ಚಳಿಗಾಲದಲ್ಲಿ ಸಿಗುವ ಪೇರಳೆ ಹಣ್ಣು ಆರೋಗ್ಯಕ್ಕೆಷ್ಟು ಒಳ್ಳೆಯದು ಗೊತ್ತಾ?

17-11-22 07:40 pm       Source: Vijayakarnataka   ಡಾಕ್ಟರ್ಸ್ ನೋಟ್

ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುವ ಪೇರಳೆ ಹಣ್ಣು ಆರೋಗ್ಯಕ್ಕೆ ಭರಪೂರ ಲಾಭಗಳನ್ನು ನೀಡುತ್ತವೆ. ಅದರ ಬಗ್ಗೆ ವೈದ್ಯರ ಮಾಹಿತಿ ಇಲ್ಲಿದೆ.

ಋತುಮಾನದ ಹಣ್ಣುಗಳು ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಲು ಸಹಾಯ ಮಾಡುತ್ತವೆ. ಅಂತಹವುಗಳಲ್ಲಿ ಪೇರಳೆ ಕೂಡ ಒಂದು. ನವೆಂಬರ್‌ ಡಿಸೆಂಬರ್‌ನಲ್ಲಿ ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಪೇರಳೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು.

 

ಹೇರಳವಾದ ಉತ್ಕರ್ಷಣ ನಿರೋಧಕಗಳು, ಫೈಬರ್, ವಿಟಮಿನ್ ಸಿ, ಪ್ರೋಟೀನ್‌ಗಳು, ಮೆಗ್ನೀಸಿಯಮ್, ಕಾರ್ಬೋಹೈಡ್ರೇಟ್‌ಗಳು ಸೇರಿದಂತೆ ಅನೇಕ ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಹೀಗಾಗಿ ಚಳಿಗಾಲದಲ್ಲಿ ದೇಹವನ್ನು ಆರೋಗ್ಯವಾಗಿಡುವಲ್ಲಿ ಸಹಾಯ ಮಾಡುತ್ತದೆ.

ಹಾಗಾದರೆ ಪೇರಳೆ ಹಣ್ಣು ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳನ್ನು ನೀಡುತ್ತದೆ ಎನ್ನುವ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶರದ್‌ ಕುಲಕರ್ಣಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.

​ಮಧುಮೇಹ ಇದ್ದವರಿಗೆ ಒಳ್ಳೆಯದು

Suffering from diabetes? Five apps to help you manage your lifestyle better  - The Economic Times

ಪೇರಳೆ ಹಣ್ಣು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹಣ್ಣು. ಇದರರ್ಥ ಅವುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡಬಹುದು. ಅಲ್ಲದೆ ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಇರುವ ಕಾರಣ ಜೀರ್ಣಕ್ರಿಯೆ ಉತ್ತಮವಾಗುವಂತೆ ಮಾಡುತ್ತದೆ.

ಹೀಗಾಗಿ ಮಧುಮೇಹ ಇದ್ದವರು ನಿಯಮಿತವಾಗಿ ಪೇರಳೆ ಹಣ್ಣನ್ನು ತಿನ್ನುವುದು ಬಹಳ ಒಳ್ಳೆಯದು ಎನ್ನುತ್ತಾರೆ ವೈದ್ಯರು.

ಬೊಜ್ಜು ನಿವಾರಣೆಗೆ

Weight Loss Tips| 3 Healthy Habits That are Essential For Permanent Weight  Loss

ದೇಹದಲ್ಲಿನ ಅಧಿಕ ತೂಕದಿಂದಾಗಿ ಉಂಟಾಗುವ ಬೊಜ್ಜಿನ ಸಮಸ್ಯೆ ನಿವಾರಣೆಗೆ ಪೇರಳೆ ಹಣ್ಣು ಸಹಾಯಕವಾಗಿದೆ. ಸರಳವಾಗಿ ಆಹಾರದ ಫೈಬರ್, ಪ್ರೋಟೀನ್‌ಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿರುವ ಪೇರಳೆ ತೂಕ ನಷ್ಟಕ್ಕೆ ನೆರವಾಗುತ್ತದೆ.

ಥೈರಾಯ್ಡ್‌ ಸಮಸ್ಯೆ ಇದ್ದವರಲ್ಲಿ ಕಾಡುವ ಬೊಜ್ಜಿನ ಸಮಸ್ಯೆಯನ್ನೂ ನಿವಾರಣೆ ಮಾಡಲು ಈ ಪೇರಳೆ ಹಣ್ಣು ಸಹಾಯ ಮಾಡುತ್ತದೆ.

