ಮೊಳಕೆ ಕಟ್ಟಿದ ಕಡಲೆಕಾಳುಗಳನ್ನು ತಿನ್ನೋದ್ರಿಂದ, ಕಾಯಿಲೆಗಳು ಹತ್ತಿರನೂ ಬರಲ್ಲ!

04-11-22 07:43 pm       Source: Vijayakarnataka   ಡಾಕ್ಟರ್ಸ್ ನೋಟ್

ಸಂಜೆ ಟೈಮಲ್ಲಿ ಅದು ಇದು ಸ್ನಾಕ್ಸ್ ತಿನ್ನುವ ಬದಲು ಮೊಳಕೆ ಕಟ್ಟಿದ ಕಡಲೆಕಾಳು ತಿಂದು ನೋಡಿ. ಇದರಿಂದ ಎಂತೆಂಥ ಆರೋಗ್ಯ ಪ್ರಯೋಜನ ಗಳನ್ನು ನಿರೀಕ್ಷೆ ಮಾಡಬಹುದು ಗೊತ್ತಾ?

ಕಡಲೆಕಾಳುಗಳ ಬಗ್ಗೆ ಎರಡು ಮಾತಿಲ್ಲ. ಏಕೆಂದರೆ ಇವು ಆರೋಗ್ಯಕರವಾದ ಕಾಳುಗಳು. ನಮ್ಮ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುವಲ್ಲಿ ಹೆಸರುಕಾಳಿನಷ್ಟೇ ಲಾಭ ದಾಯಕ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಕಡಲೆ ಕಾಳುಗಳನ್ನು ನೆನೆಸಿ ಮೊಳಕೆ ಕಟ್ಟಿ ಬೇಕೆಂದಾಗ ತಿನ್ನಬಹುದು.

ಇವುಗಳಿಂದ ನಮ್ಮ ದೇಹ ಆಂತರಿಕವಾಗಿ ಶುದ್ಧವಾಗುವುದು ಮಾತ್ರವಲ್ಲದೆ ಹಲವಾರು ಆರೋಗ್ಯಕರ ಪ್ರಯೋಜನಗಳು ಸಿಗುತ್ತವೆ. ಈ ಬಗ್ಗೆ ದೈಹಿಕ ಸ್ವಾಸ್ಥ್ಯ ತಜ್ಞರಾದ ಲವ್ನೀತ್ ಬಾತ್ರಾ ಏನು ಹೇಳುತ್ತಾರೆ ಕೇಳಿ....

ಹೃದಯ ರಕ್ತನಾಳ ಕಾಯಿಲೆಗಳಿಗೆ ರಾಮಬಾಣ

Heart Failure Symptoms, Risk Factors, Diagnosis and Treatment | Narayana  Health

ಮೊಳಕೆ ಕಟ್ಟಿದ ಕಪ್ಪು ಕಡಲೆ ಕಾಳು ತನ್ನಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣವನ್ನು ಹೆಚ್ಚಾಗಿ ಹೊಂದಿದೆ. ಇದರಿಂದ ರಕ್ತನಾಳಗಳನ್ನು ಆರೋಗ್ಯಕರವಾಗಿ ಕಾಪಾಡುವುದು ಮಾತ್ರವಲ್ಲದೆ ಅವುಗಳ ಮೇಲೆ ಆಕ್ಸಿಡೆಟೀವ್ ಒತ್ತಡ ಉಂಟಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಹೃದಯಕ್ಕೆ ಅಥವಾ ಹೃದಯ ರಕ್ತನಾಳಕ್ಕೆ ಸಂಬಂಧಪಟ್ಟ ಕಾಯಿಲೆಗಳು ದೂರವಾಗುತ್ತವೆ.

ಆರೋಗ್ಯಕರವಾದ ತಲೆ ಕೂದಲಿಗೆ ತುಂಬಾ ಒಳ್ಳೆಯದು

ಕಡಲೆಕಾಳು ತನ್ನಲ್ಲಿ ಅಪಾರವಾದ ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿದೆ. ಇದರಲ್ಲಿ ವಿಟ ಮಿನ್ ಎ, ವಿಟಮಿನ್ ಬಿ6, ಜಿಂಕ್ ಮತ್ತು ಮ್ಯಾಂಗನೀಸ್ ಇರುತ್ತದೆ. ಇದರಿಂದ ತಲೆ ಕೂದಲಿನ ಬೆಳವಣಿಗೆ ಸೊಂಪಾಗಿ ಆಗಲಿದ್ದು, ಕೂದಲಿಗೆ ಸಂಬಂಧಪಟ್ಟಂತೆ ಇರುವಂತಹ ಹಲವಾರು ಸಮಸ್ಯೆಗಳು ಮಾಯ ವಾಗುತ್ತವೆ.

ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿರ್ವಹಣೆಯಾಗುತ್ತದೆ

Suffering from diabetes? Five apps to help you manage your lifestyle better  - The Economic Times

  • ಕಪ್ಪು ಕಡಲೆಕಾಳುಗಳಲ್ಲಿ ಕಂಡು ಬರುವ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ನಮ್ಮ ಜೀರ್ಣ ಶಕ್ತಿಯನ್ನು ನಿಧಾನ ಮಾಡುತ್ತದೆ.
  • ಇದರಲ್ಲಿ ಕರಗುವ ನಾರಿನ ಅಂಶ ಇರುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಚೆನ್ನಾಗಿ ಬಳಕೆ ಆಗುವಂತೆ ಮಾಡುತ್ತದೆ ಮತ್ತು ಕಡಲೆಕಾಳುಗಳಲ್ಲಿ ಕಡಿಮೆ ಗ್ಲೈಸ್ಮಿಕ್ ಸೂಚ್ಯಂಕ ಇರುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ಹಸಿವು ನಿಯಂತ್ರಣ ಮಾಡುತ್ತದೆ.

ಮೆದುಳಿನ ಕಾರ್ಯ ಚಟುವಟಿಕೆಗೆ ಒಳ್ಳೆಯದು

ಇದರಲ್ಲಿ ವಿಟಮಿನ್ ಬಿ6 ಇರುವುದರಿಂದ ನಮ್ಮ ನೆನಪಿನ ಶಕ್ತಿಯನ್ನು ಅಭಿವೃದ್ಧಿಡಿಸುವಲ್ಲಿ ಕೆಲಸ ಮಾಡುತ್ತದೆ. ಜೊತೆಗೆ ದೇಹದ ವಿವಿಧ ಭಾಗಗಳಿಗೆ ಮೆದುಳು ಕಳುಹಿಸುವ ಸಂಕೇತ ಗಳನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತದೆ. ಹಾಗಾಗಿ ಪ್ರತಿದಿನದ ಕಾರ್ಯ ಚಟುವಟಿಕೆ ಗಳನ್ನು ಉತ್ತಮವಾಗಿ ಮಾಡಲು ಸಾಧ್ಯವಾಗುತ್ತದೆ.

As Per The Nutrient Expert Know The Immense Health Benefits Of Sprouted Chana.