ಬ್ರೇಕಿಂಗ್ ನ್ಯೂಸ್
22-04-26 10:40 pm HK News Staffer ಸಿನಿಮಾ
ಮಂಗಳೂರು, ಎಪ್ರಿಲ್ 22: ಕೊಂಕಣಿ ಸಿನಿಮಾ ಕ್ಷೇತ್ರದಲ್ಲಿ ‘ಆಮೇನ್’ ಹೆಸರಿನ ಕಾಮೆಡಿ ಚಿತ್ರದ ಟೈಟಲ್ ಭಾರೀ ವಿವಾದಕ್ಕೆ ಕಾರಣವಾಗಿದ್ದು ಧಾರ್ಮಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಆಮೇನ್ ಎನ್ನುವುದು ಬೈಬಲ್ ಹೆಸರಾಗಿದ್ದು ಚಿತ್ರದ ನಿರ್ದೇಶಕರು ಧಾರ್ಮಿಕ ಭಾವನೆಗಳೊಂದಿಗೆ ಆಟವಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಚಿತ್ರದ ನಿರ್ದೇಶಕ ಮೆಲ್ವಿನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಾಮಿಡಿ ಶೈಲಿಯ ಸಿನಿಮಾಗೆ ‘ಆಮೇನ್’ ಎಂಬ ಪವಿತ್ರ ಪದವನ್ನು ಬಳಸಿರುವುದಕ್ಕೆ ಕ್ರೈಸ್ತರ ಕೆಲವು ವಲಯಗಳಲ್ಲಿ ವಿರೋಧ ವ್ಯಕ್ತವಾಗಿದ್ದು, “ಇದು ನಂಬಿಕೆಗಳ ಅವಮಾನ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಲಾಗಿದೆ. ದಿನೇ ದಿನೇ ಉಗ್ರವಾಗುತ್ತಿದ್ದ ಈ ಅಸಮಾಧಾನ ಚಿತ್ರತಂಡದ ಮೇಲೆ ಭಾರೀ ಒತ್ತಡ ತಂದಿದೆ. ವಿವಾದ ತಾರಕ್ಕೇರಿದ ಹಿನ್ನೆಲೆಯಲ್ಲಿ ಚಿತ್ರತಂಡ ಹಿಂಜರಿದು, ‘ಆಮೇನ್’ ಟೈಟಲ್ ಅನ್ನು ಬದಲಾಯಿಸಲು ಮುಂದಾಗಿದೆ. ಆದರೆ ಸಂಪೂರ್ಣವಾಗಿ ಕೈಬಿಡದೇ, ಅದೇ ಅರ್ಥ ಬರುವಂತೆ ಕೊಂಕಣಿ ಭಾಷೆಯಲ್ಲಿ ‘ತಾಶೆಂತ್ ಜಾಂವ್' ಎಂದು ಹೊಸ ಹೆಸರನ್ನು ಘೋಷಿಸಿದೆ. ಇದರಿಂದ ವಿವಾದ ತಣ್ಣಗಾಗುವ ಬದಲು ಹೊಸ ಸ್ವರೂಪ ಪಡೆದುಕೊಂಡಿದೆ.



ಆಸಕ್ತಿಕರ ಸಂಗತಿ ಏನೆಂದರೆ, ಚಿತ್ರಕ್ಕೆ ಮೊದಲಿನಿಂದಲೂ ‘ಆರ್‌ಎಂ 03’ ಎಂಬ ಟೈಟಲ್ ಇಡಲಾಗಿತ್ತು. ಬಳಿಕ ‘ಆಮೇನ್’ ಎಂದು ಬದಲಾಯಿಸಿದ್ದು ಇದೀಗ ದೊಡ್ಡ ಗಲಾಟೆಗೆ ಕಾರಣವಾಗಿದೆ.
ಇದಕ್ಕೆ ಪ್ರತಿಯಾಗಿ ಚಿತ್ರತಂಡ, “ಟೈಟಲ್ ಇಡುವ ಮುನ್ನ ಧಾರ್ಮಿಕ ಗುರುಗಳನ್ನು ಭೇಟಿ ಮಾಡಿ ವಿವರಣೆ ನೀಡಿದ್ದೇವೆ. ಯಾವುದೇ ತೊಂದರೆ ಇಲ್ಲ ಎಂದು ಅವರು ಹೇಳಿದ್ದಾರೆ” ಎಂದು ಸ್ಪಷ್ಟನೆ ನೀಡಿದೆ. ‘ಆಮೇನ್’ ಸಿನಿಮಾ ವಿವಾದ ಈಗ ಕೇವಲ ಸೋಷಿಯಲ್ ಮೀಡಿಯಾಕ್ಕೆ ಸೀಮಿತವಾಗದೆ ಕಾನೂನು ಹಂತಕ್ಕೂ ತಲುಪಿದೆ. ಕ್ರೈಸ್ತ ಸಂಘಟನೆಯ ಪ್ರತಿನಿಧಿ ಸ್ಟೇನಿ ಪಿಂಟೋ ಎಂಬವರು, ಚಿತ್ರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
“ಆಮೇನ್ ಎಂಬುದು ಬೈಬಲ್‌ನಲ್ಲಿರುವ ಪರಿಶುದ್ಧ ಪದ. ‘ಹಾಗೆ ಆಗಲಿ’ ಎಂಬ ಆಧ್ಯಾತ್ಮಿಕ ಅರ್ಥ ಹೊಂದಿರುವ ಈ ಪದವನ್ನು ಸಿನಿಮಾ ಟೈಟಲ್‌ಗೆ ಬಳಸುವುದು ಸರಿಯಲ್ಲ” ಎಂದು ಸ್ಟೇನಿ ಪಿಂಟೋ ಎಚ್ಚರಿಕೆ ನೀಡಿದ್ದಾರೆ. “ಚಿತ್ರದ ನಿರ್ಮಾಪಕ ಮೆಲ್ವಿನ್ ನನ್ನನ್ನು ಸಂಪರ್ಕಿಸಿ ಟೈಟಲ್ ಬದಲಾಯಿಸುತ್ತೇವೆ ಎಂದಿದ್ದರು. ಆದರೆ ತನ್ನ ಮಾತು ಉಳಿಸಿಕೊಳ್ಳಲಿಲ್ಲ. ಅದಕ್ಕಾಗಿ ಹೈಕೋರ್ಟ್‌ನಲ್ಲಿ ಸ್ಟೇ ತರಬೇಕಾಯಿತು” ಎಂದು ಹೇಳಿದ್ದಾರೆ.
ಹೈಕೋರ್ಟ್‌ನಲ್ಲಿ ಸ್ಟೇ ಅರ್ಜಿ ಸಲ್ಲಿಸಿದ ಬಳಿಕವೇ ಚಿತ್ರತಂಡ ಹಠಾತ್ತಾಗಿ ಹೆಸರನ್ನು ಕೊಂಕಣಿ ಭಾಷೆಯಲ್ಲಿ ‘ತಾಶೆಂತ್ ಜಾಂವ್ನ್’ ಎಂದು ಬದಲಾಯಿಸಿದೆ. ಆದರೆ ಇದು ವಿವಾದವನ್ನು ಶಮನಗೊಳಿಸುವ ಬದಲು ಇನ್ನಷ್ಟು ಕೆರಳಿಸಿದೆ. “ಬೈಬಲ್‌ನ ಪದಗಳನ್ನು ಸಿನಿಮಾಗಳಿಗೆ ಬಳಸುವುದಷ್ಟೇ ಅಲ್ಲ, ಅದನ್ನೇ ವ್ಯಂಗ್ಯವಾಗಿ ಬಳಸುವುದು ಎಷ್ಟು ನ್ಯಾಯ?” ಎಂದು ಪ್ರಶ್ನಿಸಿದ ಸ್ಟೇನಿ ಪಿಂಟೋ, “ಇಂತಹ ಟೈಟಲ್ ವಿವಾದದಿಂದ ಬರುವ ಹಣ ಶಾಪದ ಹಣವಾಗುತ್ತದೆ” ಎಂದು ಕಟುವಾಗಿ ಟೀಕಿಸಿದ್ದಾರೆ. ಇವರ ಪ್ರಕಾರ, ಆಮೇನ್ ಮತ್ತು ತಾಶೆಂತ್ ಜಾಂವ್ ಪದಗಳ ಅರ್ಥ ಒಂದೇ ಆಗಿವೆಯಂತೆ.

ಇದೇ ವೇಳೆ, ಚಿತ್ರತಂಡಕ್ಕೆ ಕೆಲ ಕ್ರೈಸ್ತ ಸಮುದಾಯದವರೇ ಬೆಂಬಲ ನೀಡುತ್ತಿದ್ದು ಅವರ ಮೇಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ, “ಇದು ಮುಂದಿನ ದಿನಗಳಲ್ಲಿ ದೊಡ್ಡ ಸಂಕಷ್ಟಕ್ಕೆ ದಾರಿ ಮಾಡಬಹುದು” ಎಂದು ಸ್ಟೇನಿ ಎಚ್ಚರಿಕೆ ನೀಡಿದ್ದಾರೆ. ರೇಖಾ ಲೋಬೋ ಎಂಬವರು ಮಾತನಾಡಿ ಯಾವುದೇ ಕಾರಣಕ್ಕೂ ದೇವರ ಜೊತೆ ಫೈಟ್ ಮಾಡಲು ಹೋಗಬೇಡಿ. ಆಮೇನ್ ಎಂಬ ಪದವನ್ನು ಯೇಸು ಕ್ರೈಸ್ತರಿಗೆ ನೀಡಲಾಗಿದೆ. ಇದನ್ನು ಯಾವುದೇ ಕಾರಣಕ್ಕೆ ಕಾಮಿಡಿ ಸಿನಿಮಾಗಳಿಗೆ ಬಳಸಬೇಡಿ ಎಂದಿದ್ದಾರೆ.
ಹೀಗಾಗಿ ‘ಆಮೇನ್’ ಟೈಟಲ್ ವಿವಾದ ಇದೀಗ ಧಾರ್ಮಿಕ, ಸಾಮಾಜಿಕ ಮತ್ತು ಕಾನೂನು ಹಂತಗಳಲ್ಲಿ ತೀವ್ರ ಸ್ವರೂಪ ಪಡೆಯುತ್ತಿದ್ದು ಮನರಂಜನೆಯ ಹೆಸರಿನಲ್ಲಿ ಧರ್ಮದೊಂದಿಗೆ ಆಟವಾಡುವುದನ್ನು ಸಹಿಸುವುದಿಲ್ಲ” ಎಂದು ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
A controversy has erupted in the Konkani film industry over the title of an upcoming comedy movie originally named “Amen,” triggering strong reactions from religious groups. The term “Amen,” widely recognized as a sacred word from the Bible, has drawn criticism from sections of the Christian community. Critics allege that using such a holy term for a comedy film disrespects religious sentiments. Social media platforms have seen a surge of comments condemning the filmmakers, with many calling it an “insult to faith.”
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
30-09-26 10:49 am
HK News Staffer
ಡ್ರಗ್ಸ್ ಕಳ್ಳಸಾಗಣೆ ಆರೋಪ, ಸೌದಿಯಲ್ಲಿ ಕೇರಳದ ಯುವಕನ...
29-09-26 08:11 pm
ಸೌಜನ್ಯಾ ಮರು ತನಿಖೆಯೂ, ತಮಿಳುನಾಡಿನಲ್ಲಿ ಗ್ರಾನೈಟ್...
26-09-26 07:01 pm
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
30-09-26 05:33 pm
Mangaluru Staffer
Mangalore Kumpala Accident: ಕುಂಪಲ ; ರಸ್ತೆ ದಾಟ...
30-09-26 03:37 pm
Mrpl Fire, Mangalore: ಎಂಆರ್ ಪಿಎಲ್ ಘಟಕದಲ್ಲಿ ಭೀ...
30-09-26 02:20 pm
Mrpl Fire, Mangalore: ಎಂಆರ್ ಪಿಎಲ್ ತೈಲ ಸ್ಥಾವರದ...
30-09-26 12:59 pm
ಮಂಗಳೂರಿನಲ್ಲಿ ಒಳಚರಂಡಿ ಕಾಮಗಾರಿ ; 20 ವರ್ಷಗಳ ಹಿಂದ...
29-09-26 01:25 pm
30-09-26 10:33 am
HK News Staffer
Udupi Body found, Accused: ಕೊಲೆ ಯತ್ನ ಪ್ರಕರಣದ...
30-09-26 10:04 am
ಮಾಂಸದ ಅಂಗಡಿಯಲ್ಲೇ ಡ್ರಗ್ಸ್ ದಂಧೆ ; ಇಬ್ಬರು ಯುವಕರು...
30-09-26 10:03 am
ಸ್ವರ್ಣಾ ನದಿಯಲ್ಲಿ ದುರಂತ ; ಹಿರ್ಗಾನ ಬಳಿ ಈಜಲು ತೆರ...
29-09-26 09:26 pm
Mangalore Accident: ನ್ಯಾಯಾಧೀಶರ ಕಾರಿಗೆ ಗೂಡ್ಸ್...
29-09-26 08:14 pm