ಮಕ್ಕಳಾಗುವ ಸಾಧ್ಯತೆ ಹೆಚ್ಚಿಸುತ್ತೆ ದಾಳಿಂಬೆ ಹಣ್ಣು!

15-12-22 06:53 pm       Source: Vijayakarnataka   ಡಾಕ್ಟರ್ಸ್ ನೋಟ್

ನಿಮಗೆ ಮಕ್ಕಳಾಗುವ ವಿಷಯಕ್ಕೆ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೀರಾ? ಇನ್ನು ಮುಂದೆ ಚಿಂತೆ ಬಿಡಿ. ಪ್ರತಿದಿನ ದಾಳಿಂಬೆ ಹಣ್ಣು ಅಥವಾ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯಿರಿ.

ನೈಸರ್ಗಿಕವಾದ ರೂಪದಲ್ಲಿ ಸಿಗುವ ಹಲವಾರು ಆಹಾರ ಪದಾರ್ಥಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತವೆ. ಹಣ್ಣು, ತರಕಾರಿಗಳು, ಸೊಪ್ಪು ಹೀಗೆ ಎಲ್ಲವೂ ಸಹ ಕಡಿಮೆ ಅಡ್ಡ ಪರಿಣಾಮಗಳ ಸಹಿತ ಆರೋಗ್ಯಕ್ಕೆ ಸಹಕಾರಿಯದ ಗುಣಗಳನ್ನು ಹೊಂದಿರುತ್ತವೆ.

ದಾಳಿಂಬೆ ಹಣ್ಣು ಪುರುಷರಿಗೆ ಹಾಗೂ ಮಹಿಳೆಯರಿಗೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಅದರಲ್ಲಿ ಪ್ರಮುಖವಾಗಿ ಲೈಂಗಿಕ ವಿಷಯಕ್ಕೆ ಸಂಬಂಧಪಟ್ಟಂತೆ ಇರುವ ಸಮಸ್ಯೆಗಳನ್ನು ಬಹಳ ಬೇಗನೆ ಸರಿಪಡಿಸುತ್ತದೆ ಎಂದು ತಿಳಿದು ಬಂದಿದೆ.

ಅಧ್ಯಯನಗಳು ಹೇಳುವ ಹಾಗೆ

Pomegranates: Nutrition, Health Benefits, and More | Everyday Health

ಅಧ್ಯಯನಗಳು ಹೇಳುವ ಹಾಗೆ ದಾಳಿಂಬೆ ಹಣ್ಣು ತಿನ್ನುವುದರಿಂದ ಪುರುಷರಿಗೆ ಹಾಗೂ ಮಹಿಳೆಯರಿಗೆ ದೇಹದಲ್ಲಿ ರಕ್ತ ಸಂಚಾರ ಅಧಿಕವಾಗುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಗರ್ಭಕೋಶದ ಭಾಗದಲ್ಲಿ ಅಲ್ಲಿನ ಮಾಂಸ ಖಂಡಗಳು ಸದೃಢಗೊಳ್ಳುತ್ತವೆ.

ಇದರಿಂದ ಅಬಾರ್ಷನ್ ಆಗುವುದು ತಪ್ಪುತ್ತದೆ. ದೇಹದ ಫಲವತ್ತತೆ ಜೊತೆಗೆ ಹೊಟ್ಟೆಯಲ್ಲಿ ಮಗುವಿನ ಬೆಳವಣಿಗೆ ಇದರಿಂದ ಸಾಧ್ಯವಾಗುತ್ತದೆ. ಆದರೆ ಸಂಶೋಧಕರು ಹೇಳುವಂತೆ ಮಿತ ಪ್ರಮಾಣದಲ್ಲಿ ಇದನ್ನು ಸೇವನೆ ಮಾಡಬೇಕು, ಇಲ್ಲದಿದ್ದರೆ ಆರೋಗ್ಯದ ಅಡ್ಡ ಪರಿಣಾಮಗಳು ಎದುರಾಗುವ ಸಾಧ್ಯತೆ ಇರುತ್ತದೆ.

​ದಾಳಿಂಬೆ ಹಣ್ಣಿನಲ್ಲಿ ಸಿಗುವ ವಿಟಮಿನ್ ಗಳ ಬಗ್ಗೆ ಹೇಳುವುದಾದರೆ...

