಪ್ ಬೆಂಗಳೂರಿಗೆ ಮರಳಿದ್ದಾರೆ. ಬುರ್ಜ್ ಖಲೀಫಾ ಕಟ್ಟಡದ ಮೇಲೆ ವಿಕ್ರಾಂತ್ ರೋಣ ಟೀಸರ್ ಹಾಗೂ ಸುದೀಪ್ ಅವರ 25 ವರ್ಷದ ಜರ್ನಿ ವಿಡಿಯೋ ಪ್ರದರ್ಶನ ಮಾಡಲಾಗಿತ್ತು. ಈ ಸಂಭ್ರಮ ಮುಗಿಸಿ ಬಂದ ಸುದೀಪ್ ಈಗ ಬಿಗ್ ಬಾಸ್ ಕಡೆ ಗಮನ ಕೊಡಲಿದ್ದಾರೆ. ಈಗಾಗಲೇ ಪ್ರೋಮೋ ಶೂಟ್ ಮಾಡಿದ್ದು, ಟಿವಿಯಲ್ಲಿ ಪ್ರಸಾರ ಸಹ ಆಗ್ತಿದೆ.

ಈ ಸಲ ಯಾರೆಲ್ಲ ಹೋಗ್ತಾರೆ?
ಪ್ರತಿವರ್ಷದಂತೆ ಈ ವರ್ಷವೂ ಬಿಗ್ ಬಾಸ್ ಆರಂಭಕ್ಕೂ ಮುನ್ನವೇ ಅನೇಕರ ಹೆಸರು ಚರ್ಚೆಯಲ್ಲಿದೆ. ಯಶ್ ಅವರ ತಾಯಿ ಪುಷ್ಪ, ಹಿರಿಯ ನಟಿ ವಿನಯಪ್ರಸಾದ್, ಬ್ರಹ್ಮಗಂಟು ಗೀತಾ ಅವರು ಹೆಸರು ಹೆಚ್ಚು ಕುತೂಹಲ ಮೂಡಿಸಿದವು. ಆದರೆ, ಇವರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ.
This News Article is a Copy of FILMIBEAT
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm