ಬೇಳೆಕಾಳುಗಳನ್ನು ಬೇಯಿಸುವ ಮೊದಲು ನೀರಿನಲ್ಲಿ ಯಾಕೆ ನೆನೆಸಬೇಕು ಗೊತ್ತಾ..?

04-10-21 03:47 pm       Source: News 18 Kannada   ಡಾಕ್ಟರ್ಸ್ ನೋಟ್

ದ್ವಿದಳ ಧಾನ್ಯಗಳಾದ ರಾಜ್ಮಾ ಮತ್ತು ಚೋಲೆಗಳನ್ನು ರಾತ್ರಿಯಿಡೀ ನೆನೆಸಬೇಕು. ಇತರ ಬೇಳೆಗಳನ್ನು ಬೇಗನೆ ಬೇಯುವುದರಿಂದ ಹೆಚ್ಚಿನ ಜನರು ನೆನೆಸುವುದನ್ನು ಬಿಟ್ಟುಬಿಡುತ್ತಾರೆ. ಆದರೆ ನೆನೆಸುವುದರಿಂದ ಸಾಕಷ್ಟು ಅನುಕೂಲಗಳಿವೆ

ಹೆಚ್ಚಿನ ಜನರು ಬೇಳೆಕಾಳುಗಳನ್ನು ಬೇಯಿಸುವ ಮೊದಲು ತೊಳೆಯುತ್ತಾರೆ. ಆದರೆ ಕೆಲವೇ ಕೆಲವು ಬೆರಳೆಣಿಕೆ ಮಂದಿಯಷ್ಟೇ ಜನರು ಬೇಯಿಸುವ ಮೊದಲು ಅವುಗಳನ್ನು ನೆನೆಸುತ್ತಾರೆ. ದ್ವಿದಳ ಧಾನ್ಯಗಳಾದ ರಾಜ್ಮಾ ಮತ್ತು ಚೋಲೆಗಳನ್ನು ರಾತ್ರಿಯಿಡೀ ನೆನೆಸಬೇಕು. ಇತರ ಬೇಳೆಗಳನ್ನು ಬೇಗನೆ ಬೇಯುವುದರಿಂದ ಹೆಚ್ಚಿನ ಜನರು ನೆನೆಸುವುದನ್ನು ಬಿಟ್ಟುಬಿಡುತ್ತಾರೆ. ಆದರೆ ನೆನೆಸುವುದರಿಂದ ಸಾಕಷ್ಟು ಅನುಕೂಲಗಳಿವೆ ಮತ್ತು ಅಡುಗೆ ಮಾಡುವ ಮೊದಲು ಬೇಳೆಕಾಳುಗಳನ್ನು ಯಾಕೆ ನೆನೆಸಬೇಕು ಎಂದು ನಿಮಗೆ ತಿಳಿದಿದೆಯೇ..?

ತನ್ನ ಇತ್ತೀಚಿನ ಇನ್‍ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಆಯುರ್ವೇದ ತಜ್ಞ ಡಾ. ದೀಕ್ಷಾ ಭಾವ್ಸರ್ ಅವರು ಎಂದಿಗೂ ಧಾನ್ಯ ಬೇಳೆಕಾಳುಗಳನ್ನು ನೆನೆಸುವುದನ್ನು ಮರೆಯುವುದಿಲ್ಲ. ಜೊತೆಗೆ ದ್ವಿದಳ ಧಾನ್ಯಗಳನ್ನು ನೆನೆಸುವುದರಿಂದ ಆಗುವ ಅನುಕೂಲ ಏನು ಎಂಬುದನ್ನು ವಿವರಿಸುತ್ತಾರೆ. ಏಕೆಂದರೆ ಅದು ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ.

ಡಾ. ದೀಕ್ಷಾ ಪ್ರಕಾರ, ಕೆಲವು ಬೇಳೆಕಾಳುಗಳು, ಧಾನ್ಯಗಳು ಫೈಟಿಕ್ ಆ್ಯಸಿಡ್ ಅನ್ನು ಒಳಗೊಂಡಿರುತ್ತವೆ, ಇದು ಖನಿಜಗಳು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯ ತಡೆಯುತ್ತದೆ. ಫೈಟಿಕ್ ಆ್ಯಸಿಡ್ ಮತ್ತು ಇತರ ವಿರೋಧಿ ಪೋಷಕಾಂಶಗಳನ್ನು ವಿಭಜಿಸುವ ಮತ್ತು ಜೀರ್ಣವೂ ಸುಲಭವಾಗುತ್ತದೆ ಎಂದು ಅವರು ಹೇಳಿದ್ದಾರೆ.ಬೇಳೆಕಾಳು, ಧಾನ್ಯಗಳನ್ನು ನೆನೆಸುವುದರಿಂದ ದೇಹದ ಖನಿಜಾಂಶ ಹೀರಿಕೊಳ್ಳುವಿಕೆಯ ಪ್ರಮಾಣ ಹೆಚ್ಚಾಗುತ್ತದೆ. ಸ್ವಲ್ಪ ಹೊತ್ತು ನೆನೆಸಿದಾಗ, ಫೈಟೇಸ್ ಎಂಬ ಕಿಣ್ವವು ಪ್ರಚೋದಿಸಲ್ಪಡುತ್ತದೆ. ಫೈಟೇಸ್ ಫೈಟಿಕ್ ಆಮ್ಲದ ವಿಭಜನೆಗೆ ಸಹಾಯ ಮಾಡುತ್ತದೆ ಹಾಗೂ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತು ಅದರಲ್ಲಿಯೇ ಉಳಿದುಕೊಳ್ಳಲು ಸಹಕರಿಸುತ್ತದೆ. ಇದು ಹೀರಿಕೊಳ್ಳುವ ಪ್ರಕ್ರಿಯೆಯನ್ನು ಹೆಚ್ಚು ಸರಳಗೊಳಿಸುತ್ತದೆ.ನೆನೆಸುವುದು ಅಮೈಲೇಸ್ ಅನ್ನು ಉತ್ತೇಜಿಸುತ್ತದೆ, ಇದು ಬೇಳೆಕಾಳುಗಳಲ್ಲಿನ ಸಂಕೀರ್ಣವಾದ ಪಿಷ್ಟವನ್ನು ವಿಭಜಿಸುತ್ತದೆ, ಅವುಗಳನ್ನು ಜೀರ್ಣಿಸಿಕೊಳ್ಳುವುದಕ್ಕೆ ಸುಲಭವಾಗಿಸುತ್ತದೆ.