9 Jewish Things About Pomegranates | My Jewish Learning

ಇದರ ಜೊತೆಗೆ ಪೌಷ್ಟಿಕಾಂಶಗಳು ಹೆಚ್ಚಾಗಿರುವ ದಾಳಿಂಬೆ ಹಣ್ಣು, ದೇಹಕ್ಕೆ ವಿಟಮಿನ್ ಸಿ, ವಿಟಮಿನ್ ಕೆ, ಮತ್ತು ಫೋಲಿಕ್ ಆಮ್ಲ ಒದಗಿಸುವ ಕಾರಣ ಆರೋಗ್ಯಕರ ಮಗುವಿನ ಬೆಳವಣಿಗೆಯಲ್ಲಿ ಸಹಕಾರಿಯಾಗುತ್ತದೆ.

ಇದಕ್ಕಾಗಿ ಮಹಿಳೆಯರು ಪ್ರತಿದಿನ ಒಂದರಿಂದ ಎರಡು ಕಪ್ ದಾಳಿಂಬೆ ಬೀಜಗಳನ್ನು ತಿನ್ನಬಹುದು ಅಥವಾ ಒಂದು ಕಪ್ ರುಚಿಯಾದ ದಾಳಿಂಬೆ ಜ್ಯೂಸ್ ಕುಡಿಯಬಹುದು.

ಪುರುಷರಿಗೂ ಕೂಡ ಒಳ್ಳೆಯದು!

Reasons Why You Should Start Eating Pomegranates

ದಾಳಿಂಬೆ ಹಣ್ಣಿನ ಜ್ಯೂಸ್ ಪುರುಷರಲ್ಲಿ ಎದುರಾಗುವ ಹಲವಾರು ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಮುಖ್ಯವಾಗಿ ಅಪಸಾಮಾನ್ಯ ನಿಮಿರುವಿಕೆ ಸಮಸ್ಯೆಯನ್ನು ದೂರಪಡಿಸುವುದು ಮಾತ್ರವಲ್ಲದೆ ಲೈಂಗಿಕ ಪ್ರಕ್ರಿಯೆಯ ಸಂದರ್ಭದಲ್ಲಿ ಹೆಚ್ಚು ಕಾಲ ನಿಮಿರುವಿಕೆ ಕಾಪಾಡಿಕೊಳ್ಳಲು ನೆರವಾಗುತ್ತದೆ.

ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರ ಇನ್ನಿತರ ಪ್ರಯೋಜನಗಳು

ಇದು ಹೃದಯದ ವಿಷಯದಲ್ಲೂ ಕೂಡ ತುಂಬಾ ಸಹಕಾರಿ. ಹೃದಯದ ಭಾಗಕ್ಕೆ ರಕ್ತ ಸಂಚಾರವನ್ನು ಅಧಿಕಗೊಳಿಸಿ ಅಥರೋಸ್ಕ್ರಿರೋಸಿಸ್ ಸಮಸ್ಯೆಯನ್ನು ಬಗೆಹರಿಸುತ್ತದೆ.

ದಾಳಿಂಬೆ ಹಣ್ಣು ಆಗಾಗ ನಿಮ್ಮ ಆಹಾರ ಪದ್ಧತಿಯಲ್ಲಿ ಇದ್ದರೆ ಅದರಿಂದ ನಿಮ್ಮ ಕೀಲು ನೋವು, ಮೂಳೆಗಳ ತೊಂದರೆ ಕೂಡ ಸರಿ ಹೋಗುತ್ತದೆ. ಅನೀಮಿಯ ಸಮಸ್ಯೆ ಇರುವವರು ಕೂಡ ದಾಳಿಂಬೆ ಹಣ್ಣು ತಿನ್ನಬಹುದು ಮತ್ತು ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು.

ದಾಳಿಂಬೆ ಹಣ್ಣಿನ ಜ್ಯೂಸ್ ಪುರುಷರಲ್ಲಿ ಎದುರಾಗುವ ಹಲವಾರು ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಮುಖ್ಯವಾಗಿ ಅಪಸಾಮಾನ್ಯ ನಿಮಿರುವಿಕೆ ಸಮಸ್ಯೆಯನ್ನು ದೂರಪಡಿಸುವುದು ಮಾತ್ರವಲ್ಲದೆ ಲೈಂಗಿಕ ಪ್ರಕ್ರಿಯೆಯ ಸಂದರ್ಭದಲ್ಲಿ ಹೆಚ್ಚು ಕಾಲ ನಿಮಿರುವಿಕೆ ಕಾಪಾಡಿಕೊಳ್ಳಲು ನೆರವಾಗುತ್ತದೆ.