ಮಲಬದ್ಧತೆ ಸಮಸ್ಯೆಗೆ

Remedies for constipation, ಮಲಬದ್ಧತೆ ಸಮಸ್ಯೆ ನಿವಾರಣೆಗೆ ಅತ್ಯದ್ಭುತ ಮನೆ ಮದ್ದುಗಳು  - natural kitchen ingredients for constipation that are easy and effective  - Vijaya Karnataka

ಕಡಿಮೆ ಫೈಬರ್ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಅಲ್ಲದೆ ಸರಿಯಾದ ಕರುಳಿನ ಚಲನೆಯಿಲ್ಲದೆ ಸರಿಯಾಗಿ ಮಲವಿಸರ್ಜನೆಯಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಪೇರಳೆ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು.

ಫೈಬರ್‌ ಅಂಶ ಅಧಿಕವಾಗಿ ಇರುವುದರಿಂದ ಚಳಿಗಾಲದಲ್ಲಿ ಪೇರಳೆ ಹಣ್ಣನ್ನು ತಿನ್ನುವುದು ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ.

ಬಾಯಿಯ ಹುಣ್ಣಿಗೆ

ಬಾಯಿ ಹುಣ್ಣಿನಿಂದ ಬಳಲುತ್ತಿದ್ದೀರಾ? ಇದರ ಪರಿಹಾರಕ್ಕೆ ಐದು ಮನೆಮದ್ದುಗಳು ಇಲ್ಲಿವೆ -  Kanlish News : Karnataka - Latest Kannada Breaking News Today, Headlines,  Movies, Fashion, Political, Sports News And ...

ದೇಹದಲ್ಲಿ ಉಷ್ಣತೆ ಜಾಸ್ತಿಯಾದಾಗ ಅಥವಾ ಹೆಚ್ಚು ಮಸಾಲೆ ಪದಾರ್ಥಗಳನ್ನು ತಿಂದಾಗ ಕೆಲವರಿಗೆ ಬಾಯಲ್ಲಿ ಗುಳ್ಳೆಯಾಗುತ್ತದೆ. ಅತೀವ ಉರಿ, ನೋವನ್ನು ನೀಡುವ ಈ ಬಾಯಿ ಹುಣ್ಣಿನ ನಿವಾರಣೆಗೆ ಪೇರಳೆ ಹಣ್ಣು ಅಥವಾ ಪೇರಳೆ ಗಿಡದ ಎಲೆ ಸಹಾಯ ಮಾಡುತ್ತದೆ.

ಬಾಯಿಯ ಹುಣ್ಣಾದ ಸಮಯದಲ್ಲಿ ಪೇರಳೆ ಹಣ್ಣನ್ನು ತಿನ್ನಬಹುದು ಅಥವಾ ಪೇರಳೆ ಗಿಡದ ಎಲೆಯನ್ನು ಜಗಿಯುವುದರಿಂದ ಗುಳ್ಳೆ ನಿವಾರಣೆಯಾಗುತ್ತದೆ.

ಪೇರಳೆ ಹಣ್ಣು ತಿಂದು ನೀರು ಕುಡಿಯಬೇಡಿ

guava fruit in winter, ಚಳಿಗಾಲದಲ್ಲಿ ಸಿಗುವ ಪೇರಳೆ ಹಣ್ಣು ಆರೋಗ್ಯಕ್ಕೆಷ್ಟು  ಒಳ್ಳೆಯದು ಗೊತ್ತಾ? - eating guava fruit in winter gives amazing health  benefits - Vijaya Karnataka

ಪೇರಳೆ ಹಣ್ಣನ್ನು ಆಯುರ್ವೇದದಲ್ಲಿ ಬೇರೂಕ ಎನ್ನುತ್ತಾರೆ. ದೇಹಕ್ಕೆ ಇದು ಶೀತವಾಗಿದೆ. ಪೇರಳೆ ಹಣ್ಣನ್ನು ಹಚ್ಚು ತಿಂದರೂ ಸಮಸ್ಯೆಯೇ. ಮುಖ್ಯವಾಗಿ ಪೇರಳೆ ಹಣ್ಣನ್ನು ತಿಂದು ನೀರು ಕುಡಿಯಬಾರದು. ಏಕೆಂದರೆ ಇದರಲ್ಲಿ ಪೊಟ್ಯಾಷಿಯಂ ಅಂಶವಿರುತ್ತದೆ. ಹೀಗಾಗಿ ಪೇರಳೆ ತಿಂದು ನೀರು ಕುಡಿದರೆ ಅತಿಸಾರವಾಗುವ ಸಾಧ್ಯತೆ ಇರುತ್ತದೆ.

ಪೇರಳೆಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್‌ಗಳು ಇರುವುದರಿಂದ ಚರ್ಮ, ಕೂದಲು, ಹಲ್ಲಿನ ಆರೋಗ್ಯಕ್ಕೆ, ಕಣ್ಣಿಗೆ, ಹೃದಯಕ್ಕೂ ಪೇರಳೆ ಹಣ್ಣು ಬಹಳ ಒಳ್ಳೆಯದು.

Eating Guava Fruit In Winter Gives Amazing Health Benefits.