ತುಳಸಿ ಚಹಾದ ಈ ಪ್ರಯೋಜನಗಳನ್ನು ತಿಳಿದರೆ ನೀವು ತಪ್ಪದೆ ದಿನ ಕುಡಿಯುತ್ತೀರಾ!

19-12-22 06:48 pm       Source: Vijayakarnataka   ಡಾಕ್ಟರ್ಸ್ ನೋಟ್

ತುಳಸಿ ಒಂದು ಆರೋಗ್ಯಕರವಾದ ಗಿಡಮೂಲಿಕೆ. ಅನೇಕ ಔಷಧೀಯ ಗುಣಗಳು ಇದರಲ್ಲಿ ಇವೆ. ತುಳಸಿ ಚಹಾ ಕುಡಿಯುವ ಅಭ್ಯಾಸ ಮಾಡಿ ಕೊಂಡು ಅನೇಕ ಆರೋಗ್ಯ ಸಮಸ್ಯೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.

ಒಂದು ಗಿಡಮೂಲಿಕೆ ನಮಗೆ ಔಷಧಿಯಾಗಿ ಕೆಲಸ ಮಾಡುತ್ತದೆ ಎಂದರೆ ಅದರ ಬಗ್ಗೆ ತಿಳಿದುಕೊಳ್ಳುವುದು ಸರ್ವೇಸಾಮಾನ್ಯ. ಹಿತ್ತಲ ಗಿಡ ಮನೆ ಮದ್ದು ಎನ್ನುವ ಮಾತಿನಂತೆ ನಾವು ಪೂಜೆ ಮಾಡಲು ಹಾಕಿದ ತುಳಸಿ ಗಿಡ ನಮಗೆ ಅದೃಷ್ಟದ ಜೊತೆಗೆ ಆರೋಗ್ಯವನ್ನು ಸಹ ಕೊಡುತ್ತದೆ ಎಂದರೆ ನಿಜಕ್ಕೂ ಆಶ್ಚರ್ಯ.

ತುಳಸಿ ತನ್ನಲ್ಲಿ ಅಪಾರವಾದ ಔಷಧೀಯ ಗುಣಲಕ್ಷಣಗಳನ್ನು ಒಳಗೊಂಡಿರುವ ಗಿಡಮೂಲಿಕೆ ಆಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ನಮ್ಮ ದೇಹದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಿ ವಿವಿಧ ಬಗೆಯ ಕಾಯಿಲೆಗಳು ನಮಗೆ ತಗಲದಂತೆ ನೋಡಿಕೊಳ್ಳುತ್ತದೆ. ಆಯುರ್ವೇದ ತಜ್ಞರು ಹೇಳುವ ಹಾಗೆ ಪ್ರತಿಯೊಬ್ಬರೂ ತಮ್ಮ ಮನೆಯ ಅಂಗಳದಲ್ಲಿ ತುಳಸಿ ಗಿಡ ಹಾಕಿಕೊಂಡರೆ ಅದರಿಂದ ಸಿಗುವ ಆರೋಗ್ಯದ ಲಾಭಗಳನ್ನು ತಕ್ಷಣ ಪಡೆಯಬಹುದು.

ತುಳಸಿಯಿಂದ ಚಹಾ ಮಾಡಿ ಕುಡಿಯಿರಿ

Holy Basil: Benefits for Your Brain and Your Body

  • ತುಳಸಿ ಚಹಾ ತಯಾರು ಮಾಡುವುದು ಹೇಗೆ?
  • ತುಳಸಿ ಎಲೆಗಳಿಂದ ನಮ್ಮ ದೇಹಕ್ಕೆ ಪ್ರಯೋಜನವಿದೆ ಎಂದು ಒಮ್ಮೆ ತಿಳಿದರೆ ಅದನ್ನು ಬಿಡಲು ಯಾರಿಗೂ ಮನಸಾಗುವುದಿಲ್ಲ. ತುಳಸಿ ನಮ್ಮ ದೇಹಕ್ಕೆ ಸೋಂಕುಗಳ ವಿರುದ್ಧ ರಕ್ಷಣೆ ಒದಗಿಸುವುದರ ಜೊತೆಗೆ ಕಾಯಿಲೆ ಬರದಂತೆ ತಡೆಯುತ್ತದೆ.
  • ಇಂತಹ  ತುಳಸಿ ಎಲೆಗಳಿಂದ ಚಹಾ ತಯಾರು ಮಾಡಿ ಕುಡಿದರೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಲ್ಲವೇ. ಇದಕ್ಕಾಗಿ ಹಸಿ ತುಳಸಿ ಎಲೆಗಳನ್ನು ಏಳರಿಂದ ಎಂಟು ತೆಗೆದುಕೊಳ್ಳಿ.
  • ಅವುಗಳನ್ನು ಒಂದು ಲೋಟ ನೀರಿನಲ್ಲಿ ಎರಡರಿಂದ ಮೂರು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಈ ಸಮಯದಲ್ಲಿ ನೀರಿನ ಬಣ್ಣ ಬದಲಾಗುತ್ತದೆ. ಇದನ್ನು ಉಗುರು ಬೆಚ್ಚಗಿನ ತಾಪಮಾನದಲ್ಲಿ ಕುಡಿಯಿರಿ.