ಅಧ್ಯಯನ ಹೇಳುವ ಹಾಗೆ

Pomegranates For The Holidays! - Veggie Fest

ಒಂದು ಅಧ್ಯಯನ ಹೇಳುವ ಹಾಗೆ ಪುರುಷರು ಪ್ರತಿ ದಿನ ಒಂದು ಕಪ್ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುತ್ತಾ ಬಂದರೆ ಕ್ರಮೇಣವಾಗಿ ತಮ್ಮ ಲೈಂಗಿಕ ಸಮಸ್ಯೆಗಳನ್ನು ಸುಲಭವಾಗಿ ಮ್ಯಾನೇಜ್ ಮಾಡಬಹುದು. ಅದರಲ್ಲೂ ಅಪಸಾಮಾನ್ಯ ನಿಮಿರುವಿಕೆ ಸಮಸ್ಯೆ ಮಧುಮೇಹ, ರಕ್ತದ ಒತ್ತಡ ಮತ್ತು ಧೂಮಪಾನ ಇವುಗಳಿಗೆ ಲಿಂಕ್ ಹೊಂದಿರುತ್ತದೆ.

ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಶಿಶ್ನದ ಭಾಗದಲ್ಲಿ ರಕ್ತನಾಳಗಳ ಕಡೆ ಹೆಚ್ಚು ರಕ್ತ ಸಂಚಾರ ಉಂಟಾಗುತ್ತದೆ. ದಾಳಿಂಬೆ ಹಣ್ಣಿನ ಜ್ಯೂಸ್ ಮಾನಸಿಕ ಒತ್ತಡವನ್ನು ಸಹ ನಿವಾರಣೆ ಮಾಡುತ್ತದೆ. ಆದರೆ ಮಾನಸಿಕ ಒತ್ತಡ ಎನ್ನುವುದು ಮಹಿಳೆಯರಲ್ಲಿ ಫಲವತ್ತತೆ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ಹೇಳಲಾಗಿದೆ.

​ಮಹಿಳೆಯರಿಗೆ...

6 Surprising Health Benefits of Pomegranates

ದಾಳಿಂಬೆ ಹಣ್ಣಿನ ರಸ ಮಹಿಳೆಯರು ಸೇವಿಸುವುದರಿಂದ ಅವರ ದೇಹಕ್ಕೆ ವಿಟಮಿನ್ ಸಿ, ಪಾಲಿಫಿನಾಲ್, ನೈಟ್ರಿಕ್ ಆಕ್ಸೈಡ್ ಎಲ್ಲವೂ ಸಿಗುತ್ತದೆ.

ಇದರಿಂದ ದೇಹದ ಎಲ್ಲಾ ಭಾಗದಲ್ಲಿ ಉತ್ತಮ ರಕ್ತ ಸಂಚಾರ ಉಂಟಾಗುತ್ತದೆ. ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಟೆಸ್ಟೋಸ್ಟಿರೋನ್ ಹಾರ್ಮೋನ್ ಬಿಡುಗಡೆಯಾಗುತ್ತದೆ ಮತ್ತು ಲೈಂಗಿಕ ಜೀವನ ಸುಖಮಯವಾಗಿರುತ್ತದೆ.

ಒಂದು ಮಾತು ನೆನಪಿನಲ್ಲಿರಲಿ

Premium Photo | Red apples, shofar (horn) and pomegranates on a wooden  table, the concept of the jewish new year - rosh hashanah.

ಒಂದು ವೇಳೆ ನೀವು ಈಗಾಗಲೇ ನಿಮಿರುವಿಕೆ ಅಪಸಾಮಾನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ನೀವು ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಧೀರ್ಘಕಾಲ ನಿಮಿರುವಿಕೆ ಹಾಗೆ ಇರುವ ಸಾಧ್ಯತೆ ಇರುತ್ತದೆ.

ಆನಂತರದಲ್ಲಿ ವೈದ್ಯರ ಚಿಕಿತ್ಸೆ ಅಗತ್ಯಕ್ಕೆ ಬರಬಹುದು. ಹಾಗಾಗಿ ದಾಳಿಂಬೆ ಹಣ್ಣಿನ ಜ್ಯೂಸ್ ಕೇವಲ ನೀವು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳದಿದ್ದರೆ ಮಾತ್ರ ಸೇವಿಸಿ.

Pomegranates Are Best In Class Fruits For Fertility Problems.