ಪ್ರತಿದಿನ ಶೇಂಗಾ ಮತ್ತು ಬೆಲ್ಲ ಸೇವಿಸುವುದರ ಉಪಯೋಗ ಎಷ್ಟು ಗೊತ್ತಾ?

27-06-22 07:17 pm       Source: Vijayakarnataka   ಡಾಕ್ಟರ್ಸ್ ನೋಟ್

ಆರೋಗ್ಯಕರ ಆಹಾರಾಭ್ಯಾಸ ದೇಹವನ್ನು ಫಿಟ್‌ ಆಗಿ ಇರಿಸಿಕೊಳ್ಳಲು ಸಹಾಯಕ. ಅದಕ್ಕೆ ಪ್ರತಿದಿನ ಒಂದು ಹಿಡಿ ಶೇಂಗಾ ಮತ್ತು ಒಂದು ಚಮಚ ಬೆಲ್ಲವನ್ನು ಸೇವನೆ ಮಾಡಿ. ಅದರ...

ಆರೋಗ್ಯಕ್ಕೆ ಆಹಾರವೇ ಮೂಲ. ನಮ್ಮ ಆಹಾರ ಸೇವನೆಯ ಅಭ್ಯಾಸ ನಮ್ಮ ಆರೋಗ್ಯವನ್ನು ನಿರ್ಧಾರ ಮಾಡುತ್ತದೆ. ಆಹಾರ ಸೇವನೆ ಕೇವಲ ಹೊಟ್ಟೆ ತುಂಬಲು ಎನ್ನುವ ಕಾರಣಕ್ಕೆ ಎನ್ನುವ ಬದಲು ಒಂದಷ್ಟು ಆಹಾರದಲ್ಲಿ ವಿಭಿನ್ನ ಸಂಯೋಜನೆಗಳನ್ನು ಮಾಡಿಕೊಳ್ಳುವ ಮೂಲಕ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಪಡೆಯಬಹುದಾಗಿದೆ.

ಆಹಾರ ಸಂಯೋಜನೆಯಲ್ಲಿ ಶೆಂಗಾ ಮತ್ತು ಬೆಲ್ಲ ಅತ್ಯುತ್ತಮ ಸಂಯೋಜನೆಯಾಗಿದೆ. ಪ್ರತಿದಿನ ಒಂದು ಮುಷ್ಟಿ ಶೇಂಗಾ ಹಾಗೂ ಎರಡು ಚಮಚ ಬೆಲ್ಲವನ್ನು ಸೇವನೆ ಮಾಡುತ್ತಾ ಬಂದರೆ ಆರೋಗ್ಯದಲ್ಲಿ ದೊಡ್ಟ ಮಟ್ಟದ ಬದಲಾವಣೆಯನ್ನು ಕಾಣಬಹುದಾಗಿದೆ. ಶೇಂಗಾ ಮತ್ತು ಬೆಲ್ಲ ಸೇರಿದ ಚಿಕ್ಕಿ ಅಥವಾ ಹಲ್ವಾ ರೀತಿಯ ಸಿಹಿ ತಿಂಡಿ ಎಲ್ಲರಿಗೂ ಗೊತ್ತು ಅದೇ ರೀತಿ ಶೇಂಗಾವನ್ನು ನೆನೆಸಿಟ್ಟು ನಂತರ ಅದನ್ನು ಬೆಲ್ಲದೊಂದಿಗೆ ತಿಂದರೆ ಆರೋಗ್ಯಕ್ಕೆ ಇನ್ನಷ್ಟು ಲಾಭಗಳನ್ನು ಪಡೆಯಬಹುದಾಗಿದೆ.

