ಚಳಿಗಾಲದಲ್ಲಿ ಎಲೆಕೋಸು ತಿನ್ನುವುದರ ಗುಟ್ಟೇನು ಗೊತ್ತಾ?

16-12-22 06:47 pm       Source: Vijayakarnataka   ಡಾಕ್ಟರ್ಸ್ ನೋಟ್

ಎಲ್ಲಾ ಬಗೆಯ ತರಕಾರಿಗಳಿಗಿಂತ ಹಸಿರು ಎಲೆ ತರಕಾರಿ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಅದರಲ್ಲೂ ಎಲೆಕೋಸು ಆರೋಗ್ಯಕ್ಕೆ ತುಂಬಾ ಬೆಸ್ಟ್.

ಚಳಿಗಾಲದಲ್ಲಿ ಮನೆಯ ಹೊರಗಡೆ ಸಂಜೆಯ ಸಮಯದಲ್ಲಿ ಸಣ್ಣದಾಗಿ ಒಂದು ವಾಕಿಂಗ್ ಹೋಗೋಣ ಎಂದುಕೊಂಡರೆ, ಬರುವಾಗ ಗೋಬಿ ಮಂಚೂರಿ ತಿಂದು ಅಥವಾ ಮನೆಗೆ ಪಾರ್ಸೆಲ್ ತರದೆ ಬರಲು ಮನಸ್ಸೇ ಆಗುವುದಿಲ್ಲ. ಏಕೆಂದರೆ ಚುಮುಚುಮು ಚಳಿಯಲ್ಲಿ ಬಿಸಿ ಬಿಸಿ ಗೋಬಿ ಮಂಚೂರಿ ತಿನ್ನುವುದೇ ಒಂದು ಮಜಾ!

ಎಲೆಕೋಸಿನಲ್ಲಿ ಮಾಡುವ ಗೋಬಿ ಮಂಚೂರಿ ದೇಹಕ್ಕೆ ಆರೋಗ್ಯಕರ ಕೂಡ. ನಮ್ಮ ದೇಹದ ತಾಪಮಾನವನ್ನು ನಿರ್ವಹಣೆ ಮಾಡಲು ಇದು ಸಹಾಯವಾಗುತ್ತದೆ. ಇದರ ಜೊತೆಗೆ ಇನ್ನು ಕೆಲವು ಆರೋಗ್ಯ ಪ್ರಯೋಜನಗಳನ್ನು ಕೊಡುತ್ತದೆ. ನಿಮ್ಮ ಆಹಾರ ಪದ್ಧತಿಯಲ್ಲಿ ಎಲೆ ಕೋಸು ಸೇರಿಸಿಕೊಂಡರೆ ಏನು ಲಾಭ ಎಂಬುದನ್ನು ಇಲ್ಲಿ ತಿಳಿಸಿಕೊಡಲಾಗಿದೆ....

ಇದು ಕ್ಯಾನ್ಸರ್ ರೋಗ ನಿವಾರಕ

  • ಎಲೆಕೋಸು ತನ್ನಲ್ಲಿ ಸಲ್ಫರ್ ಹೊಂದಿರುತ್ತದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವನ್ನು ಪಡೆದಿರುತ್ತದೆ. ಸ್ವಲ್ಪ ಕಹಿಯಾಗಿದ್ದರೂ ಕೂಡ ಇದು ನಿಮ್ಮ ದೇಹದಲ್ಲಿ ಜೀವಕೋಶಗಳ ರಕ್ಷಣೆ ಮಾಡುತ್ತದೆ.
  • ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಅಂಶಗಳು ಇದರಲ್ಲಿದ್ದು, ಒಂದು ವೇಳೆ ಮೊದಲೇ ನಿಮ್ಮಲ್ಲಿ ಕ್ಯಾನ್ಸರ್ ಕಾರಕ ಜೀವಕೋಶಗಳು ಇದ್ದರೆ ಅವುಗಳನ್ನು ನಾಶಪಡಿಸುತ್ತದೆ.

ಉರಿಯುತ ನಿವಾರಕ

How Long Is Too Long to Suffer From Back Pain? | Houston Methodist On Health

  • ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿರುವ ಎಲೆಕೋಸು ಆಂಟಿ ಇಂಪ್ಲಮೇಟರಿ ಕೂಡ. ಇದು ದೇಹದಲ್ಲಿ ಉಂಟಾಗುವ ಉರಿಯುತವನ್ನು ತಡೆಯುವ ಶಕ್ತಿ ಪಡೆದಿದೆ.
  • ಬೇರೆ ಬಗೆಯ ತರಕಾರಿಗಳಿಗೆ ಹೋಲಿಸಿದರೆ ಇದರಲ್ಲಿ ಈ ಪ್ರಭಾವ ಜಾಸ್ತಿ ಇದೆ. ಹಾಗಾಗಿ ನಿಮ್ಮ ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು.

ಮೆದುಳಿಗೆ ಸಹಕಾರಿ

Headache Or Migraine: Expert Tells How To Spot The Difference

ಎಲೆಕೋಸು ತನ್ನಲ್ಲಿ ಅಪಾರ ಪ್ರಮಾಣದ ವಿಟಮಿನ್ ಕೆ, ಅಯೋಡಿನ್ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿರುವುದರಿಂದ ಮೆದುಳಿನ ಜೀವಕೋಶಗಳ ಅಭಿವೃದ್ಧಿಯಲ್ಲಿ ನೆರವಾಗುತ್ತದೆ. ಮುಂಬರುವ ದಿನಗಳಲ್ಲಿ ನೆನಪಿನ ಶಕ್ತಿ ಕೊರತೆಯಾಗುವ ಸಾಧ್ಯತೆಯನ್ನು ತಡೆದು ಅಲ್ಜಿಮರ್ ಕಾಯಿಲೆ ಬರದಂತೆ ಮಾಡುತ್ತದೆ.

ಬ್ಲಡ್ ಪ್ರೆಷರ್ ಕಡಿಮೆಯಾಗುತ್ತದೆ

Blood Pressure Numbers: Everything You Need to Know

  • ನಮ್ಮ ದೇಹದಲ್ಲಿ ರಕ್ತದ ಒತ್ತಡ ಉತ್ತಮವಾಗಿ ನಿರ್ವಹಣೆ ಆಗಬೇಕು ಎಂದರೆ ನಾವು ತಿನ್ನುವ ಆಹಾರದಲ್ಲಿ ಕೆಲವೊಂದು ಅಂಶಗಳು ನಮ್ಮ ದೇಹ ಸೇರಬೇಕು.
  • ಅದರಲ್ಲಿ ಪೊಟ್ಯಾಶಿಯಂ ಕೂಡ ಒಂದು. ಎಲೆಕೋಸಿನಲ್ಲಿ ಪೊಟ್ಯಾಶಿಯಂ ಪ್ರಮಾಣ ತುಂಬಾ ಇದೆ. ಇದು ನಮ್ಮ ಬ್ಲಡ್ ಪ್ರೆಷರ್ ಮಟ್ಟ ಕಡಿಮೆಯಾಗುವಂತೆ ಮಾಡುತ್ತದೆ. ಹಾಗಾಗಿ ಎಲೆಕೋಸು ಹೈ ಬಿಪಿ ಇರುವವರಿಗೆ ತುಂಬಾ ಒಳ್ಳೆಯದು.

And Yes You Will Get These Health Benefits With Cabbage! During Winter.