ಡಾ. ದೀಕ್ಷಾ ಪ್ರಕಾರ, ನೆನೆಸುವ ಪ್ರಕ್ರಿಯೆಯು ಕಾಳುಗಳಿಂದ ಗ್ಯಾಸ್ ಉತ್ಪಾದಿಸುವ ರಾಸಾಯನಿಕಗಳನ್ನು ಸಹ ತೆಗೆದುಹಾಕುತ್ತದೆ. ಹೆಚ್ಚಿನ ದ್ವಿದಳ ಧಾನ್ಯಗಳಲ್ಲಿ ಸಂಕೀರ್ಣ ಒಲಿಗೊಸ್ಯಾಕರೈಡ್‍ಗಳು ಸೇರಿವೆ, ಇದು ಒಂದು ರೀತಿಯ ಸಂಕೀರ್ಣ ಸಕ್ಕರೆಯಾಗಿದ್ದು, ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್‍ಗೆ ಕಾರಣವಾಗುತ್ತದೆ. ನೆನೆಸಿದ ನಂತರ ಈ ಸಂಕೀರ್ಣ ಸಕ್ಕರೆಯ ಮಟ್ಟವು ಗಣನೀಯವಾಗಿ ಕಡಿಮೆಯಾಗುತ್ತದೆ, ಈ ರೀತಿ ಮಾಡುವುದರಿಂದ ಗ್ಯಾಸ್ ಸಮಸ್ಯೆಗಳಿಂದ ದುರವಿರಬಹುದು. ಅಲ್ಲದೇ ಅಡುಗೆ ಸಮಯ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.

ವಿವಿಧ ದ್ವಿದಳ ಧಾನ್ಯಗಳನ್ನು ಎಷ್ಟು ಸಮಯ ನೆನೆಸಬೇಕು?

ಯಾವುದೇ ಧಾನ್ಯಗಳನ್ನು ರಾತ್ರಿಯಿಡೀ ನೆನೆಸುವುದು ಉತ್ತಮ ಅಭ್ಯಾಸವಾಗಿದೆ.

 

  • ಹೆಸರುಬೇಳೆ, ಹೆಸರು ಕಾಳು, ತೊಗರಿ ಬೇಳೆ, ಅವರೇಕಾಳು, ಮತ್ತು ಉದ್ದೀನಬೇಳೆಯಂತಹ ಧಾನ್ಯಗಳನ್ನು 8 ರಿಂದ 12 ಗಂಟೆಗಳ ಕಾಲ ನೆನೆಸಬೇಕು.
  • ಒಡೆದ ಬೇಳೆಕಾಳುಗಳನ್ನು 6 ರಿಂದ 8 ಗಂಟೆಗಳ ಕಾಲ ನೆನೆಸಬೇಕು
  • ದೊಡ್ಡ ಗಾತ್ರದ ದ್ವಿದಳ ಧಾನ್ಯಗಳಾದ ರಾಜ್ಮಾ, ಚಾನಾ ಅಥವಾ ಚೋಲೆಗಳನ್ನು 12 ರಿಂದ 18 ಗಂಟೆಗಳ ಕಾಲ ನೆನೆಸಬೇಕು.ನಂತರ ಬೇಯಿಸಬೇಕು.

ಇದು ಟ್ಯಾನಿನ್ ಅಥವಾ ಫೈಟಿಕ್ ಆ್ಯಸಿಡ್ ಅನ್ನು ಒಳಗೊಂಡಿರುವುದರಿಂದ ನಾವು ಇದನ್ನು ಬಳಸಬಾರದು. ಆದ್ದರಿಂದ ಇದನ್ನು ಗಿಡಗಳಿಗೆ ಬಳಸಬಹುದು. ಆ ರೀತಿಯಲ್ಲಿ, ಮನೆ ಗಿಡಗಳು ಕೆಲವು ಪೋಷಕಾಂಶಗಳನ್ನು ಸಹ ಪಡೆಯುತ್ತವೆ.