ರಕ್ತದ ಉತ್ಪಾದನೆಗೆ ಸಹಕಾರಿ

ದೇಹದಲ್ಲಿ ಹೀಮೊಗ್ಲೋಬಿನ್ನನ್ನು ಹೆಚ್ಚಿಸಲು ಈ ಆಹಾರ ಸೇವಿಸಿದರೆ ಉತ್ತಮ – KANNADIGA  WORLD

ಶೇಂಗಾ ಮತ್ತು ಬೆಲ್ಲದ ಸೇವನೆಯಿಂದ ದೇಹದಲ್ಲಿ ರಕ್ತದ ಉತ್ಪಾದನೆ ಹೆಚ್ಚಾಗುತ್ತದೆ. ಇದು ಹೆಣ್ಣು ಮಕ್ಕಳಿಗೆ ಹೆಚ್ಚು ಒಳ್ಳೆಯದು. ಮುಟ್ಟಿನ ದಿನಗಳಲ್ಲಿ ಉಂಟಾಗುವ ನೋವನ್ನು ಕಡಿಮೆ ಮಾಡಲು ಕೂಡ ಈ ಶೇಂಗಾ ಮತ್ತು ಬೆಲ್ಲ ಸಹಾಯಕವಾಗಿದೆ.

ಅಲ್ಲದೆ ಪ್ರತೀ ತಿಂಗಳು ನಷ್ಟವಾಗುವ ರಕ್ತವನ್ನು ಮತ್ತೆ ಪಡೆಯಬಹುದಾಗಿದೆ. ಹೀಗಾಗಿ ಶೇಂಗಾ ಮತ್ತು ಬೆಲ್ಲವನ್ನು ಪ್ರತಿನಿತ್ಯ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಇದು ಪುರುಷರಲ್ಲೂ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.

ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು

8 Symptoms Of Osteoporosis You Should Watch Out For – Puritan's Pride  Philippines

ವಯಸ್ಸಾದಂತೆ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ಬೆಲ್ಲ ಮತ್ತು ಶೇಂಗಾ ಉತ್ತಮ ಆಹಾರವಾಗಲಿದೆ. ಇನ್ನು ಬೆಳೆಯುವ ಮಕ್ಕಳಲ್ಲಿ ಕೂಡ ಕ್ಯಾಲ್ಸಿಯಂ ಅಂಶ ಹೆಚ್ಚಾಗಿ ಬೇಕಾಗುತ್ತದೆ. ಈ ಕಾರಣದಿಂದ ಚಿಕ್ಕ ಮಕ್ಕಳಿಗೂ ಕೂಡ ಶೇಂಗಾ ಮತ್ತು ಬೆಲ್ಲವನ್ನು ತಿನ್ನಲು ನೀಡಬೇಕು ಎಂದು ಹೇಳುವುದು.

ರುಚಿಯಲ್ಲಿಯೂ ಉತ್ತಮವಾಗಿರುವ ಈ ಸ್ನ್ಯಾಕ್ಸ್‌ ಮಕ್ಕಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇನ್ನು ವಯಸ್ಸಾದಂತೆ ಕೂಡ ಮೂಳೆಗಳ ಸವೆತವಾಗುತ್ತದೆ. ಇದನ್ನು ತಡೆಯಲು ಶೇಂಗಾ ಮತ್ತು ಬೆಲ್ಲ ಸಹಾಯಕವಾಗಿದೆ.

ಕೊಲೆಸ್ಟ್ರಾಲ್ ಸಮಸ್ಯೆ ಇದ್ದವರಿಗೆ...