ಆದರೆ ಒಂದು ವಿಚಾರ ನೆನಪಿರಲಿ

ಒಂದು ವೇಳೆ ನಿಮಗೆ ಅತಿಯಾದ ರಕ್ತಸ್ರಾವ, ವಿಪರೀತ ಹೊಟ್ಟೆ ಹಸಿವು, ಹೊಟ್ಟೆ ಉರಿ ಇತ್ಯಾದಿಗಳು ಇದ್ದರೆ ತುಳಸಿ ಚಹಾ ಕುಡಿಯಬೇಡಿ.

ತುಳಸಿ ಚಹಾ ಕುಡಿದರೆ ಆರೋಗ್ಯಕ್ಕೆ ಸಿಗುವ ಕೆಲವು ಲಾಭಗಳು

Congestive Heart Failure - Modern Heart and Vascular

  • ತುಳಸಿ ಹೃದಯಕ್ಕೆ ಸಹಕಾರಿಯಾದ ಒಂದು ಗಿಡಮೂಲಿಕೆ ಮತ್ತು ಆಹಾರ ಪದಾರ್ಥವಾಗಿದೆ.
  • ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ನಮ್ಮ ರಕ್ತದ ಒತ್ತಡವನ್ನು ನಿಯಂತ್ರಣಕ್ಕೆ ತಂದು ಕೊಲೆಸ್ಟ್ರಾಲ್ ಮಟ್ಟ ಕಂಟ್ರೋಲ್ ತರುತ್ತವೆ.
  • ವಿವಿಧ ಆಯಾಮಗಳಲ್ಲಿ ತುಳಸಿ ಎಲೆಗಳು ನಮ್ಮ ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡಬಲ್ಲವು.

ಇತರ ಪ್ರಯೋಜನಗಳು

Here is why you have a coughing fit and what you can do about it - Times of  India

  • ತಮ್ಮ ಆಂಟಿ ವೈರಲ್ ಗುಣಲಕ್ಷಣಗಳಿಂದ ನಮಗೆ ಬರುವ ಕೆಮ್ಮು, ಕಫ, ನೆಗಡಿ, ಜ್ವರ ಇವುಗಳ ವಿರುದ್ಧ ಹೋರಾಡುತ್ತವೆ.
  • ಆಂಟಿ ಬ್ಯಾಕ್ಟೀರಿಯಲ್ ಆಗಿರುವುದರಿಂದ ಗಂಟಲಿನ ಭಾಗದ ಸೋಂಕು, ಗಂಟಲು ನೋವು ದೂರ ಮಾಡುತ್ತದೆ.
  • ಆಂಟಿ ಫಂಗಲ್ ಆಗಿರುವುದರಿಂದ ಚರ್ಮದ ಅಸ್ವಸ್ಥತೆ ದೂರವಾಗುತ್ತದೆ
  • ಉಸಿರಾಟದ ತೊಂದರೆ ಹೋಗಲಾಡಿಸುತ್ತದೆ
  • ಮಾನಸಿಕ ಒತ್ತಡ ನಿವಾರಕವಾಗಿ ಕೆಲಸ ಮಾಡುತ್ತದೆ
  • ತಲೆನೋವು ಮತ್ತು ಸೈನಸೈಟಿಸ್ ಸಮಸ್ಯೆಗೆ ಪರಿಹಾರವಾಗಿ ಕೆಲಸ ಮಾಡುತ್ತದೆ.

Having Tulsi Tea Is Beneficial To Many Health Issues.