Can Someone How Suffering High Blood Pressure, Heart Problem Eat Potatoes  These Things You Must Know | ಬಿಪಿ, ಕೊಲೆಸ್ಟ್ರಾಲ್, ಹೃದಯದ ಸಮಸ್ಯೆ ಇದ್ದವರಿಗೆ,  ಆಲೂಗಡ್ಡೆ ಬಹಳ ಒಳ್ಳೆಯದು... | Headline Karanataka

ಕೊಲೆಸ್ಟ್ರಾಲ್ ಪ್ರಮಾಣವು ಕಡಲೆಕಾಯಿ ಬೆಲ್ಲದಲ್ಲಿ ಅತಿ ಕಡಿಮೆ ಇರುತ್ತದೆ. ಕಡಲೆಕಾಯಿಯಲ್ಲಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳ ಉಪಸ್ಥಿತಿಯು ಪಾರ್ಶ್ವವಾಯುಗಳ ಜೊತೆಗೆ ಪರಿಧಮನಿಯ ಮತ್ತು ಅಪಧಮನಿಯ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಹೃದ್ರೋಗಗಳನ್ನು ತಡೆಯಲು ಮತ್ತು ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

​ಗರ್ಭಿಣಿಯರೂ ಸೇವಿಸಬಹುದು

health problems during pregnancy: ಗರ್ಭಿಣಿಯರಿಗೆ ಎದುರಾಗಲಿವೆ ಈ 7 ಬಗೆಯ  ಸಮಸ್ಯೆಗಳು! ನಿರ್ವಹಣೆ ಹೇಗೆ ಗೊತ್ತಾ? - Vijaya Karnataka

ಬೆಲ್ಲ ಮತ್ತು ಶೇಂಗಾವನ್ನು ಗರ್ಭಾವಸ್ಥೆಯಲ್ಲಿ ಸೇವನೆ ಮಾಡುವುದರಿಂದ ರಕ್ತದ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ಗರ್ಭಿಣಿಯ ಆರೋಗ್ಯ ಉತ್ತಮವಾಗಿರುತ್ತದೆ. ಇದು ಮಗುವಿನ ಬೆಳವಣಿಗೆಯ ಧನಾತ್ಮಕ ಪರಿಣಾಮ ಬೀರುತ್ತದೆ.

ಬೆಲ್ಲ ಮತ್ತು ಶೇಂಗಾ ಸೇವೆನೆಯಿಂದ ಮಕ್ಕಳಲ್ಲಿ ಅಸ್ತಮಾ ಸಮಸ್ಯೆ ಕಾಣಿಸಿಕೊಳ್ಳುವುದು ಕಡಿಮೆಯಾಗುತ್ತದೆ. ಇದರಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ, ಪ್ರೋಟೀನ್ ಭ್ರೂಣದ ಬೆಳವಣಿಗೆಗೆ ಸಹ ಅಗತ್ಯವಾಗಿದೆ. ಆರೋಗ್ಯಕರ ಭ್ರೂಣದ ಬೆಳವಣಿಗೆಗೆ ಕಾರಣವಾಗುವ ಹೆಚ್ಚಿನ ಅಂಶಗಳೆಂದರೆ ಕಡಲೆಕಾಯಿ ಮತ್ತು ಬೆಲ್ಲ ಎರಡೂ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

​ದೇಹದ ತೂಕ ಇಳಿಕೆಗೆ ಸಹಕಾರಿ

Peanut & Jaggery Benefits: Peanut with jaggery and benefits of eating in  winters

ಶೇಂಗಾ ಮತ್ತು ಬೆಲ್ಲ ಸ್ನಾಯುವಿನ ಬೆಳವಣಿಗೆಗೆ ಅಗತ್ಯವಾದ ಉತ್ತಮ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ, ಇದು ಆರೋಗ್ಯಕರ ಕೊಬ್ಬನ್ನು ಸಹ ಒಳಗೊಂಡಿರುತ್ತದೆ, ಅದು ಹಸಿವನ್ನು ನಿಯಂತ್ರಿಸುತ್ತದೆ.

ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗದಂತೆ ತಡೆಯುತ್ತದೆ. ಆದ್ದರಿಂದ ತೂಕ ಇಳಿಕೆಗೂ ಕೂಡ ಶೇಂಗಾ ಮತ್ತು ಬೆಲ್ಲ ಸಹಾಯಕವಾಗಿದೆ.

Health Benefits Of Peanuts And Jaggery.